ಹಾವೇರಿ: ಬಿರುಗಾಳಿ ಸಹಿತ ಮಳೆಗೆ ಹಾರಿಹೋದ ಅಲೆಮಾರಿ ಕುಟುಂಬಗಳ ಜೋಪಡಿಗಳು
ಹಾವೇರಿ ಹೊರವಲಯದ ಇಜಾರಿಲಕಮಾಪುರದಲ್ಲಿ 60ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ವಾಸಿಸುತ್ತವೆ. ಬಿರುಗಾಳಿ ಮಳೆಯಿಂದ 10ಕ್ಕೂ ಹೆಚ್ಚು ಕುಟುಂಬಗಳ ಗುಡಿಸಲುಗಳು ನೆಲಸಮವಾಗಿವೆ. ಅನೇಕ ಕುಟುಂಬಗಳು ನಿರಾಶ್ರಿತರಾಗಿ ಬೀದಿಗಳಲ್ಲಿ ರಾತ್ರಿ ಕಳೆದಿದ್ದಾರೆ. ತಕ್ಷಣದ ಸಹಾಯ ಅವಶ್ಯಕವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಮುಂದಿನ ದಿನಗಳಲ್ಲೂ ಮಳೆಯಾಗಲಿದೆ.
ಹಾವೇರಿ, ಮೇ 18: ಹಾವೇರಿ ಹೊರವಲಯದಲ್ಲಿರುವ ಇಜಾರಿಲಕಮಾಪುರದಲ್ಲಿ ವಾಸವಿರುವ ಅಲೆಮಾರಿಗಳ ಕುಟುಂಬ ಅತಂತ್ರವಾಗಿದೆ. ಇಜಾರಿಲಕಮಾಪುರದಲ್ಲಿ 60 ಕ್ಕೂ ಅಧಿಕ ಅಲೇಮಾರಿ ಕುಟುಂಬಗಳು ವಾಸವಾಗಿವೆ. ಜಿಲ್ಲೆಯಲ್ಲಿ ಕಳೆದ ರಾತ್ರ ಸುರಿದ ಬಿರುಗಾಳಿ ಮಳೆಗೆ ಕಂಗಾಲಾದ ಈ ಕುಟುಂಬಗಳು ಕಂಗಾಲ ಆಗಿವೆ. ಬಿರುಗಾಳಿ ಮಳೆಗೆ 10ಕ್ಕೂ ಹೆಚ್ಚು ಕುಟುಂಬಗಳ ಜೋಪಡಿಗಳು ಹಾರಿಹೋಗಿವೆ. ಸೂರು ಇಲ್ಲದೆ ಬೀದಿಯಲ್ಲಿ ಪುಟ್ಟ ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಅಲೆಮಾರಿ ಕುಟುಂಬಗಳು ರಾತ್ರಿ ಕಳೆದಿವೆ.
ವರದಿ: ಅಣ್ಣಪ್ಪ ಬಾರ್ಕಿ
Published on: May 18, 2025 09:16 PM
Latest Videos

