ಪಾಕಿಸ್ತಾನದಲ್ಲಿ ಹರಿಯಾಣದ ಜ್ಯೋತಿಗೆ ರಾಜ ಮರ್ಯಾದೆ, ಓಡಾಟಕ್ಕೆ ಎಸ್ಕಾರ್ಟ್: ಐನಾತಿಯ ದೇಶದ್ರೋಹಿ ಕೆಲಸ
ಯೂಟ್ಯೂಬ್ ಚಾನೆಲ್ ಮಾಡ್ಕೊಂಡು ದುಡ್ಡು ಮಾಡ್ಕೊಳ್ತಿದ್ದವಳು ಅವಳು. ಓಡಾಡಿದ್ದೆಲ್ಲವನ್ನೂ ವ್ಲಾಗ್ ಹೆಸರಲ್ಲಿ ಹರಿಬಿಟ್ಟು ಜನರನ್ನ ರಂಜಿಸ್ತಿದ್ದಾಳೆ ಅಂತ ಅಂದುಕೊಂಡಿದ್ರೆ ಅವಳು ಮಾಡ್ತಾ ಇದ್ದಿದ್ದು ಮಣ್ಣು ತಿನ್ನೋ ಕೆಲಸ. ಕುತಂತ್ರಿ ಪಾಕ್ ಕಳ್ಳಾಟಕ್ಕೆ ಸಾಕ್ಷಿಯಾದವಳ ಘನಘೋರ ಹಿಸ್ಟರಿ. ಫೇಮಸ್ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರ.. ಜ್ಯೋತಿ ಭಾರತೀಯರಿಗೆ ಹೆಚ್ಚು ಪರಿಚಿತಳಾಗಿದ್ದು ಅವಳ ಟ್ರಾವೆಲ್ ವಿಥ್ ಜೋ ಯೂಟ್ಯೂಬ್ ಚಾನೆಲ್ ಮೂಲಕ.. ಇವಳ ಹಣೆಬರಹವನ್ನೆಲ್ಲಾ ನಿಮ್ಮ ಮುಂದೆ ತೆರೆದಿಡ್ತೀವಿ
ನವದೆಹಲಿ, (ಮೇ 18): ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳಿಗೆ ಭಾರತದ ಸೇನಾ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಆರೋಪದಲ್ಲಿ ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಬಂಧಿಸಲಾಗಿದ್ದು, ತನಿಖೆ ವೇಳೆ ಜ್ಯೂತಿಯ ಭಯಾನ ಹಿಸ್ಟರಿ ಬಟಾಬಯಲಾಗಿದೆ. ಈಕೆ ಉಗ್ರರು ಹಾಗೂ ಪಾಕಿಸ್ತಾನಿ ಅಧಿಕಾರಿಗಳ ಲಿಂಕ್ ಇರುವುದು ಬಯಲಾಗಿದೆ. ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಿ ತಗಲಾಕಿಕೊಂಡಿರುವ ಜ್ಯೋತಿಗೆ ಪಾಕಿಸ್ತಾನದಲ್ಲಿ ರಾಜ ಮರ್ಯಾದೆ ಸಿಗ್ತಿತ್ತು. ರಂಜಾನ್ ತಿಂಗಳಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಜ್ಯೋತಿ, ಪಾಕ್ ರಾಯಭಾರ ಕಚೇರಿ ನಡೆಸಿದ್ದ ಇಫ್ತಾರ್ ಕೂಟದಲ್ಲೂ ಭಾಗಿಯಾಗಿದ್ದವಳು. ಮಾರ್ಚ್ನಲ್ಲಿ ಪಾಕ್ ರಾಯಭಾರ ಕಚೇರಿಯ ವಿಶೇಷ ಆಹ್ವಾಣದ ಮೇರೆಗೆ ಅಲ್ಲಿಗೂ ಭೇಟಿ ನೀಡಿದ್ದ ಸಂಗತಿಯನ್ನ ಪೊಲೀಸರ ಮುಂದೆ ಕಕ್ಕಿದ್ದಾಳೆ.