DC vs GT, IPL 2025: ರಾಹುಲ್- ಸುದರ್ಶನ್ ಶತಕ: ಡೆಲ್ಲಿ-ಜಿಟಿ ಪಂದ್ಯದಲ್ಲಿ ನಿರ್ಮಾಣವಾಗಿದ್ದು ಈ 5 ದೊಡ್ಡ ದಾಖಲೆಗಳು
ಐಪಿಎಲ್‌ನಲ್ಲಿ ಅತಿ ಹೆಚ್ಚು 100 ಪ್ಲಸ್ ಜೊತೆಯಾಟಗಳನ್ನು ಆಡಿದ ಜೋಡಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಆಗಿದ್ದು, ಅವರು ಈ ಸಾಧನೆಯನ್ನು 10 ಬಾರಿ ಮಾಡಿದ್ದಾರೆ. ಈಗ ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ, ಅವರು ಐಪಿಎಲ್‌ನಲ್ಲಿ 7 ಬಾರಿ 100 ರನ್‌ಗಳ ಜೊತೆಯಾಟ ಆಡಿದ್ದಾರೆ.

ಬೆಂಗಳೂರು (ಮೇ. 19): ಇಂಡಿಯನ್ ಪ್ರೀಮಿಯರ್ ಲೀಗ್ 2025 ರ 60 ನೇ ಪಂದ್ಯದಲ್ಲಿ ಭಾನುವಾರ ಗುಜರಾತ್ ಟೈಟಾನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ (Delhi Capitals vs Gujarat Titans) ಅನ್ನು 10 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನ ನಂತರ, ಗುಜರಾತ್ ಟೈಟಾನ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ ಮತ್ತು ಪ್ಲೇಆಫ್‌ಗೆ ಪ್ರವೇಶ ಪಡೆದಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ತಂಡ ಗುಜರಾತ್ ಗೆ 200 ರನ್ ಗಳ ಗುರಿ ನೀಡಿತು, ಆದರೆ ಗಿಲ್ ಪಡೆ ಯಾವುದೇ ವಿಕೆಟ್ ನಷ್ಟವಿಲ್ಲದೆ ಈ ಟಾರ್ಗೆಟ್ ಬೆನ್ನಟ್ಟಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ನಿರ್ಮಾಣವಾದ ಕೆಲ ಪ್ರಮುಖ ದಾಖಲೆಗಳ ಕುರಿತ ಮಾಹಿತಿ ಇಲ್ಲಿದೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಜೋಡಿ
ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿ ಈಗ ಐಪಿಎಲ್ ಋತುವಿನಲ್ಲಿ 839 ರನ್ ಗಳಿಸಿದ ಭಾರತೀಯ ಜೋಡಿಯಾಗಿದೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು 100 ರನ್‌ಗಳ ಜೊತೆಯಾಟಗಳು
ಐಪಿಎಲ್‌ನಲ್ಲಿ ಅತಿ ಹೆಚ್ಚು 100 ಪ್ಲಸ್ ಜೊತೆಯಾಟಗಳನ್ನು ಆಡಿದ ಜೋಡಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಆಗಿದ್ದು, ಅವರು ಈ ಸಾಧನೆಯನ್ನು 10 ಬಾರಿ ಮಾಡಿದ್ದಾರೆ. ಈಗ ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ, ಅವರು ಐಪಿಎಲ್‌ನಲ್ಲಿ 7 ಬಾರಿ 100 ರನ್‌ಗಳ ಜೊತೆಯಾಟ ಆಡಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಆರಂಭಿಕ ಜೊತೆಯಾಟ
ಸಾಯಿ ಸುದರ್ಶನ್ ಮತ್ತು ಶುಭ್‌ಮನ್ ಗಿಲ್ ನಡುವೆ ಒಟ್ಟು 205 ರನ್‌ಗಳ ಜೊತೆಯಾಟ ಇತ್ತು. ಇದು ಐಪಿಎಲ್‌ನಲ್ಲಿ ಮೂರನೇ ಅತ್ಯಧಿಕ ಆರಂಭಿಕ ಜೊತೆಯಾಟವಾಗಿದೆ.
DC vs GT, IPL 2025: ಅವಮಾನಕರ ಸೋಲಿನ ನಂತರ ಅಕ್ಷರ್ ಪಟೇಲ್ ದುಃಖದ ಮಾತು: ಏನು ಹೇಳಿದ್ರು?
ರಾಹುಲ್ 8000 ರನ್
ಆರಂಭಿಕ ಆಟಗಾರನಾಗಿ ಆಡಿ ಕೆಎಲ್ ರಾಹುಲ್ ಅದ್ಭುತ ಶತಕ ಗಳಿಸಿದರು. ಅವರು 65 ಎಸೆತಗಳಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 112 ರನ್ ಗಳಿಸಿದರು. ಇದರ ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ 3 ವಿಕೆಟ್‌ಗೆ 199 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಈ ಇನ್ನಿಂಗ್ಸ್ ಸಮಯದಲ್ಲಿ, ರಾಹುಲ್ ಟಿ20 ಕ್ರಿಕೆಟ್‌ನಲ್ಲಿ 8000 ರನ್ ಗಳಿಸಿದ ಮೂರನೇ ಅತ್ಯಂತ ವೇಗದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 224 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು.
ಐಪಿಎಲ್‌ನಲ್ಲಿ ಅಜೇಯ ಶತಕಗಳ ದಾಖಲೆ
ಐಪಿಎಲ್‌ನಲ್ಲಿ ಅಜೇಯ ಶತಕಗಳನ್ನು ಗಳಿಸಿದ ದಾಖಲೆ ಈಗ ಕೆಎಲ್ ರಾಹುಲ್ ಹೆಸರಿನಲ್ಲಿದೆ. ಅವರು ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಐದು ಶತಕಗಳನ್ನು ಗಳಿಸಿದ್ದಾರೆ ಮತ್ತು ಐದು ಬಾರಿಯೂ ಅಜೇಯರಾಗಿ ಉಳಿದಿದ್ದಾರೆ.
ಐಪಿಎಲ್‌ನಲ್ಲಿ ಡೆಲ್ಲಿ ತಂಡಕ್ಕೆ ಮೂರನೇ 10 ವಿಕೆಟ್‌ಗಳ ಸೋಲು
ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೂರನೇ ಬಾರಿಗೆ 10 ವಿಕೆಟ್‌ಗಳಿಂದ ಸೋತಿದೆ. ಇದಕ್ಕೂ ಮೊದಲು 2015 ರಲ್ಲಿ ಆರ್‌ಸಿಬಿ ಮತ್ತು 2017 ರಲ್ಲಿ ಪಂಜಾಬ್ ದೆಹಲಿಯನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




