AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋಧರು ಖರೀದಿಸುವ ಮದ್ಯದ ತೆರಿಗೆ ಹೆಚ್ಚಿಸಲು ಮುಂದಾದ ಕಾಂಗ್ರೆಸ್ ಸರ್ಕಾರ

ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಮೂರು ಬಾರಿ ಮದ್ಯದ ದರ ಏರಿಕೆ ಆಗಿದೆ. ಇದೀಗ ಹಾಲಿ ಮತ್ತು ಮಾಜಿ ಯೋಧರಿಗಾಗಿರುವ ಆರ್ಮಿ ಕ್ಯಾಂಟೀನ್​​ನಲ್ಲಿ ಮಾರಾಟ ಮಾಡುವ ಮದ್ಯದ ಮೇಲಿನ ತೆರಿಗೆಯನ್ನೂ ಹೆಚ್ಚಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಯೋಧರು ಖರೀದಿಸುವ ಮದ್ಯದ ತೆರಿಗೆ ಹೆಚ್ಚಿಸಲು ಮುಂದಾದ ಕಾಂಗ್ರೆಸ್ ಸರ್ಕಾರ
ಆರ್ಮಿ ಕ್ಯಾಂಟೀನ್ ಮದ್ಯದ ತೆರಿಗೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ
Kiran Surya
| Edited By: |

Updated on: May 19, 2025 | 9:30 AM

Share

ಬೆಂಗಳೂರು, ಮೇ 19: ಕಾಂಗ್ರೆಸ್ ಸರ್ಕಾರ (Congress Govt) ಅಧಿಕಾರಕ್ಕೆ ಬಂದ ಮೇಲೆ ಈಗಾಗಲೇ ಕರ್ನಾಟಕದಲ್ಲಿ ಮೂರು ಬಾರಿ ಮದ್ಯದ ದರ ಏರಿಕೆ (Liquor Price Hike) ಮಾಡಲಾಗಿದೆ. ಇದರಿಂದ ಮದ್ಯಪ್ರಿಯರಿಗೆ ಶಾಕ್ ಎದುರಾಗಿದ್ದರೆ, ಮತ್ತೊಂದೆಡೆ, ಮದ್ಯ ಮಾರಾಟಗಾರರ ಪರವಾನಗಿ ದರ ಹೆಚ್ಚಳ ಮಾಡುವುದಕ್ಕೂ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ಮದ್ಯ ಮಾರಾಟಗಾರರು ಕಂಗಲಾಗಿದ್ದಾರೆ. ಇಷ್ಟೇ ಸಾಲದು ಎಂದು ಇದೀಗ ಆರ್ಮಿ ಕ್ಯಾಂಟೀನ್​ಗೆ ಪೂರೈಕೆ ಮಾಡುವ ಮದ್ಯದ ತೆರಿಗೆ ಹೆಚ್ಚಳಕ್ಕೂ ಅಬಕಾರಿ ಇಲಾಖೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮದ್ಯ ಮಾರಾಟಗಾರರು, ಆರ್ಮಿ ಕ್ಯಾಂಟೀನ್ ಹೆಸರಿನಲ್ಲಿ ಸಾಕಷ್ಟು ಮದ್ಯ ಬ್ಲಾಕ್​ನಲ್ಲಿ ಮಾರಾಟವಾಗುತ್ತಿದೆ. ಎಲ್ಲರೂ ಹೀಗೆ ಮಾಡುವುದಿಲ್ಲ. ಕೆಲವರು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ದರ ಏರಿಕೆ ಮಾಡಿದರೆ ಇದಕ್ಕೆ ಬ್ರೇಕ್ ಬೀಳಬಹುದು ಎಂದಿದ್ದಾರೆ.

ಕರ್ನಾಟಕದಲ್ಲೆಷ್ಟಿವೆ ಆರ್ಮಿ ಕ್ಯಾಂಟೀನ್? ಮದ್ಯದ ದರ ಎಷ್ಟು?

ಕರ್ನಾಟಕದಲ್ಲಿ ಒಟ್ಟು 70 ಆರ್ಮಿ ಕ್ಯಾಂಟೀನ್​​ಗಳಿವೆ. ಎಲ್ಲಾ ಆರ್ಮಿ ಕ್ಯಾಂಟೀನ್​ಗಳಿಗೂ ಅಬಕಾರಿ ಇಲಾಖೆ ರಿಯಾಯಿತಿ ದರದಲ್ಲಿ ಮದ್ಯವನ್ನು ಮಾರಾಟ ಮಾಡುತ್ತದೆ. ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಸ್ಟೋರ್ ಗಳಲ್ಲಿ, ಎಂಆರ್ಪಿಪಿ ಮತ್ತು ಎಂಎಸ್ಐಎಲ್ ಗಳಲ್ಲಿ ಒಂದು ಫುಲ್ ಬಾಟಲ್ ಗೆ 2300 ರಿಂದ 2500 ರುಪಾಯಿ ಇದ್ದರೆ, ಒಂದು ಫುಲ್ ಬಾಟಲ್ ಮದ್ಯ ಆರ್ಮಿ ಕ್ಯಾಂಟೀನ್ ನಲ್ಲಿ 500 ರಿಂದ 600 ರುಪಾಯಿಗೆ ದೊರೆಯುತ್ತದೆ. ಒಬ್ಬ ಯೋಧನಿಗೆ ಪ್ರತಿ ತಿಂಗಳು 2 ರಿಂದ 4 ಬಾಟಲ್ ಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ.

ಇದನ್ನೂ ಓದಿ
Image
ಮದ್ಯ ಬೆಲೆ ಏರಿಕೆ ಬೆನ್ನಲ್ಲೇ ಎಣ್ಣೆ ಮಾರಾಟಗಾರರಿಗೂ ಶಾಕ್​ ನೀಡಿದ ಸರ್ಕಾರ
Image
ಹೆಬ್ಬಾಳ ಫ್ಲೈಓವರ್​​ ಇಂದಿನಿಂದ ಮೇ 21ರವರೆಗೆ ಪ್ರತಿದಿನ 3 ಗಂಟೆ ಬಂದ್
Image
ಮದ್ಯಪ್ರಿಯರಿಗೆ 3ನೇ ಬಾರಿ ದರ ಏರಿಕೆ ಶಾಕ್: ಯಾವ ಎಣ್ಣೆ ಎಷ್ಟು ಹೆಚ್ಚಳ?
Image
ವಿದ್ಯುತ್ ಮತ್ತು ನೀರಿನ ಸಂಪರ್ಕಕ್ಕೆ OC ಸರ್ಟಿಫಿಕೆಟ್ ಕಡ್ಡಾಯ: ಬಿಬಿಎಂಪಿ

ಮದ್ಯ ಪ್ರಿಯರಿಂದ ಆಕ್ಷೇಪ

ಯೋಧರ ಮದ್ಯದ ತೆರಿಗೆ ಹೆಚ್ಚಳ ಪ್ರಸ್ತಾಪದ ಬಗ್ಗೆ ಪ್ರತಿಕ್ರಿಯಿಸಿದ ಮದ್ಯಪ್ರಿಯರು, ಈಗಾಗಲೇ ನಾವು ಕುಡಿಯುವ ಮದ್ಯದ ದರವನ್ನು ಸರ್ಕಾರ ಏರಿಕೆ‌ ಮಾಡಿದೆ. ಇದೀಗ ದೇಶ ಕಾಯುವ ಯೋಧರಿಗೆ ನೀಡುವ ಮದ್ಯದ ದರವನ್ನು ಹೆಚ್ಚಿಸಲು ಚಿಂತನೆ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ‌‌.

ಇದನ್ನೂ ಓದಿ: ಮದ್ಯಪ್ರಿಯರಿಗೆ 3ನೇ ಬಾರಿ ದರ ಏರಿಕೆ ಶಾಕ್: ಯಾವ ಎಣ್ಣೆ ಎಷ್ಟು ಹೆಚ್ಚಳ?

ಈಗಾಗಲೇ ರಾಜ್ಯದಲ್ಲಿ ಮೂರು ಬಾರಿ ಮದ್ಯದ ದರವನ್ನು ಏರಿಕೆ ಮಾಡಲಾಗಿದೆ. ಯೋಧರಿಗೆ ಮತ್ತು ಮಾಜಿ ಯೋಧರಿಗೆ ರಿಯಾಯಿತಿ ದರದಲ್ಲಿ ನೀಡುವ ಮದ್ಯದ ತೆರಿಗೆಯನ್ನು ಹೆಚ್ಚಿಸಲು ಸರ್ಕಾರ ಈಗಾಗಲೇ ಚಿಂತನೆ ನಡೆಸಿದ್ದು,ಇದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ
ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!