AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಕೇಟಿಂಗ್‌ ಜೊತೆಗೆ ಹುಲಾಹೂಪ್ ಮಾಡ್ತಾ, ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ 10 ವರ್ಷದ ಪೋರಿ

ಹುಬ್ಬಳ್ಳಿಯಲ್ಲಿ ರಸ್ತೆ ಮೇಲೆ ನಡೆದ ಈ ಪ್ರದರ್ಶನವನ್ನೇ ದಾಖಲಿಸಲು ವಿಶ್ವ ಗಿನ್ನಿಸ್ ಸಂಸ್ಥೆಯ ತಂಡ ಆಗಮಿಸಿತ್ತು. ಸ್ಕೇಟಿಂಗ್‌ನ ಇನ್‌ಲೈನ್‌ ವಿಭಾಗದ 3ಹುಲಾಹೂಪ್​ನ 100ಮೀಟರ್‌ ಗುರಿಯನ್ನು 3ನೇ ಪ್ರಯತ್ನದಲ್ಲಿ 23.35 ಸೆಕೆಂಡ್‌ಗಳಲ್ಲಿ ತಲುಪುವ ಮೂಲಕ ಸುತ್ತಿ ಗಿನ್ನಿಸ್ ದಾಖಲೆಗೆ ಪಾತ್ರರಾಗಿದ್ದಾಳೆ.

ಸ್ಕೇಟಿಂಗ್‌ ಜೊತೆಗೆ ಹುಲಾಹೂಪ್ ಮಾಡ್ತಾ, ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ 10 ವರ್ಷದ ಪೋರಿ
ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ ಸ್ತುತಿ
ಪೃಥ್ವಿಶಂಕರ
| Updated By: ಆಯೇಷಾ ಬಾನು|

Updated on:Jan 10, 2021 | 1:17 PM

Share

ಹುಬ್ಬಳ್ಳಿ: ಆಕೆ ಅಪ್ಪಟ ಉತ್ತರ ಕರ್ನಾಟಕದ ಬಾಲ ಪ್ರತಿಭೆ. ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು. ವಿಭಿನ್ನ ಕ್ರೀಡೆಯಲ್ಲಿ ಸಾಧನೆ ತೋರಿಸಿ ಜಗತ್ತಿಗೆ ತನ್ನ ಪವರ್ ತೋರಿಸಿದ್ದಾಳೆ. ಈಕೆಯ ಹೆಸರು ಸ್ತುತಿ. 4ನೇ ತರಗತಿ ಓದುತ್ತಿರುವ ಈಕೆ ಹುಬ್ಬಳ್ಳಿಯ ನಿವಾಸಿ. ಸ್ಕೇಟಿಂಗ್‌ ಜೊತೆಗೆ  ಹುಲಾಹೂಪ್ ಮಾಡ್ತಾ ಎಲ್ಲರ ಗಮನ ಸೆಳೆದಿದ್ದಾಳೆ. ಅಷ್ಟೇ ಅಲ್ಲ ಗಿನ್ನಿಸ್ ವರ್ಲ್ಡ್​ ರಿಕಾರ್ಡ್‌ನಲ್ಲಿ ತನ್ನ ಹೆಸರನ್ನ ದಾಖಲಿಸಿದ್ದಾಳೆ.

ಹುಬ್ಬಳ್ಳಿಯಲ್ಲಿ ರಸ್ತೆ ಮೇಲೆ ನಡೆದ ಈ ಪ್ರದರ್ಶನವನ್ನೇ ದಾಖಲಿಸಲು ವಿಶ್ವ ಗಿನ್ನಿಸ್ ಸಂಸ್ಥೆಯ ತಂಡ ಆಗಮಿಸಿತ್ತು. ಸ್ಕೇಟಿಂಗ್‌ನ ಇನ್‌ಲೈನ್‌ ವಿಭಾಗದ 3 ಹುಲಾಹೂಪ್​ನ 100 ಮೀಟರ್‌ ಗುರಿಯನ್ನು 3ನೇ ಪ್ರಯತ್ನದಲ್ಲಿ 23.35 ಸೆಕೆಂಡ್‌ಗಳಲ್ಲಿ ತಲುಪುವ ಮೂಲಕ ಸುತ್ತಿ ಗಿನ್ನಿಸ್ ದಾಖಲೆಗೆ ಪಾತ್ರರಾಗಿದ್ದಾಳೆ.

ಹುಬ್ಬಳ್ಳಿಯ ಹತ್ತು ವರ್ಷದ ಹುಡುಗಿ ಉತ್ತಮ ಸಾಧನೆ ಮಾಡಿ ವಿಶ್ವದಲ್ಲೇ ನಂಬರ್‌ ಒನ್‌ ಅನ್ನೋ ಪಟ್ಟ ಗಿಟ್ಟಿಸಿ ಗಿನ್ನೆಸ್ ಬುಕ್‌ನಲ್ಲಿ ಹೆಸರು ಪಡೆದಿದ್ದಾಳೆ. ಈ ಬಾಲಕಿ ಮತ್ತಷ್ಟು ಸಾಧನೆ ಮಾಡಿ ಕರುನಾಡಿನ ಕಿರ್ತಿ ಬೆಳಗಲಿ ಅನ್ನೋದೆ ನಮ್ಮ ಆಶಯ.

World Record: ಏಕಕಾಲದಲ್ಲಿ ಎರಡೂ ಕೈಗಳಿಂದ ಬರೆಯೋದರಲ್ಲಿ ನಿಪುಣೆ ಈ ಚತುರೆ..

Published On - 12:25 pm, Sun, 10 January 21