ಮಾರುಕಟ್ಟೆಗೆ ಬರಲಿದೆ ನಂದಿನಿ ಚಾಕೊಲೇಟ್; ವಂದೇ ಭಾರತ್​ ರೈಲಿನಲ್ಲಿಯೂ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಚಿಂತನೆ

ನಂದಿನಿ ಉತ್ಪನ್ನಗಳಾದ ಲಸ್ಸಿ, ಸುವಾಸನೆಯ ಹಾಲು, ಸಿಹಿತಿಂಡಿಗಳು ಮತ್ತು ಮೊಸರನ್ನು ವಂದೇ ಭಾರತ್ ರೈಲುಗಳಲ್ಲಿ ಮಾರಾಟ ಮಾಡಲು ಕೆಎಂಎಫ್ ಚಿಂತನೆ ನಡೆಸಿರುವುದಾಗಿ ವರದಿಯಾಗಿದೆ.

ಮಾರುಕಟ್ಟೆಗೆ ಬರಲಿದೆ ನಂದಿನಿ ಚಾಕೊಲೇಟ್; ವಂದೇ ಭಾರತ್​ ರೈಲಿನಲ್ಲಿಯೂ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಚಿಂತನೆ
ಕೆಎಂಎಪ್ ಉತ್ಪನ್ನಗಳುImage Credit source: KMF
Follow us
| Updated By: ಗಣಪತಿ ಶರ್ಮ

Updated on: Aug 02, 2023 | 6:06 PM

ಬೆಂಗಳೂರು: ನಂದಿನಿ ಬ್ರಾಂಡ್‌ನಲ್ಲಿ (Nandini Brand) ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕರ್ನಾಟಕ ಹಾಲು ಒಕ್ಕೂಟ (KMF) ಶೀಘ್ರದಲ್ಲೇ ಚಾಕೊಲೇಟ್ (Chocolate) ಮಾರಾಟವನ್ನು ಪ್ರಾರಂಭಿಸಲಿದೆ ಎಂದು ವರದಿಗಳು ತಿಳಿಸಿವೆ. ನಂದಿನಿ ಬ್ರಾಂಡ್ ಈಗಾಗಲೇ ಕರ್ನಾಟಕ ಮತ್ತು ದೇಶದ ಹಲವು ಭಾಗಗಳಲ್ಲಿ ಪ್ರಸಿದ್ಧವಾಗಿದ್ದು, ನಂದಿನಿ ಬ್ರಾಂಡ್‌ನಡಿಯಲ್ಲಿ ಹಾಲಿನಿಂದ ತಯಾರಿಸಿ ಅನೇಕ ಸಿಹಿತಿಂಡಿಗಳನ್ನು ದೇಶಾದ್ಯಂತ ಮಾರಾಟ ಮಾಡಲಾಗುತ್ತಿದೆ. ಕೆಎಂಎಫ್ ನಂದಿನಿ ಬ್ರಾಂಡ್ ಹೆಸರಿನಲ್ಲಿ ಬಾದಾಮ್ ಬರ್ಫಿ, ಗೋಡಂಬಿ ಬರ್ಫಿ, ಚಾಕೊಲೇಟ್ ಬರ್ಫಿ, ಮೈಸೂರು ಪಾಕ್, ಬೇಸನ್ ಲಾಡು, ಡ್ರೈ ಫ್ರೂಟ್ ಬರ್ಫಿ, ಧಾರವಾಡ ಪೇಡಾ, ಮಿಲ್ಕ್ ಪೇಡಾ, ಜಾಮೂನ್, ರಸಗೊಲ್ಲ ಸೇರಿದಂತೆ ಹಲವು ಸಿಹಿತಿಂಡಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಚಾಕೊಲೇಟ್‌ಗಳ ಜೊತೆಗೆ ಮಕ್ಕಳಿಗೆ ಪೌಷ್ಟಿಕ ಆಹಾರವನ್ನೂ ಮಾರಾಟ ಮಾಡಲು ಕೆಎಂಎಫ್ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಪನೀರ್ ನಿಪ್ಪಟ್ಟು, ಕಡಲೆಕಾಯಿ ಚಿಕ್ಕಿ, ಕಡಲೆಕಾಯಿ ಸಿಹಿತಿಂಡಿಗಳು, ವಿಶೇಷ ಮಿಲ್ಕ್ ಬರ್ಫಿ ಮತ್ತು ಮೂರರಿಂದ ನಾಲ್ಕು ವಿಧದ ಚಾಕೊಲೇಟ್‌ಗಳನ್ನು ಮಾರಾಟ ಮಾಡಲು ಕೆಎಂಎಫ್ ಚಿಂತನೆ ನಡೆಸಿದೆ.

ವಂದೇ ಭಾರತ್ ರೈಲುಗಳಲ್ಲಿಯೂ ಸಿಗಲಿವೆ ಕೆಎಂಎಫ್ ಉತ್ಪನ್ನಗಳು

ನಂದಿನಿ ಉತ್ಪನ್ನಗಳಾದ ಲಸ್ಸಿ, ಸುವಾಸನೆಯ ಹಾಲು, ಸಿಹಿತಿಂಡಿಗಳು ಮತ್ತು ಮೊಸರನ್ನು ವಂದೇ ಭಾರತ್ ರೈಲುಗಳಲ್ಲಿ ಮಾರಾಟ ಮಾಡಲು ಕೆಎಂಎಫ್ ಚಿಂತನೆ ನಡೆಸಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Vande Bharat Express; ಬೆಂಗಳೂರು ಹೈದರಾಬಾದ್ ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲಿಗೆ ಶೀಘ್ರ ಚಾಲನೆ

ಕೆಎಂಎಫ್ ಕರ್ನಾಟಕದಲ್ಲಿ ದಿನಕ್ಕೆ ಸುಮಾರು 75 ರಿಂದ 85 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತದೆ. ವಿವಿಧ ಡೈರಿ ಉತ್ಪನ್ನಗಳನ್ನು ತಯಾರಿಸಲು ಸುಮಾರು 9 ಲಕ್ಷ ಲೀಟರ್ ಹಾಲನ್ನು ಬಳಸಲಾಗುತ್ತದೆ. ಉತ್ಪನ್ನಗಳ ಪೂರೈಕೆಯನ್ನು ಹೆಚ್ಚಿಸುವುದಕ್ಕಾಗಿ ಡೈರಿ ಉತ್ಪನ್ನಗಳನ್ನು ತಯಾರಿಸಲು ದಿನಕ್ಕೆ 12 ಲಕ್ಷ ಲೀಟರ್ ಹಾಲನ್ನು ಬಳಸಲು ಕೆಎಂಎಫ್ ಮುಂದಾಗಿದೆ ಎಂದು ವರದಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ