
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿ ದಾಪುಗಾಲಿಡುತ್ತಾ ಮುಂದೆ ಸಾಗುತ್ತಲ್ಲೇ ಇದೆ. ಸತತವಾಗಿ ಶತಕ ಬಾರಿಸುತ್ತಿರುವ ಮಹಾಮಾರಿ ಇಂದು ಕೂಡ ಶತಕದ ಗಡಿದಾಟಿದ್ದು ರಾಜ್ಯದಲ್ಲಿ ಇಂದು 161 ಹೊಸ ಕೇಸ್ಗಳು ಪತ್ತೆಯಾಗಿವೆ. ಇದರಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕೇಸ್ (61) ಪತ್ತೆಯಾಗಿದೆ.
ಕೊರೊನಾದಿಂದ ಇಬ್ಬರ ಸಾವು
ಇದರಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5,921ಕ್ಕೆ ಏರಿದೆ. ರಾಜ್ಯದಲ್ಲಿ ಇಂದು ಕೊರೊನಾದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಮಹಾಮಾರಿಯಿಂದ ಮೃತಪಟ್ಟವರ ಸಂಖ್ಯೆ 66ಕ್ಕೆ ತಲುಪಿದೆ. ಈ ಮಧ್ಯೆ ಸಂತಸದ ಸಂಗತಿಯೆಂದರೆ ಚಿಕಿತ್ಸೆಗೆಂದು ದಾಖಲಾಗಿದ್ದ ಸುಮಾರು 2,605 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಕೂಡ ಆಗಿದ್ದಾರೆ.