ಬೆಂಗಳೂರು, (ಆಗಸ್ಟ್, 03): ಪ್ರಮುಖ ಮಾರ್ಕೆಟಿಂಗ್ ಡೇಟಾ ಆಂಡ್ ಅನಾಲಿಟಿಕ್ಸ್ ಕಂಪನಿಯಾದ ಕಾಂತಾರ್ ‘ಬ್ರ್ಯಾಂಡ್ ಫುಟ್‌ಪ್ರಿಂಟ್ 2023 ಇಂಡಿಯಾ’ ವರದಿಯನ್ನು ಪ್ರಕಟಿಸಿದೆ. ಇದರಲ್ಲಿ ನಮ್ಮ ರಾಜ್ಯದ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ(KMF ) ನಂದಿನಿ(Nandini Brand) ಬ್ರ್ಯಾಂಡ್ ಒಂದು ಸ್ಥಾನ ಮೇಲಕ್ಕೇರಿದೆ. ಈ ಮೊದಲ 6ನೇ ಸ್ಥಾನದಲ್ಲಿದ್ದ ನಂದಿನ 5ನೇ ಸ್ಥಾನಕ್ಕೆ ಜಿಗಿದೆ. ಇದರೊಂದಿಗೆ ಹಲವಾರು ವಿವಾದಗಳ ನಡುವೆಯೂ ನಂದಿನಿ ಟಾಪ್ 10 ಬ್ರ್ಯಾಂಡ್‌ಗಳಲ್ಲಿ ಸ್ಥಾನ ಕಾಪಾಡಿಕೊಂಡಿದೆ. ಅಮುಲ್ ಹೊರತುಪಡಿಸಿ ಟಾಪ್ 10 ಬ್ರಾಂಡ್‌ಗಳ ಪಟ್ಟಿಯಲ್ಲಿ ನಂದಿನಿ ಏಕೈಕ ಡೈರಿ ಬ್ರ್ಯಾಂಡ್ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ. ಇನ್ನು ನಂದಿನಿಗೆ ಪೈಪೋಟಿ ನೀಡುತ್ತಿರುವ ಅಮುಲ್ 3ನೇ ಸ್ಥಾನಕ್ಕೆ ಕುಸಿದಿದ್ದರೆ.,ಪಾರ್ಲೆ ಬಿಸ್ಕೆಟ್ ಮೊದಲ ಸ್ಥಾನದಲ್ಲಿದೆ.
7449 ಮಿಲಿಯನ್ ಸಿಪಿಆರ್‌ನೊಂದಿಗೆ ಪಾರ್ಲೆ ಮೊದಲ ಸ್ಥಾನ ಪಡೆದರೆ, ಬ್ರಿಟಾನಿಯಾ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಅಮುಲ್ ಮೂರನೇ ಸ್ಥಾನ ಗಳಿಸಿದರೆ, ಕ್ಲಿನಿಕ್ ಪ್ಲಸ್ ನಾಲ್ಕನೇ ಸ್ಥಾನದಲ್ಲಿದೆ. ಟಾಟಾ ಐದನೇ ಸ್ಥಾನದಲ್ಲಿ ನಿಂತಿದೆ. ಆರನೇ ಸ್ಥಾನದಲ್ಲಿ ನಮ್ಮ ಕರ್ನಾಟಕದ ಡೈರಿ ಬ್ರ್ಯಾಂಡ್ ನಂದಿನಿ ಇದೆ.
ಕನ್ಸ್ಯೂಮರ್ ರೀಚ್ ಪಾಯಿಂಟ್‌ಗಳ (ಸಿಆರ್‌ಪಿ) ಆಧಾರದ ಮೇಲೆ ಪ್ರತಿ ಬ್ರ್ಯಾಂಡ್ ಅನ್ನು ಶ್ರೇಣೀಕರಿಸಿದೆ. ದೇಶದಲ್ಲಿರುವ ಜನರು, ಆ ಪೈಕಿ ನಿರ್ದಿಷ್ಟ ಬ್ರ್ಯಾಂಡ್ ಖರೀದಿ ಮಾಡುವ ಜನರ ಸಂಖ್ಯೆ, 1 ವರ್ಷದಲ್ಲಿ ಅದೇ ಉತ್ಪನ್ನವನ್ನು ಜನರು ಎಷ್ಟು ಬಾರಿ ಖರೀದಿಸಿದ್ದಾರೆ ಎನ್ನುವುದನ್ನು ಪರಿಗಣಿಸಿಕೊಂಡು ಈ ವರದಿಯನ್ನು ಮಾಡಲಾಗುತ್ತದೆ. ನವೆಂಬರ್ 2021 ಮತ್ತು ಅಕ್ಟೋಬರ್ 2022 ರ ನಡುವಿನ 52 ವಾರಗಳ ಅವಧಿಯಲ್ಲಿ ಸಂಗ್ರಹಿಸಿದ ಡೇಟಾವನ್ನು ಆಧರಿಸಿ ಈ ಶ್ರೇಯಾಂಕಗಳನ್ನು ನಿರ್ಧರಿಸಲಾಗಿದೆ.
ನಂದಿನಿ ಬ್ರಾಂಡ್‌ನಲ್ಲಿ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ KMF ಶೀಘ್ರದಲ್ಲೇ ಚಾಕೊಲೇಟ್ (Chocolate) ಮಾರಾಟವನ್ನು ಪ್ರಾರಂಭಿಸಲಿದೆ ಎಂದು ವರದಿಗಳು ತಿಳಿಸಿವೆ. ನಂದಿನಿ ಬ್ರಾಂಡ್ ಈಗಾಗಲೇ ಕರ್ನಾಟಕ ಮತ್ತು ದೇಶದ ಹಲವು ಭಾಗಗಳಲ್ಲಿ ಪ್ರಸಿದ್ಧವಾಗಿದ್ದು, ನಂದಿನಿ ಬ್ರಾಂಡ್‌ನಡಿಯಲ್ಲಿ ಹಾಲಿನಿಂದ ತಯಾರಿಸಿ ಅನೇಕ ಸಿಹಿತಿಂಡಿಗಳನ್ನು ದೇಶಾದ್ಯಂತ ಮಾರಾಟ ಮಾಡಲಾಗುತ್ತಿದೆ. ಕೆಎಂಎಫ್ ನಂದಿನಿ ಬ್ರಾಂಡ್ ಹೆಸರಿನಲ್ಲಿ ಬಾದಾಮ್ ಬರ್ಫಿ, ಗೋಡಂಬಿ ಬರ್ಫಿ, ಚಾಕೊಲೇಟ್ ಬರ್ಫಿ, ಮೈಸೂರು ಪಾಕ್, ಬೇಸನ್ ಲಾಡು, ಡ್ರೈ ಫ್ರೂಟ್ ಬರ್ಫಿ, ಧಾರವಾಡ ಪೇಡಾ, ಮಿಲ್ಕ್ ಪೇಡಾ, ಜಾಮೂನ್, ರಸಗೊಲ್ಲ ಸೇರಿದಂತೆ ಹಲವು ಸಿಹಿತಿಂಡಿಗಳನ್ನು ಮಾರಾಟ ಮಾಡಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Thu, 3 August 23