ಕೆಇಎ ಪರೀಕ್ಷೆಯಲ್ಲಿ ಅಕ್ರಮ: ಗೃಹ ಇಲಾಖೆ ಸೂಚನೆ ಮೇರೆಗೆ ತನಿಖೆ ಸಿಐಡಿಗೆ ಹಸ್ತಾಂತರ‌‌

ಕೆಇಎ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿದ ಪ್ರಕರಣದ ತನಿಖೆಯನ್ನು ಶನಿವಾರ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. ಗೃಹ ಇಲಾಖೆಯ ಸೂಚನೆ ಮೇರೆಗೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹೀತೇಂದ್ರ ಸಿಐಡಿ ತನಿಖಾಧಿಕಾರಿಗೆ ಪ್ರಕರಣದ ಕಡತಗಳನ್ನು ಹಸ್ತಾಂತರ ಮಾಡಿದ್ದಾರೆ. ಯಾದಗಿರಿ ನಗರ ಠಾಣೆಯಲ್ಲಿ ಐದು ಪ್ರಕರಣಗಳು ದಾಖಲಾಗಿದ್ದವು.

ಕೆಇಎ ಪರೀಕ್ಷೆಯಲ್ಲಿ ಅಕ್ರಮ: ಗೃಹ ಇಲಾಖೆ ಸೂಚನೆ ಮೇರೆಗೆ ತನಿಖೆ ಸಿಐಡಿಗೆ ಹಸ್ತಾಂತರ‌‌
ಪ್ರಾತಿನಿಧಿಕ ಚಿತ್ರ
Follow us
ಅಮೀನ್​ ಸಾಬ್​
| Updated By: ಗಂಗಾಧರ​ ಬ. ಸಾಬೋಜಿ

Updated on:Nov 11, 2023 | 3:11 PM

ಯಾದಗಿರಿ, ನವೆಂಬರ್​​​​ 11: ಕೆಇಎ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿದ ಪ್ರಕರಣದ ತನಿಖೆಯನ್ನು ಶನಿವಾರ ಸಿಐಡಿ (CID) ಗೆ ಹಸ್ತಾಂತರ ಮಾಡಲಾಗಿದೆ. ಯಾದಗಿರಿ ನಗರ ಠಾಣೆಯಲ್ಲಿ ಐದು ಪ್ರಕರಣಗಳು ದಾಖಲಾಗಿದ್ದವು. ಗೃಹ ಇಲಾಖೆಯ ಸೂಚನೆ ಮೇರೆಗೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹೀತೇಂದ್ರ ಸಿಐಡಿ ತನಿಖಾಧಿಕಾರಿಗೆ ಪ್ರಕರಣದ ಕಡತಗಳನ್ನು ಹಸ್ತಾಂತರ ಮಾಡಿದ್ದಾರೆ.

ಕಿಂಗ್​ಪಿನ್​ ಆರ್​.ಡಿ ಪಾಟೀಲ್ ಬಂಧನ

KEA ಪರೀಕ್ಷೆ ಅಕ್ರಮ ಆರೋಪಿ ಕಿಂಗ್​ಪಿನ್​ ಆರ್​.ಡಿ ಪಾಟೀಲ್​ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದ ಲಾಡ್ಜ್ ನಲ್ಲಿದ್ದ ರುದ್ರಗೌಡನನ್ನು ಪತ್ತೆ ಮಾಡಿ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ 12 ದಿನಗಳಿಂದ ನಾಪತ್ತೆಯಾಗಿದ್ದ ಆರ್​.ಡಿ.ಪಾಟೀಲ್​ ಕಳೆದ ನವೆಂಬರ್​ 6ರಂದು ಕಾಂಪೌಂಡ್​ ಹಾರಿ ಭಾರಿ ಸುದ್ದಿಯಾಗಿದ್ದರು. ಸದ್ಯ ಆತನನ್ನು ಬಂಧಿಸಿ ಕಲಬುರಗಿಗೆ ತರಲಾಗಿದೆ.

ಇದನ್ನೂ ಓದಿ: ಕೆಇಎ ಪರೀಕ್ಷೆಯಲ್ಲಿ ಅಕ್ರಮ: ಬಂಧಿತ 16ರ ಪೈಕಿ 9 ಆರೋಪಿಗಳನ್ನು ಕಸ್ಟಡಿಗೆ ಪಡೆದ ಪೊಲೀಸ್​​

ಇನ್ನು ಆರ್​.ಡಿ. ಪಾಟೀಲ್​ಗೆ ಆಶ್ರಯ ನೀಡಿದ್ದ ಇಬ್ಬರನ್ನು ಬಂಧಿಸಲಾಗಿದೆ. KEA ಪರೀಕ್ಷಾ ಅಕ್ರಮ ಬಯಲಾಗ್ತಿದ್ದಂತೆ ನಾಪತ್ತೆಯಾಗಿದ್ದ ರುದ್ರಗೌಡ ನವೆಂಬರ್ 5ರಂದು ಕಲಬುರಗಿ ವರದಾ ಲೇಔಟ್​ನಲ್ಲಿರುವ ಮಹಾಲಕ್ಷ್ಮಿ ಅಪಾರ್ಟಮೆಂಟ್​ನಲ್ಲಿ ತಂಗಿದ್ದ. ಆದರೆ ಮಾರನೇ ದಿನ ಖಾಕಿ ಬರುವ ವಿಷಯ ತಿಳಿದು ರುದ್ರಗೌಡ ಎಸ್ಕೇಪ್ ಆಗಿದ್ದ. ಸದ್ಯ ಫ್ಲ್ಯಾಟ್ ಮಾಲೀಕ ಶಹಾಪುರದ ಶಂಕರ್​ಗೌಡ ಯಾಳವಾರ್ ಮತ್ತು ವ್ಯವಸ್ಥಾಪಕ ದಿಲೀಪ್​ನನ್ನು ಬಂಧಿಸಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಯಾದಗಿರಿ ಸೇರಿದಂತೆ ರಾಜ್ಯಾದ್ಯಂತ ಕೆಇಎ ನಡೆಸಿದ್ದ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿಯಿದ್ದ ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು. ಯಾದಗಿರಿ ಜಿಲ್ಲೆಯಲ್ಲೂ 17 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದಿತ್ತು. ಆದರೆ ಯಾದಗಿರಿ ನಗರದ 5 ಪರೀಕ್ಷೆ ಕೇಂದ್ರದಲ್ಲಿ ಅಕ್ರಮ ನಡೆದಿತ್ತು. ಪರೀಕ್ಷಾರ್ಥಿಗಳು ಬ್ಲೂಟೂತ್ ಬಳಸಿಕೊಂಡು ಪರೀಕ್ಷೆ ಬರೆಯುತ್ತಿದ್ದರು.

ಇದನ್ನೂ ಓದಿ: ಕೆಇಎ ಪರೀಕ್ಷಾ ಅಕ್ರಮ: ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ, ಸರ್ಕಾರ ಎಂಬ ಹೆಸರಿನ ಮೇಲೆ ಅಭ್ಯರ್ಥಿಗಳಿಗೆ ಫೋನ್ ಕರೆ

ತಕ್ಷಣ ಮಾಹಿತಿ ಪಡೆದ ಪೊಲೀಸರು ಐದು ಸೆಂಟರ್ ಗಳ ಮೇಲೆ ದಾಳಿ 9 ಜನರನ್ನ ವಶಕ್ಕೆ ಪಡೆದು ಬಂಧಿಸಿದ್ದರು. ಬಳಿಕ ವಿಚಾರಣೆ ನಡೆಸಿದ ಪೊಲೀಸರು ನೇರವಾಗಿ ನ್ಯಾಯಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಳಿಕ ಈ 9 ಜನರಿಗೆ ಹೊರಗಿದ್ದು ಉತ್ತರ ಹೇಳುತ್ತಿದ್ದ 7 ಜನರಿಗೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಆದರೆ ಕಡಿಮೆ ಅವಧಿಯಲ್ಲಿ ಪರಿಪೂರ್ಣವಾಗಿ ತನಿಖೆ ನಡೆಸಲು ಸಾಧ್ಯವಾಗದ ಕಾರಣಕ್ಕೆ ಪೊಲೀಸರು ತಮ್ಮ ಕಸ್ಟಡಿಗೆ ಆರೋಪಿಗಳನ್ನ ನೀಡುವಂತೆ ಸಿಜೆಎಂ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪರೀಕ್ಷೆ ಬರೆಯುತ್ತಿದ್ದ 9 ಜನರಿಗೆ 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಸಲ್ಲಿಸಿದ್ದರು. ಹೀಗಾಗಿ ನ್ಯಾಯಧೀಶರು 9 ಜನರಿಗೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:05 pm, Sat, 11 November 23