AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಕೋಪವಲ್ಲ, ಲಾವಾರಸ, ಸೇಡಲ್ಲ, ನ್ಯಾಯ ಆಪರೇಷನ್​ ಸಿಂಧೂರ್​ನ​ ಮತ್ತೊಂದು ವಿಡಿಯೋ

ಇದು ಕೋಪವಲ್ಲ, ಲಾವಾರಸ, ಸೇಡಲ್ಲ, ನ್ಯಾಯ ಆಪರೇಷನ್​ ಸಿಂಧೂರ್​ನ​ ಮತ್ತೊಂದು ವಿಡಿಯೋ

ನಯನಾ ರಾಜೀವ್
|

Updated on:May 18, 2025 | 1:35 PM

ಭಾರತೀಯ ಸೇನೆಯು ಆಪರೇಷನ್ ಸಿಂಧೂರ್​(Operation Sindoor)ಗೆ ಸಂಬಂಧಿಸಿದ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದೆ. ಈ ವೀಡಿಯೊದಲ್ಲಿ, ಸೇನಾ ಸೈನಿಕರು ಭಯೋತ್ಪಾದಕ ಅಡಗುತಾಣಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತಿರುವುದನ್ನು ಕಾಣಬಹುದು. ಭಾರತೀಯ ಸೇನೆಯು ಈ ವೀಡಿಯೊವನ್ನು ಹಂಚಿಕೊಂಡು ಹೀಗೆ ಬರೆದಿದೆ. ಆಪರೇಷನ್ ಸಿಂಧೂರ್ ಪಾಕಿಸ್ತಾನಕ್ಕೆ ದಶಕಗಳಿಂದ ಕಲಿಯದ ಪಾಠವನ್ನು ಕಲಿಸಿದೆ ಎಂದು ಹೇಳಿದೆ.

ನವದೆಹಲಿ, ಮೇ 18: ಭಾರತೀಯ ಸೇನೆಯು ಆಪರೇಷನ್ ಸಿಂಧೂರ್​(Operation Sindoor)ಗೆ ಸಂಬಂಧಿಸಿದ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದೆ. ಈ ವೀಡಿಯೊದಲ್ಲಿ, ಸೇನಾ ಸೈನಿಕರು ಭಯೋತ್ಪಾದಕ ಅಡಗುತಾಣಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತಿರುವುದನ್ನು ಕಾಣಬಹುದು. ಭಾರತೀಯ ಸೇನೆಯು ಈ ವೀಡಿಯೊವನ್ನು ಹಂಚಿಕೊಂಡು ಹೀಗೆ ಬರೆದಿದೆ. ಆಪರೇಷನ್ ಸಿಂಧೂರ್ ಪಾಕಿಸ್ತಾನಕ್ಕೆ ದಶಕಗಳಿಂದ ಕಲಿಯದ ಪಾಠವನ್ನು ಕಲಿಸಿದೆ ಎಂದು ಹೇಳಿದೆ.
ಇದೆಲ್ಲವೂ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಪ್ರಾರಂಭವಾಯಿತು, ಕೋಪವಿರಲಿಲ್ಲ ಲಾವಾರಸ ಎದ್ದಿತ್ತು, ಸೇಡಿರಲಿಲ್ಲ, ನ್ಯಾಯವಿತ್ತು, ಮನಸ್ಸಿನಲ್ಲಿ ಈ ಬಾರಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎನ್ನುವ ದೃಢ ನಿಶ್ಚಯವಿತ್ತು. ಅವರ ಎಲ್ಲಾ ಪೀಳಿಗೆಯು ನೆನಪಿನಲ್ಲಿಡುವಂಥಾ ಪಾಠ ಕಲಿಸಿದ್ದೇವೆ. ಮೇ 9 ರಂದು ರಾತ್ರಿ 9 ಗಂಟೆ ಸುಮಾರಿಗೆ, ಕದನ ವಿರಾಮವನ್ನು ಉಲ್ಲಂಘಿಸಿದ ಎಲ್ಲಾ ಶತ್ರು ಪೋಸ್ಟ್‌ಗಳನ್ನು ಭಾರತೀಯ ಸೇನೆಯು ನೆಲಸಮಗೊಳಿಸಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: May 18, 2025 01:30 PM