ಇಂದಿನಿಂದ ಮೂರು ದಿನ‌ ಯುವ ಕಾಂಗ್ರೆಸ್ ಚುನಾವಣೆ

ಯುವ ಕಾಂಗ್ರೆಸ್ ಚುನಾವಣೆ ಇಂದಿನಿಂದ ಆರಂಭಗೊಂಡಿದ್ದು, ಸದ್ಯ ಹೆಚ್‌.ಎಸ್ ಮಂಜುನಾಥ್ ಹಾಗೂ ನಲಪಾಡ್ ನಡುವೆ ಪ್ರಬಲ‌ ಪೈಪೋಟಿ ನಡೆಯುತ್ತಿದೆ.

ಇಂದಿನಿಂದ ಮೂರು ದಿನ‌ ಯುವ ಕಾಂಗ್ರೆಸ್ ಚುನಾವಣೆ
ಯುವ ಕಾಂಗ್ರೆಸ್ ಚುನಾವಣೆ
Edited By:

Updated on: Jan 10, 2021 | 12:10 PM

ಬೆಂಗಳೂರು: ಇಂದಿನಿಂದ ಮೂರು ದಿನ‌ಗಳ ಕಾಲ ಯುವ ಕಾಂಗ್ರೆಸ್ ಚುನಾವಣೆ ನಡೆಯಲಿದೆ. ಬೆಂಗಳೂರು ದಕ್ಷಿಣ ಸೇರಿದಂತೆ 12 ಜಿಲ್ಲೆಗಳಲ್ಲಿ ಆನ್‌ಲೈನ್ ಮತದಾನದ ಆರಂಭವಾಗಿದೆ. ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಹೆಚ್‌.ಎಸ್ ಮಂಜುನಾಥ್, ನಲಪಾಡ್ ಹ್ಯಾರಿಸ್ ಮತ್ತು ರಕ್ಷಾ ರಾಮಯ್ಯ ಸ್ಪರ್ಧಿಸಿದ್ದಾರೆ. ಕೊನೇ ಕ್ಷಣದಲ್ಲಿ ಮಿಥುನ್ ರೈ ಕಣದಿಂದ‌ ಹಿಂದೆ ಸರಿದಿದ್ದಾರೆ.

ಸದ್ಯ ಹೆಚ್‌.ಎಸ್ ಮಂಜುನಾಥ್ ಹಾಗೂ ನಲಪಾಡ್ ನಡುವೆ ಪ್ರಬಲ‌ ಪೈಪೋಟಿ ನಡೆಯುತ್ತಿದೆ. ಪ್ರತಿಷ್ಠೆಯ ಕಣವಾಗಿರುವ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಸದಸ್ಯತ್ವ ಮಾಡಿಸಿದವರಿಗೆ ಲಕ್ಷ ,ಲಕ್ಷ ಹಣದ ಹೊಳೆ ಆರೋಪದ ಮಾತುಗಳು ಕೇಳಿಬರುತ್ತಿದೆ.

ಹೆಚ್.ಎಸ್ ಮಂಜುನಾಥ್ ಪರ ರಾಜ್ಯಸಭಾ ಸದಸ್ಯರಾದ ಜಿ.ಸಿ ಚಂದ್ರಶೇಖರ್ ಟೀಮ್ ಲಾಬಿ ಮಾಡುತ್ತಿದ್ದಾರೆ. ಬಿ.ಕೆ‌ ಹರಿಪ್ರಸಾದ್ , ಮಾಜಿ ಡಿಸಿಎಂ‌ ಡಾ. ಜಿ ಪರಮೇಶ್ವರ್, ಮಾಜಿ ಸಂಸದ‌ ಕೆ.ಹೆಚ್ ಮುನಿಯಪ್ಪ ,ಕೆಪಿಸಿಸಿ‌ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಮ್​ಗೆ ಪರೋಕ್ಷ ಬೆಂಬಲ ನೀಡಿದ್ದಾರೆ. ರಕ್ಷಾ ರಾಮಯ್ಯ ಪರ ಶಾಸಕ‌ ರಿಜ್ವಾನ್ ಅಹಮದ್ ಟೀಮ್‌ ಲಾಬಿ ಮಾಡುತ್ತಿದ್ದಾರೆ. ನಲಪಾಡ್ ಪರ ತಂದೆ‌ ಎನ್ ಎ. ಹ್ಯಾರಿಸ್ ಬೆಂಬಲಿಗರಾಗಿ ನಿಂತಿದ್ದಾರೆ.

ಸಿ.ಎಂ​. ಇಬ್ರಾಹಿಂ​ಗೆ ಜೆಡಿಎಸ್​ ಜೊತೆ ಪ್ಯಾರ್! ಕಾಂಗ್ರೆಸ್​ಗೆ ಕೊಡುತ್ತಾರಾ ತಲಾಖ್? -ಕಿರು ಸಂದರ್ಶನ