Joint Opposition Meeting: ವಿಪಕ್ಷಗಳ ಮೀಟಿಂಗ್​ ಗೇಮ್ ಚೇ‌ಂಜರ್ ಸಭೆಯಾಗಲಿದೆ – ಕೆ ಸಿ ವೇಣುಗೋಪಾಲ್

| Updated By: ವಿವೇಕ ಬಿರಾದಾರ

Updated on: Jul 17, 2023 | 11:59 AM

ಬೆಂಗಳೂರಲ್ಲಿ ಎರಡು ದಿನಗಳಕಾಲ ನಡೆಯುವ ವಿರೋಧ ಪಕ್ಷಗಳ ಸಭೆ ನಡೆಯಲಿದೆ. ಈ ಹಿನ್ನೆಲೆ ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಿ.ವೇಣುಗೋಪಾಲ್ ಸುದ್ದಿಗೋಷ್ಠಿ ನಡೆಸಿ ಜೆಡಿಎಸ್​ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.

Joint Opposition Meeting: ವಿಪಕ್ಷಗಳ ಮೀಟಿಂಗ್​ ಗೇಮ್ ಚೇ‌ಂಜರ್ ಸಭೆಯಾಗಲಿದೆ - ಕೆ ಸಿ ವೇಣುಗೋಪಾಲ್
ಕೆಸಿ ವೇಣುಗೋಪಾಲ್​, ಡಿಕೆ ಶಿವಕುಮಾರ್​
Follow us on

ಬೆಂಗಳೂರು: ನಾಳೆ (ಜು.18) ರಂದು ವಿರೋಧ ಪಕ್ಷಗಳ ನಾಯಕರ (Opposition Leaders) ಎರಡನೇ ಸಭೆ ನಡೆಯಲಿದೆ. ಜೂನ್​ 23ರಂದು ಪಾಟ್ನಾದಲ್ಲಿ ನಡೆದ ಸಭೆಯು ಯಶಸ್ವಿಯಾಗಿತ್ತು. ನಾಳೆ ಬೆಳಗ್ಗೆ 11 ಗಂಟೆಗೆ ವಿಪಕ್ಷಗಳ ಎರಡನೇ ಸಭೆ ಆರಂಭವಾಗಲಿದೆ. ಸಭೆಯಲ್ಲಿ 26 ಪಕ್ಷಗಳ ನಾಯಕರು ಪಾಲ್ಗೊಳ್ಳುತ್ತಾರೆ. ಇಂದು (ಜು.17) ರಾತ್ರಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಔತಣಕೂಟ ಏರ್ಪಡಿಸಿದ್ದಾರೆ. ಎಲ್ಲ ಪಕ್ಷಗಳು ಒಂದೇ ಸಾಮಾನ್ಯ ವಿಷಯಕ್ಕಾಗಿ ಸೇರುತ್ತಿದ್ದೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ.ವೇಣುಗೋಪಾಲ್ (KC Venugopal)​ ಹೇಳಿದರು. ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೂಲಭೂತ ಹಕ್ಕುಗಳ ರಕ್ಷಣೆ ಮಾಡಬೇಕಿದೆ. ದೇಶದಲ್ಲಿ ವಿಪಕ್ಷಗಳ ಧ್ವನಿ ಅಡಗಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದ್ದೆ ಎಂದು ವಾಗ್ದಾಳಿ ಮಾಡಿದರು.

ಸಿಬಿಐ, ಇಡಿ ಮೂಲಕ ವಿಪಕ್ಷಗಳ ಧ್ವನಿ ಅಡಗಿಸುವ ಪ್ರಯತ್ನ ಆಗುತ್ತಿದೆ. ಮಹಾರಾಷ್ಟ್ರ ರಾಜಕಾರಣದ ಬೆಳವಣಿಗೆಯೂ ಕೂಡ ಇದರ ಭಾಗವಾಗಿದೆ. ನಾವು ಸೇರುತ್ತಿರುವುದು ಅಧಿಕಾರಕ್ಕಾಗಿ ಅಲ್ಲ. ಜನರ ಸಮಸ್ಯೆ ಬಗ್ಗೆ ಚರ್ಚಿಸಲು ಎಲ್ಲ ನಾಯಕರು ಸೇರುತ್ತಿರುವುದು. ಮಣಿಪುರದಲ್ಲಿ 75 ದಿನಗಳಿಂದ ಹಿಂಸಾತ್ಮಕ ಘಟನೆಗಳು ಆಗುತ್ತಿವೆ. ಮಣಿಪುರ ಸಮಸ್ಯೆ ಬಗೆಹರಿಸುವ ಪ್ರಯತ್ನ ಪ್ರಧಾನಿ ಮೋದಿ ಮಾಡಿಲ್ಲ. ನಿರುದ್ಯೋಗ, ಬೆಲೆ ಏರಿಕೆಯಿಂದ ದೇಶದ ಜನ ತತ್ತರಿಸಿ ಹೋಗಿದ್ದಾರೆ ಎಂದರು.

ಇದನ್ನೂ ಓದಿ: ವಿಪಕ್ಷಗಳ ಮಹಾ ಮೈತ್ರಿಕೂಟದ ಸಭೆಯ ಟೈಮಿಂಗ್​ ಹಾಗೂ ಏನೆಲ್ಲ ಚರ್ಚೆ ಆಗುತ್ತೆ? ಇಲ್ಲಿದೆ ವಿವರ

ಗೇಮ್ ಚೇ‌ಂಜರ್ ಸಭೆ ಆಗುತ್ತೆಂಬ ವಿಶ್ವಾಸವಿದೆ. ಇದೇ ನಮ್ಮ ಮೊದಲ ಅಸಲಿ ಜಯ ಎಂದು ಭಾವಿಸುತ್ತೇನೆ. ಸಂಸತ್ತ ಅಧಿವೇಶನ 20 ರ ನಂತರ ಪ್ರಾರಂಭವಾಗುತ್ತದೆ. ಪಾರ್ಲಿಮೆಂಟ್ ಸ್ಟ್ಯಾಟರ್ಜಿ ಬಗ್ಗೆ ಚರ್ಚೆ ಮಾಡುತ್ತೇವೆ. ಗೇಮ್ ಚೇ‌ಂಜರ್ ಸಭೆ ಇದಾಗಿರುತ್ತದೆ ಎಂಬ ವಿಶ್ವಾಸವಿದೆ. ಪಾಟ್ನಾ ಸಭೆ ಬಳಿಕ ಎನ್​​ಡಿಎ ಕೂಡ ಸಭೆ ಮಾಡುತ್ತಿದೆ. ಇದೇ ನಮ್ಮ ಮೊದಲ ಅಸಲಿ ಜಯ ಎಂದು ಭಾವಿಸುತ್ತೇನೆ. ನಾಳೆಯ ಸಭೆಯಲ್ಲಿ ಹಲವು ಪ್ರಮುಖ ವಿಷಯಗಳ ಚರ್ಚೆಯಾಗಲಿದೆ. 26 ಪಕ್ಷಗಳು ಇರುವುದರಿಂದ ಹತ್ತಾರು ವಿಷಯಗಳ ಮೇಲೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ಇದು ಒಂದೇ ಪಕ್ಷದ ಒಕ್ಕೂಟ ಅಲ್ಲ. ಎಲ್ಲ ಪಕ್ಷಗಳು ಒಟ್ಟಾಗಿ ಸೇರುತ್ತಿರುವ ಒಕ್ಕೂಟ. ಒಕ್ಕೂಟಕ್ಕೆ ಹೆಸರು ನೀಡಬೇಕು ಎಂಬುದನ್ನೂ ಕೂಡ ನಿರ್ಧಾರ ಮಾಡುತ್ತೇವೆ.ಸೀಟು ಹಂಚಿಕೆ ಸಂಬಂಧ ಮೈತ್ರಿಕೂಟ ನಿರ್ಧಾರ ಮಾಡುತ್ತೇವೆ.ಆದರೆ ಒಂದೇ ಸಭೆಯಲ್ಲಿ ಇದು ಅಂತಿಮವಾಗುವುದಿಲ್ಲ. ಯುಪಿಎ ಹೊರತುಪಡಿಸಿದ ಪಕ್ಷಗಳೂ ಕೂಡ ಒಕ್ಕೂಟದಲ್ಲಿವೆ ಎಂದು ತಿಳಿಸಿದ್ದಾರೆ.

ಜೆಡಿಎಸ್​ ವಿರುದ್ಧ ವೇಣುಗೋಪಾಲ್​ ವಾಗ್ದಾಳಿ

ಸೆಕ್ಯುಲರಿಸಂ ಮೇಲೆ ನಂಬಿಕೆ ಇರುವ ಹಾಗೂ ಸರ್ವಾಧಿಕಾರ ವಿರೋಧಿಸುವ ಯಾವ ಪಕ್ಷವನ್ನಾದರೂ ನಾವು ಸ್ವಾಗತಿಸುತ್ತೇವೆ. ಆದರೆ ಕೆಲ ಪ್ರಾದೇಶಿಕ ಪಕ್ಷಗಳು ಕಳೆದ ಚುನಾವಣೆಯಲ್ಲಿ ತನ್ನ ನಿಲುವು ಏನು ಎಂಬುದನ್ನು ಸಾಬೀತು ಮಾಡಿವೆ. ಜೆಡಿಎಸ್​ಗೆ ಆಹ್ವಾನ ಇದೆಯ ಎಂಬ ವಿಚಾರವಾಗಿ ಮಾತನಾಡಿದ ಅವರುಸರ್ವಾಧಿಕಾರಿ ಧೋರಣೆ ವಿರೋಧಿಸುವ ಯಾರು ಬೇಕಾದರೂ ನಮಗೆ ಕೈ ಜೋಡಿಸಬಹುದು. ಅವರಿಗೆ ಪ್ರತ್ಯೇಕವಾಗಿ ಆಹ್ವಾನ ನೀಡುವ ಅಗತ್ಯತೆ ಇಲ್ಲ ಎಂದು ತಿರುಗೇಟು ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ