ಧಾರವಾಡ: ಗರಗ ಖಾದಿ ಕೇಂದ್ರಕ್ಕೆ ಶುಕ್ರದೆಸೆ -ಬಟ್ಟೆಯಷ್ಟೇ ಅಲ್ಲ; ರಾಷ್ಟ್ರಧ್ವಜ ತಯಾರಿಕೆಗೂ ಸಿಕ್ತು ಗ್ರೀನ್ ಸಿಗ್ನಲ್!

76ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿರುವ ನಮ್ಮ ಭಾರತ ದೇಶಕ್ಕೆ ಬಹತೇಕ ಅದರಷ್ಟೇ ಹಳೆಯದಾದ ಗರಗ ಖಾದಿ ಕೇಂದ್ರಕ್ಕೆ ಅಂತೂ ಈಗ ಶುಕ್ರದೆಸೆ ಬಂದಿದೆ. ಇದುವರೆಗೆ ಧ್ವಜಕ್ಕೆ ಬೇಕಾದ ಬಟ್ಟೆಯನ್ನು ಮಾತ್ರವೇ ತಯಾರಿಸುತ್ತಿದ್ದ ಗರಗ್ ಗ್ರಾಮದಲ್ಲಿ ಇನ್ನು ಮುಂದೆ ತ್ರಿವರ್ಣ ಧ್ವಜವನ್ನು ತಯಾರಿಸಲೂಬಹುದಾಗಿದೆ.

ಧಾರವಾಡ: ಗರಗ ಖಾದಿ ಕೇಂದ್ರಕ್ಕೆ ಶುಕ್ರದೆಸೆ -ಬಟ್ಟೆಯಷ್ಟೇ ಅಲ್ಲ; ರಾಷ್ಟ್ರಧ್ವಜ ತಯಾರಿಕೆಗೂ ಸಿಕ್ತು ಗ್ರೀನ್ ಸಿಗ್ನಲ್!
ಗರಗ -ಬಟ್ಟೆಯಷ್ಟೇ ಅಲ್ಲ; ರಾಷ್ಟ್ರಧ್ವಜ ತಯಾರಿಕೆಗೂ ಸಿಕ್ತು ಗ್ರೀನ್ ಸಿಗ್ನಲ್!
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಸಾಧು ಶ್ರೀನಾಥ್​

Updated on: Aug 02, 2023 | 5:38 PM

ಧಾರವಾಡ, ಆಗಸ್ಟ್​​ 2: ಇಡೀ ದೇಶದಲ್ಲಿ ಹಾರಾಡುವ ಖಾದಿಯ ತ್ರಿವರ್ಣ ಧ್ವಜದ (national flag) ಬಟ್ಟೆ ತಯಾರಾಗುವುದು ಧಾರವಾಡ (Dharwad) ತಾಲೂಕಿನ ಗರಗ ಗ್ರಾಮದಲ್ಲಿ. ಇಷ್ಟು ದಿನ ಧ್ವಜಕ್ಕೆ ಬೇಕಾದ ಬಟ್ಟೆಯನ್ನು ಮಾತ್ರವೇ ತಯಾರಿಸುತ್ತಿದ್ದ ಗರಗ್ ಗ್ರಾಮದಲ್ಲೀಗ ತ್ರಿವರ್ಣ ಧ್ವಜ ತಯಾರಾಗುತ್ತಿದೆ. ಇತ್ತೀಚೆಗಷ್ಟೇ ಇದಕ್ಕೆ ಅನುಮತಿ ಸಿಕ್ಕಿದ್ದೇ ಇದಕ್ಕೆ ಕಾರಣ. ಇದರಿಂದಾಗಿ ಗ್ರಾಮದ ಜನರಿಗೆ ತಮ್ಮೂರಿನ (Garag Khadi center) ಈ ಧ್ವಜದ ಬಗ್ಗೆ ಹೆಮ್ಮೆ ಮತ್ತಷ್ಟು ಹೆಚ್ಚಾಗಿದ್ದರೆ, ಅತ್ತ ತ್ರಿವರ್ಣ ಧ್ವಜ ತಯಾರಿಸೋ ಸಿಬ್ಬಂದಿಗೆ ಸಂತಸ ಇಮ್ಮಡಿಯಾಗಿದೆ ).

ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ 1954ರಲ್ಲಿ ಖಾದಿ ಕೇಂದ್ರ ಸ್ಥಾಪನೆಯಾಗಿತ್ತು. ಅಂದಿನಿಂದಲೇ ಈ ಸಂಘ ರಾಷ್ಟ್ರ ಧ್ವಜಕ್ಕೆ ಬೇಕಾದ ಬಟ್ಟೆಯನ್ನು ನೇಯ್ದುಕೊಡುವ ಅಧಿಕೃತ ಸಂಸ್ಥೆಯ ಮಾನ್ಯತೆ ಪಡೆದುಕೊಂಡಿತ್ತು. ಬಟ್ಟೆಗೆ ಬೇಡಿಕೆ ಹೆಚ್ಚಾದಂತೆಲ್ಲ ಈ ಸಂಘದಲ್ಲಿ ದುಡಿಯುವವರ ಸಂಖ್ಯೆಯೂ ಬೆಳೆಯುತ್ತ ಹೋಗಿತ್ತು. ನಂತರ 1974ರಲ್ಲಿ ಈ ಸಂಘವನ್ನು ನಾಲ್ಕು ಭಾಗಗಳನ್ನಾಗಿ ವಿಭಜಿಸಿ ಧಾರವಾಡ ತಾಲೂಕಿನ ಹೆಬ್ಬಳ್ಳಿ, ಅಮ್ಮಿನಬಾವಿಯಲ್ಲಿಯೂ ಬಟ್ಟೆ ನೇಯ್ಗೆ ಆರಂಭಿಸಲಾಗಿತ್ತು. ಆದರೆ ಇಲ್ಲಿನ ಬಟ್ಟೆಯಲ್ಲಿ ರಾಷ್ಟ್ರಧ್ವಜ ತಯಾರಾಗುತ್ತಿತ್ತಾದರೂ ಯಾವತ್ತೂ ಸಹ ಗರಗ ಕೇಂದ್ರದಲ್ಲಿ ರಾಷ್ಟ್ರ ಧ್ವಜ ತಯಾರಿಸಲು ಅಧಿಕೃತ ಅನುಮತಿ ಲಭಿಸಿರಲಿಲ್ಲ. ಇಲ್ಲಿ ಬಟ್ಟೆ ತಯಾರಿಸಿ ಮುಂಬೈನಲ್ಲಿರೋ ಖಾದಿ ಸಂಘಕ್ಕೆ ರವಾನಿಸಲಾಗುತ್ತಿತ್ತು. ಅಲ್ಲಿ ತ್ರಿವರ್ಣ ಧ್ವಜ ತಯಾರಾಗಿ, ಅಲ್ಲಿಂದ ರಾಷ್ಟ್ರದ ವಿವಿಧ ಕಡೆಗಳಿಗೆ ರವಾನೆಯಾಗುತ್ತಿತ್ತು. ಹೀಗಾಗಿ ಗರಗ ಖಾದಿ ಸಂಘದವರು ರಾಷ್ಟ್ರ ಧ್ವಜದ ಜೊತೆಗೆ ಬೇರೆ ಬೇರೆ ಖಾದಿ ಉತ್ಪನ್ನಗಳನ್ನು ಮಾಡಿ ಜೀವನ ನಡೆಸುತ್ತಿದ್ದರು. ಆದರೆ ತಾವು ಕೂಡ ಸ್ವತಂತ್ರವಾಗಿ ಧ್ವಜ ತಯಾರಿಸಬೇಕು ಎನ್ನುವ ಬಯಕೆ ಬಹಳ ದಿನಗಳಿಂದಲೇ ಇತ್ತು. ಅದೀಗ ಕೂಡಿ ಬಂದಿದೆ. ಕಳೆದ ತಿಂಗಳು ಕೇಂದ್ರ ಖಾದಿ ಆಯೋಗ ಮತ್ತು ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ನಿಂದ ಅನುಮತಿ ಸಿಕ್ಕಿದ್ದು, ಇಲ್ಲಿಯೇ ಈಗ ಬಟ್ಟೆಗೆ ಬಣ್ಣ ಹಾಕುವುದಷ್ಟೇ ಅಲ್ಲ, ಇಲ್ಲಿಯೇ ಧ್ವಜ ತಯಾರಿಸಿ ಬೇಡಿಕೆಗೆ ಅನುಗುಣವಾಗಿ ರವಾನೆ ಮಾಡಲಾಗುತ್ತಿದೆ. ಇದರಿಂದಾಗಿ ಕೇಂದ್ರದ ಸಿಬ್ಬಂದಿಯಲ್ಲಿ ಸಾಕಷ್ಟು ಖುಷಿ ಕಂಡು ಬರುತ್ತಿದೆ.

ಈ ಸಂಘಕ್ಕೆ ಒಂದು ಕಾಲಕ್ಕೆ ಬೇಡಿಕೆ ಇದ್ದಾಗ 450 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ಮಾಡುತ್ತಿದ್ದರು. ಆದರೆ ಕಳೆದ ವರ್ಷ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪಾಲಿಸ್ಟರ್ ಧ್ವಜಗಳ ಬಳಕೆಗೂ ಕೇಂದ್ರ ಸರಕಾರ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಸಂಘ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿಯೇ ಹೋರಾಟ ಮಾಡಬೇಕಾಗಿತ್ತು. ಆದರೆ ಇದೇ ಸಂಘಕ್ಕೆ ಈಗ ಮತ್ತೆ ಬೇಡಿಕೆ ಬಂದಿದೆ. ಇದೀಗ ಇಲ್ಲಿಯೇ ಧ್ವಜ ತಯಾರಿಕೆಗೆ ಅನುಮತಿ ಸಿಕ್ಕಿದ್ದಕ್ಕೆ ನಿತ್ಯವೂ ಧ್ವಜ ತಯಾರಿಕೆಯ ಕೆಲಸ ಭರದಿಂದ ಸಾಗಿದೆ. ಇದೀಗ ಆಗಸ್ಟ್ 15 ಸಮೀಪಿಸಿರೋದ್ರಿಂದ ಸಾಕಷ್ಟು ಪ್ರಮಾಣದಲ್ಲಿ ಬೇಡಿಕೆ ಇದೆ. ಇದೀಗ 2 ಅಡಿ ಅಗಲ 3 ಅಡಿ ಉದ್ದದ ಧ್ವಜ ತಯಾರಿಕೆಗೆ ಮಾತ್ರ ಅನುಮತಿ ಸಿಕ್ಕಿದ್ದು, ಆ ಗಾತ್ರದ ಧ್ವಜಗಳ ತಯಾರಿ ಭರದಿಂದ ಸಾಗಿದೆ. ಇದರಿಂದಾಗಿ ಸಂಘದಲ್ಲಿ ಈಗ ಮತ್ತೆ ಸಂಚಲನ ಶುರುವಾಗಿದ್ದು, ಕಳೆದ ವರ್ಷ ಸಂಕಷ್ಟದಲ್ಲಿದ್ದ ಸಂಸ್ಥೆ ಅಂಗಳದಲ್ಲಿ ಈಗ ಸಂಭ್ರಮ ಮನೆ ಮಾಡಿದೆ.

ರಾಷ್ಟ್ರಧ್ವಜ ತಯಾರಿಸಬೇಕಾದರೆ ಅದಕ್ಕೆ ಅದರದ್ದೇ ಆದ ನಿಯಮಗಳಿವೆ. ಅವುಗಳೆಲ್ಲವನ್ನೂ ಪಾಲಿಸಿದರಷ್ಟೇ ಅನುಮತಿ ಸಿಗುತ್ತೆ. ಇದುವರೆಗೂ ಧ್ವಜದ ಬಟ್ಟೆಯನ್ನಷ್ಟೇ ತಯಾರಿಸುತ್ತಿದ್ದ ಸಂಸ್ಥೆಯಲ್ಲೀಗ ತಿರಂಗಾ ಅರಳುತ್ತಿದೆ. ಇದರಿಂದಾಗಿ ಸಹಜವಾಗಿ ಸಿಬ್ಬಂದಿಗೆ ಖುಷಿಯಾಗಿದೆ. ಇನ್ನು ಮುಂದೆ ಗರಗ್ ಖಾದಿ ಸಂಘದಲ್ಲಿ ತಯಾರಾಗೋ ಧ್ವಜಗಳು ರಾಷ್ಟ್ರದಾದ್ಯಂತ ಹಾರಾಡಲು ಸಿದ್ಧವಾಗಿರೋದು ಸಂತಸದ ವಿಚಾರವೇ ಸರಿ.

ಇನ್ನು ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಸಂಘದ ಅಧ್ಯಕ್ಷ ಈಶ್ವಪ್ಪ ಇಟಗಿ, ನಾವು ಯಾರ ಸಹಾಯ ಪಡೆಯದೇ ಇದೀಗ ರಾಷ್ಟ್ರಧ್ವಜ ತಯಾರು ಮಾಡೋದನ್ನು ಕಲಿತಿದ್ದೇವೆ. ಇದುವರೆಗೂ ನಾವು ಧ್ವಜಕ್ಕೆ ಬೇಕಾಗಿದ್ದ ಖಾದಿ ಬಟ್ಟೆಯನ್ನಷ್ಟೇ ತಯಾರಿಸುತ್ತಿದ್ದೆವು. ಆದರೆ ಇದೀಗ ಅದೇ ಬಟ್ಟೆಯಿಂದ ನಮ್ಮ ಹೆಮ್ಮೆಯ ರಾಷ್ಟ್ರಧ್ವಜವನ್ನು ಕೂಡ ತಯಾರಿಸುತ್ತಿದ್ದೇವೆ. ಇಲ್ಲಿನ ನಮ್ಮ ಸಿಬ್ಬಂದಿಯೇ ಎಲ್ಲವನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನೀಡಿರೋ ಗೈಡ್ಲೈನ್ ಪ್ರಕಾರವೇ ತುಂಬಾನೇ ಉತ್ತಮ ಗುಣಮಟ್ಟದ ಖಾದಿ ಧ್ವಜವನ್ನು ತಯಾರಿಸುತ್ತಿದ್ದೇವೆ. ಇದೀಗ ನಮ್ಮ ಕೇಂದ್ರದಲ್ಲಿ ತಯಾರಾದ ಧ್ವಜಗಳು ರಾಷ್ಟ್ರಾದ್ಯಂತ ಹಾರಾಡುತ್ತವೆ ಅನ್ನೋದನ್ನು ನೆನೆಸಿಕೊಂಡರೆ ಖುಷಿಯಾಗುತ್ತದೆ ಅನ್ನುತ್ತಾರೆ.

ಇನ್ನು ಟಿವಿ-9 ಜೊತೆಗೆ ಮಾತನಾಡಿದ ಸ್ಥಳೀಯ ಕಿರಣ ಬುಲಬುಲೆ, ಇದೀಗ ನಮ್ಮೂರಲ್ಲಿಯೇ ರಾಷ್ಟ್ರಧ್ವಜ ತಯಾರಾಗುತ್ತಿರೋದು ನಮಗೆಲ್ಲ ಹೆಮ್ಮೆ ತಂದಿದೆ. ಇದರ ಹಿಂದೆ ಸಾಕಷ್ಟು ಜನರ ಶ್ರಮ ಹಾಗೂ ಪ್ರಯತ್ನವಿದೆ. ರಾಷ್ಟ್ರಧ್ವಜ ತಯಾರು ಮಾಡೋದು ಅಂದರೆ ಅದು ನಿಜಕ್ಕೂ ತಪಸ್ಸು ಇದ್ದಂತೆ. ಕಳೆದ ವರ್ಷ ಪ್ಲಾಸ್ಟಿಕ್ ಧ್ವಜಗಳಿಗೆ ಕೇಂದ್ರ ಸರಕಾರ ಅನುಮತಿ ನೀಡಿದಾಗ ಇಲ್ಲಿನ ಖಾದಿ ಸಂಘಕ್ಕೆ ಸಾಕಷ್ಟು ಸಂಕಷ್ಟ ಎದುರಾಗಿತ್ತು. ಇನ್ನೇನು ಈ ಸಂಘದ ಕಥೆ ಮುಗಿದೇ ಹೋಯಿತು ಅನ್ನುವಷ್ಟರಲ್ಲಿ ಇದೀಗ ತಿರಂಗಾ ತಯಾರಿಸಲು ಇದಲ್ಲಿಯೇ ಅನುಮತಿ ಸಿಕ್ಕಿದ್ದು ಮತ್ತೆ ಜೀವ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಗಾತ್ರದ ಧ್ವಜ ತಯಾರಿಕೆಯೂ ಇಲ್ಲಿ ನಡೆಯಲಿ ಅನ್ನೋದೇ ನಮ್ಮೆಲ್ಲರ ಆಶಯ ಅನ್ನುತ್ತಾರೆ.

ಧಾರವಾಡ ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ