ವಿನೇಶ್‌ ಪೋಗಟರನ್ನು ಅನರ್ಹಗೊಳಿಸಿದ ಬಗ್ಗೆ ಕರ್ನಾಟಕ ಕುಸ್ತಿ ಅಸೋಸಿಯೇಷನ್​​ನ ಮಾಜಿ ಪ್ರ.ಕಾ ನರಸಿಂಹ ಹೇಳಿದ್ದೇನು?

| Updated By: ರಮೇಶ್ ಬಿ. ಜವಳಗೇರಾ

Updated on: Aug 07, 2024 | 4:59 PM

ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ ಇಂದು (ಆಗಸ್ಟ್​​ 07) ಬೆಳಗ್ಗೆ ತೂಕ ಪರೀಕ್ಷೆಯ ವೇಳೆ 50.1 ಕೆಜಿ ತೂಕವಿದ್ದ ಕಾರಣಕ್ಕೆ ವಿನೇಶ್‌ ಪೋಗಟ್‌ ಮಹಿಳೆಯರ 50 ಕೆಜಿ ರೆಸ್ಲಿಂಗ್‌ ಫೈನಲ್‌ನಿಂದ ಅನರ್ಹಗೊಂಡಿದ್ದಾರೆ. ನಿಗದಿತ 50 ಕೆ.ಜಿಗಿಂತ 100 ಗ್ರಾಂ ಹೆಚ್ಚಾಗಿದ್ದರಿಂದ ಒಲಂಪಿಕ್ಸ್​​ನಿಂದಲೇ ಹೊರಬಿದ್ದಾರೆ. ಈ ಮೂಲಕ ಭಾರತದ ಚಿನ್ನ, ಬೆಳ್ಳಿಯ ಕನಸು ನುಚ್ಚು ನೂರಾಗಿದೆ. ಇನ್ನು ಈ ಬಗ್ಗೆ ಕರ್ನಾಟಕ ರಾಜ್ಯ ಕುಸ್ತಿ ಅಸೋಸೇಶನ್​ನ ಮಾಜಿ ಪ್ರಧಾನ ಕಾರ್ಯದರ್ಶೀ ನರಸಿಂಹ ಅವರು ಟಿವಿ9 ಜೊತೆ ಮಾತನಾಡಿದ್ದು, ಏನೆಲ್ಲಾ ಹೇಳಿದ್ದಾರೆ ನೋಡಿ

ಶಿವಮೊಗ್ಗ, (ಆಗಸ್ಟ್​ 07): ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಅವರನ್ನು ಏಕಪಕ್ಷೀಯ ರೀತಿಯಲ್ಲಿ ಸೋಲಿಸಿದ್ದರು. ವಿನೇಶ್ ಈ ಪಂದ್ಯವನ್ನು 5-0 ಅಂತರದಿಂದ ಗೆದ್ದಿದ್ದರು. ಆದರೆ ಈ ಪಂದ್ಯದ ನಂತರ ಆಕೆಗೆ ಮತ್ತು ಭಾರತೀಯ ಅಭಿಮಾನಿಗಳು ಊಹಿಸಲೂ ಸಾಧ್ಯವಾಗದಂತಹ ಘಟನೆ ಸಂಭವಿಸಿದೆ. ಸೆಮಿಫೈನಲ್ ಪಂದ್ಯವನ್ನು ಗೆದ್ದ ನಂತರ ವಿನೇಶ್ ಫೋಗಟ್ ಅವರ ತೂಕವನ್ನು ಪರೀಕ್ಷಿಸಲಾಗಿದ್ದು, ಅವರ ತೂಕದಲ್ಲಿ ನಿಗದಿತ ಮಿತಿಗಿಂತ ಹೆಚ್ಚಳ ಕಂಡುಬಂದಿತ್ತು. ಹೀಗಾಗಿ ವಿನೇಶ್‌ ತಮ್ಮ ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟರು. ಇದರ ಹೊರತಾಗಿಯೂ ಅವರ ತೂಕ 50 ಕೆಜಿ, 100 ಗ್ರಾಂಗಿಂತ ಹೆಚ್ಚಿತ್ತು. ಹೀಗಾಗಿ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಯಿತು. ಇನ್ನು ವಿಚಾರ ತಿಳಿದು ಇಡೀ ಭಾರತವೇ ಆಘಾತಕ್ಕೊಳಗಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಪಂದ್ಯ ಆರಂಭದ ಸಂದರ್ಭದಲ್ಲಿ ತೂಕ ಪರಿಶೀಲನೆ ಮಾಡಬೇಕಿತ್ತು ಅಂತೆಲ್ಲಾ ಅನುಮಾಸ್ಪದ ಮಾತುಗಳು ಕೇಳಿಬರುತ್ತಿವೆ. ಇನ್ನು ಈ ಬಗ್ಗೆ ಕರ್ನಾಟಕ ರಾಜ್ಯ ಕುಸ್ತಿ ಅಸೋಸೇಶನ್​ನ ಮಾಜಿ ಪ್ರಧಾನ ಕಾರ್ಯದರ್ಶೀ ನರಸಿಂಹ ಅವರು ಟಿವಿ9 ಜೊತೆ ಮಾತನಾಡಿದ್ದು, ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.

ಇದನ್ನೂ ಓದಿ: Vinesh Phogat: ಕೂದಲು, ಉಗುರು ಕಟ್.. ರಕ್ತವನ್ನೂ ಹೊರ ತೆಗೆದ್ರು; ತೂಕ ಇಳಿಸಲು ವಿನೇಶ್ ಹೋರಾಟ ಹೇಗಿತ್ತು?

Published on: Aug 07, 2024 04:54 PM