ಕಲಬುರಗಿ, ನ.11: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ನಡೆಸಿದ ಎಫ್ಡಿಎ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಅಶೋಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಭ್ಯರ್ಥಿಗೆ ಉತ್ತರಗಳನ್ನು ನೀಡಿದ್ದ ಆರೋಪದ ಮೇಲೆ ಖಾಸಗಿ ಶಾಲೆಯ ದೈಹಿಕ ಶಿಕ್ಷಕ ಸಂತೋಷ್ ಗುತ್ತೇದಾರ್ನನ್ನು ಬಂಧಿಸಲಾಗಿದೆ.
ಸಂತೋಷ್ ಗುತ್ತೇದಾರ್ ಅಕ್ರಮ ಪ್ರಕರಣದ ಕಿಂಗ್ಪಿಂಗ್ ಆಗಿರುವ ಬಂಧಿತ ಆರೋಪಿ ಆರ್ಡಿ ಪಾಟೀಲ್ನ ಬೆಂಬಲಿಗನಾಗಿದ್ದಾನೆ. ಪ್ರಶ್ನೆ ಪತ್ರಿಕೆ ಫೋಟೋ ಕಾಪಿ ತೆಗೆದುಹಾಕಲು ಆರ್ಡಿ ಪಾಟೀಲ್, ಸಂತೋಷ್ನನ್ನು ಅಫಜಲಪುರ ಪರೀಕ್ಷಾ ಕೇಂದ್ರದಲ್ಲಿ ನೇಮಿಸಿದ್ದನು.
ಇದನ್ನೂ ಓದಿ: ಕೆಇಎ ಪರೀಕ್ಷೆಯಲ್ಲಿ ಅಕ್ರಮ: ಗೃಹ ಇಲಾಖೆ ಸೂಚನೆ ಮೇರೆಗೆ ತನಿಖೆ ಸಿಐಡಿಗೆ ಹಸ್ತಾಂತರ
ಆರ್ಡಿ ಪಾಟೀಲ್ನನ್ನು ಬಂಧಿಸಿ ಸ್ಥಳ ಮಹಜರು ನಡೆಸಿದ ಪೊಲೀಸರು, ಬಳಿಕ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. ಅಲ್ಲದೆ, ಕಲಬುರಗಿ 2ನೇ ಜೆಎಂಎಫ್‌ಸಿ ಕೋರ್ಟ್‌ನ ಜಡ್ಜ್ ಸ್ಮಿತಾ ಮುಂದೆ ಆರೋಪಿಯನ್ನು ಹಾಜರುಪಡಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ