IPL 2025: ಆರ್ಸಿಬಿಗೆ ಬಲ ತುಂಬಿದ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್; ವಿಡಿಯೋ
Chris Gayle's RCB Visit: ಮಳೆಯಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯ ರದ್ದಾಯಿತು. ಆದರೆ ಆರ್‌ಸಿಬಿ ಡ್ರೆಸ್ಸಿಂಗ್ ರೂಂಗೆ ಭೇಟಿ ನೀಡಿದ ಕ್ರಿಸ್ ಗೇಲ್ ತಂಡಕ್ಕೆ ಉತ್ಸಾಹ ತುಂಬಿದರು. ಅವರ ಭೇಟಿಯ ವಿಡಿಯೋವನ್ನು ಆರ್‌ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಗೇಲ್ ಅವರು ಆರ್‌ಸಿಬಿ ಪರ ಹಲವು ವರ್ಷಗಳ ಕಾಲ ಆಡಿದ್ದು, ತಂಡದ ಪರ ಹಲವು ದಾಖಲೆಗಳನ್ನು ಸೃಷ್ಟಿಸಿದ್ದರು.
ಮೇ 17 ರ ಶನಿವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನಡುವಿನ 59ನೇ ಪಂದ್ಯ ಮಳೆಯಿಂದಾಗಿ ಒಂದು ಎಸೆತವೂ ಬೌಲ್ ಆಗದೆ ರದ್ದಾಯಿತು. ಹೀಗಾಗಿ ಅಭಿಮಾನಿಗಳು ನಿರಾಶೆಯಿಂದ ಪೆವಿಲಿಯನ್ ತೊರೆದರಾದರೂ, ಆರ್‌ಸಿಬಿ ಡ್ರೆಸ್ಸಿಂಗ್ ರೂಮ್ಗೆ ಎಂಟ್ರಿಕೊಟ್ಟಿದ್ದ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಇಡೀ ತಂಡಕ್ಕೆ ಹೊಸ ಚೈತನ್ಯ ತುಂಬುವ ಕೆಲಸ ಮಾಡಿದರು. ಇದೀಗ ಅದರ ವಿಡಿಯೋವನ್ನು ಆರ್‌ಸಿಬಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಆರ್‌ಸಿಬಿ ಪರ ಬಹಳಷ್ಟು ವರ್ಷ ಆಡಿದ್ದ ಕ್ರಿಸ್ ಗೇಲ್ ಆರ್‌ಸಿಬಿ ಪಂದ್ಯ ನೋಡಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಆದರೆ ಮಳೆಯಿಂದಾಗಿ ಪಂದ್ಯದ ಟಾಸ್ ಕೂಡ ನಡೆಯಲಿಲ್ಲ. ಆದಾಗ್ಯೂ ಆಟಗಾರರನ್ನು ಭೇಟಿಯಾಗಲು ಡ್ರೆಸ್ಸಿಂಗ್ ರೂಮ್ಗೆ ಬಂದ ಗೇಲ್ರನ್ನು ಫಿಲ್ ಸಾಲ್ಟ್ ಸೇರಿದಂತೆ ಆರ್‌ಸಿಬಿಯ ಎಲ್ಲಾ ಆಟಗಾರರು ಆತ್ಮೀಯವಾಗಿ ಸ್ವಾಗತಿಸಿದರು. ಗೇಲ್ರನ್ನು ನೋಡಿದ ಎಲ್ಲಾ ಆಟಗಾರರ ಮೊಗದಲ್ಲಿ ಸಂತೋಷ ತುಂಬಿ ತುಳುಕಿತು.
ವಾಸ್ತವವಾಗಿ ಐಪಿಎಲ್‌ನಲ್ಲಿ ಕೆಕೆಆರ್ ಪರ ಮೊದಲ ಮೂರು ಸೀಸನ್‌ಗಳನ್ನು ಆಡಿದ ನಂತರ, ಗೇಲ್ 2011 ರಲ್ಲಿ ಆರ್‌ಸಿಬಿ ಸೇರಿದರು. ಅಲ್ಲಿಂದ ಹಿಂತಿರುಗಿ ನೋಡದ ಗೇಲ್, 2018 ರಲ್ಲಿ ಪಂಜಾಬ್ ಕಿಂಗ್ಸ್ ಸೇರುವ ಮೊದಲು ಏಳು ಸೀಸನ್‌ಗಳ ಕಾಲ ಚಾಲೆಂಜರ್ಸ್‌ನೊಂದಿಗೆ ಇದ್ದರು. 2021 ರ ಆವೃತ್ತಿಯು ಐಪಿಎಲ್‌ನಲ್ಲಿ ಅವರ ಕೊನೆಯ ಆವೃತ್ತಿಯಾಗಿತ್ತು.
142 ಐಪಿಎಲ್ ಪಂದ್ಯಗಳಲ್ಲಿ, ಗೇಲ್ 39.72 ಸರಾಸರಿಯಲ್ಲಿ 4965 ರನ್ ಗಳಿಸಿದ್ದಾರೆ. ಇದರಲ್ಲಿ ಆರು ಶತಕ ಮತ್ತು 31 ಅರ್ಧಶತಕಗಳು ಸೇರಿವೆ. 2022 ರಲ್ಲಿ, ಗೇಲ್ ಅವರನ್ನು ಎಬಿ ಡಿವಿಲಿಯರ್ಸ್ ಜೊತೆಗೆ ಆರ್‌ಸಿಬಿ ಹಾಲ್ ಆಫ್ ಫೇಮ್‌ಗೆ ಸೇರಿಸಿತು. ಇದಲ್ಲದೆ, ಅವರು ಚಾಂಪಿಯನ್ಸ್ ಲೀಗ್ ಟಿ20ಯಲ್ಲಿ ಆರು ಪಂದ್ಯಗಳಲ್ಲಿ ಆರ್‌ಸಿಬಿಯನ್ನು ಪ್ರತಿನಿಧಿಸಿದ್ದರು.

ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು

ಬಿಜೆಪಿ ಭಿನ್ನರ ಸಭೆಯಲ್ಲಿ ಪ್ರತ್ಯಕ್ಷ: ಕೊನೆಗೂ ಸ್ಪಷ್ಟನೆ ಕೊಟ್ಟ ಸೋಮಣ್ಣ!

ಸಿದ್ದೇಶ್ವರ ಬಂಡಾಯ ಬಿಜೆಪಿ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ!

ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
