ನೆಲಮಂಗಲದಿಂದ ಬೆಂಗಳೂರು ಕಡೆ ಬರುವ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್
ವಾರಾಂತ್ಯದ ನಂತರ ಬೆಂಗಳೂರಿಗೆ ಮರಳುತ್ತಿರುವ ಜನರಿಂದ ನೆಲಮಂಗಲದ ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ. ಕುಣಿಗಲ್ ಬೈಪಾಸ್ ಬಳಿ ಪರಿಸ್ಥಿತಿ ಹದಗೆಟ್ಟಿದ್ದು, ಕುಣಿಗಲ್ ಮತ್ತು ತುಮಕೂರಿನಿಂದ ಬರುವ ವಾಹನಗಳು ಒಂದೇ ಸ್ಥಳದಲ್ಲಿ ಸೇರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಇನ್ನೂ ಕನಿಷ್ಠ ಎರಡು ಗಂಟೆಗಳ ಕಾಲ ಈ ಸಮಸ್ಯೆ ಮುಂದುವರಿಯುವ ನಿರೀಕ್ಷೆಯಿದೆ. ವಾಹನ ಸವಾರರು ದೀರ್ಘ ಸಮಯ ರಸ್ತೆಯಲ್ಲಿ ಸಿಲುಕುವಂತಾಗಿದೆ.
ನೆಲಮಂಗಲ, ಮೇ 18: ವೀಕೆಂಡ್ ಮುಗಿಸಿಕೊಂಡು ಜನರು ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ. ಇದರಿಂದ ನೆಲಮಂಗಲ ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ನೆಲಮಂಗಲದ ಕುಣಿಗಲ್ ಬೈಪಾಸ್ ಬಳಿ ಸಂಚಾರ ದಟ್ಟಣೆ ಉಂಟಾಗಿದೆ. ಕುಣಿಗಲ್ನಿಂದ ನೆಲಮಂಗಲ ಹಾಗೂ ತುಮಕೂರಿನಿಂದ ನೆಲಮಂಗಲ ಕಡೆ ಸೇರುವ ಜಂಕ್ಷನ್ ಒಂದೇ ಆಗಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಇನ್ನೂ ಎರಡು ಗಂಟೆಗೆಳ ಕಾಲ ಟ್ರಾಫಿಕ್ ಜಾಮ್ ಇರಲಿದೆ. ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಗಂಟೆಗಟ್ಟಲೆ ರಸ್ತೆ ಮೇಲೆ ನಿಲ್ಲುವಂತಾಗಿದೆ.
ವರದಿ:ಮಂಜು