ಕಾರವಾರ ನಗರಸಭೆ ಕಚೇರಿಯಲ್ಲಿ ಮಹಾ ಮಾರಕ ಪ್ಲಾಸ್ಟಿಕ್ ತ್ಯಾಜ್ಯ ಎಷ್ಟು ಸೊಗಸಾಗಿ ಮೈದಾಳಿದೆ ನೋಡಿ!

Karwar City Municipal Council: ತ್ಯಾಜ್ಯಗಳನ್ನ ಬಳಸಿ ಅದರಿಂದ ವಿವಿಧ ಕಲಾಕೃತಿಗಳನ್ನು ರಚಿಸಿ ಅವುಗಳನ್ನು ಕಂಗೊಳಿಸುವಂತೆ ಮಾಡುವುದು. ಮತ್ತು ತ್ಯಾಜ್ಯದಿಂದ ಏನೂ ಉಪಯುಕ್ತವಿಲ್ಲ ಎಂಬ ಜನರ ತಿಳಿವಳಿಕೆ ಹೋಗಲಾಡಿಸಿ ತ್ಯಾಜ್ಯವನ್ನೂ ಬಳಕೆ ಮಾಡಬಹುದು ಎಂಬ ಅರಿವು ಮೂಡಿಸುವ ಪ್ರಯತ್ನ ಸರ್ಕಾರದ್ದಾಗಿದೆ.

ಕಾರವಾರ ನಗರಸಭೆ ಕಚೇರಿಯಲ್ಲಿ ಮಹಾ ಮಾರಕ ಪ್ಲಾಸ್ಟಿಕ್ ತ್ಯಾಜ್ಯ ಎಷ್ಟು ಸೊಗಸಾಗಿ ಮೈದಾಳಿದೆ ನೋಡಿ!
ಕಾರವಾರ ನಗರಸಭೆ ಕಚೇರಿಯಲ್ಲಿ ಮಹಾ ಮಾರಕ ಪ್ಲಾಸ್ಟಿಕ್ ತ್ಯಾಜ್ಯ ಎಷ್ಟು ಸೊಗಸಾಗಿ ಮೈದಾಳಿದೆ ನೋಡಿ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Nov 25, 2022 | 6:16 PM

ಬಳಕೆ ಮಾಡಿ ಬಿಸಾಕಿಬಿಡುವ ತ್ಯಾಜ್ಯ ವಸ್ತುಗಳು ಎಲ್ಲೆಂದರಲ್ಲಿ ಬಿದ್ದು ಪರಿಸರದ ಸೌಂದರ್ಯ, ನಗರದ ಸ್ವಚ್ಛತೆಯನ್ನ ಹಾಳು ಮಾಡಿಬಿಡುತ್ತವೆ. ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳಂತೂ ಪರಿಸರಕ್ಕೆ ಮಹಾ ಮಾರಕವಾಗಿವೆ. ತ್ಯಾಜ್ಯ ವಸ್ತುಗಳನ್ನ ನೋಡಿ ಮೂಗು ಮುಚ್ಚಿಕೊಳ್ಳುವ ಕಾಲದಲ್ಲಿ ಇಲ್ಲೊಂದು ಕಚೇರಿಯಲ್ಲಿ ತ್ಯಾಜ್ಯಗಳನ್ನೆ (waste materials) ಬಳಸಿ ಕಚೇರಿ ಸೌಂದರ್ಯವನ್ನ (Decoration) ಹೆಚ್ಚಿಸಿದ್ದಾರೆ. ಅರೇ ಏನಿದು ಅಂತಿರಾ ಈ ಸ್ಟೋರಿ ನೋಡಿ..

ಉತ್ತರ ಕನ್ನಡ ಜಿಲ್ಲೆ ಕಾರವಾರದ ನಗರ ಸಭೆ (Karwar City Municipal Council) ಕಚೇರಿ ಆವರಣದಲ್ಲಿ.. ವಿವಿಧ ಅಲಂಕಾರಿಕ ವಸ್ತುಗಳಾಗಿ ಕಂಗೊಳಿಸುತ್ತಿರುವ ತ್ಯಾಜ್ಯ ವಸ್ತುಗಳನ್ನು ನೋಡುತ್ತ ಜನ ಫೋಟೋ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಅಂದಹಾಗೆ ಇದು ಸ್ವಚ್ಛ ಭಾರತ್ ಅರ್ಬನ್ ಮಿಷನ್ ಗೌರಮೆಂಟ್ ಆಫ್​ ಇಂಡಿಯಾ (Swachh Bharat Urban Mission Government of India) ಇದರ ನಿರ್ದೇಶನದ ಮೇರೆಗೆ ದೇಶದ ನಗರ ಸಭೆಗಳಿಗೆ ಟೈಟೋಕಾನ್ ಸ್ಪರ್ಧೆಯನ್ನ ಏರ್ಪಡಿಸಲಾಗಿತ್ತು.

ಅಂದರೆ ತ್ಯಾಜ್ಯಗಳನ್ನ ಬಳಸಿ ಅದರಿಂದ ವಿವಿಧ ಕಲಾಕೃತಿಗಳನ್ನು ರಚಿಸಿ ಅವುಗಳನ್ನು ಕಂಗೊಳಿಸುವಂತೆ ಮಾಡುವುದು. ಮತ್ತು ತ್ಯಾಜ್ಯದಿಂದ ಏನೂ ಉಪಯುಕ್ತವಿಲ್ಲ ಎಂಬ ಜನರ ತಿಳಿವಳಿಕೆ ಹೋಗಲಾಡಿಸಿ ತ್ಯಾಜ್ಯವನ್ನೂ ಬಳಕೆ ಮಾಡಬಹುದು ಎಂಬ ಅರಿವು ಮೂಡಿಸುವ ಪ್ರಯತ್ನ ಸರ್ಕಾರದ್ದಾಗಿದೆ. ಸರ್ಕಾರದ ಈ ಪ್ರಯತ್ನಕ್ಕೆ ನಗರ ಸಭೆಗಳು ಕೈ ಜೋಡಿಸಿ ನಿರುಪಯುಕ್ತ ವಸ್ತುಗಳನ್ನು ಬಳಕೆ ಮಾಡಿ ಕಸದಿಂದ ರಸ ಎನ್ನುವ ಸಂದೇಶವನ್ನು ಸಂದೇಶ ಸಾರಿವೆ. ಇನ್ನು ಈ ಕಾರ್ಯ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ ಎನ್ನುತ್ತಾರೆ ನಗರ ಸಭೆ ಆಯುಕ್ತರಾದ ಆರ್.ಪಿ. ನಾಯಕ್.

ಇನ್ನು ನಗರಗಳಲ್ಲಿ ಪ್ರತಿನಿತ್ಯ ಸಂಗ್ರಹಿಸುವ ತ್ಯಾಜ್ಯಗಳಲ್ಲಿ ಪ್ಲಾಸ್ಟಿಕ್ ಬಾಟಲ್, ಗೃಹೋಪಯೋಗಿ ವಸ್ತುಗಳು, ಐಸ್ ಕ್ರೀಂ ಚಮಚ, ಅಡುಗೆ ಎಣ್ಣೆ ಡಬ್ಬಿಗಳು, ವಾಹನಗಳಿಗೆ ಬಳಸುವ ಟೈಯರ್‌ಗಳು ಹೀಗೆ ಹಲವಾರು ವಸ್ತುಗಳನ್ನ ಬಳಸಿ ವಿವಿಧ ರೀತಿಯ ಕಲಾಕೃತಿಗಳನ್ನು ರಚನೆ ಮಾಡಲಾಗಿದೆ. ನಗರಸಭೆಯ ಒಳಾಂಗಣದಲ್ಲಿ ಅವುಗಳನ್ನೆಲ್ಲಾ ಜೋಡಿಸಿ, ಕಚೇರಿಗೆ ಬರುವ ಜನ್ರು ಈ ಕಲಾಕೃತಿಗಳನ್ನು ನೋಡಿ ನಿಬ್ಬೆರಗಾಗುವಂತೆ ಮಾಡಲಾಗಿದೆ.

ಅದರಲ್ಲೂ ಬಾಟಲ್ ಗಳಿಂದ ಮಾಡಿದ ಹೃದಯದಾಕೃತಿ, ಎಣ್ಣೆ ಡಬ್ಬಿ ಬಳಸಿ ಆನೆ ಮುಖ, ಟೈಯರ್‌ಗಳನ್ನ ಬಳಸಿ ಕುರ್ಚಿ, ರಟ್ಟಿನ ಡಬ್ಬಿಗಳನ್ನ ಬಳಕೆ ಮಾಡಿ ಮನೆಗಳ ನಿರ್ಮಾಣ, ಹೂವಿನ ಕುಂಡಲಿಗಳು… ಹೀಗೆ ವಿವಿಧ ಕಲಾಕೃತಿಗಳನ್ನು ರಚನೆ ಮಾಡಿರುವ ಕಾರವಾರ ನಗರ ಸಭೆ ನಿಜಕ್ಕೂ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನು ನಗರ ಸಭೆಗೆ ಬಂದವರು ಈ ಕಲಾಕೃತಿಗಳನ್ನು ನೋಡಿ ನಾವು ಕೂಡ ಹೀಗೆ ತ್ಯಾಜ್ಯಗಳನ್ನ ಉಪಯುಕ್ತವಾಗಿ ಬಳಕೆ ಮಾಡಬೇಕು. ತ್ಯಾಜ್ಯಗಳನ್ನ ಎಲ್ಲೆಂದರಲ್ಲಿ ಬಿಸಾಡಿ ನಗರ ಮತ್ತು ಪರಿಸರದ ಸೌಂದರ್ಯವನ್ನು ಹಾಳು ಮಾಡಬಾರದು. ಎಂಬ ಅರಿವನ್ನು ಮೂಡಿಸುವಲ್ಲಿ ನಗರ ಸಭೆ ಯಶಸ್ವಿಯಾಗಿದೆ ಎನ್ನುತ್ತಾರೆ ಸ್ಥಳೀಯರಾದ ಸಂಧ್ಯಾ.

ಒಟ್ಟಿನಲ್ಲಿ ಕಾರವಾರ ನಗರ ಸಭೆಯ ಒಳಾಂಗಣವು ನಿರುಪಯುಕ್ತ ವಸ್ತುಗಳಿಂದ ತಯಾರಿಸಲಾದ ಅಲಂಕಾರಿಕ ವಸ್ತುಗಳಿಂದ ಕಂಗೊಳಿಸುತ್ತಿದೆ. ಜೊತೆಗೆ ತ್ಯಾಜ್ಯಗಳನ್ನ ಹೀಗೂ ಬಳಕೆ ಮಾಡಬಹುದು ಎನ್ನುವ ಸಂದೇಶವನ್ನು ರವಾನಿಸಿದೆ. (ವರದಿ: ವಿನಾಯಕ ಬಡಿಗೇರ, ಟಿವಿ 9, ಕಾರವಾರ)

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ