ಪರೀಕ್ಷಾ ಅಕ್ರಮ: ಕೋಟಿ ಕೋಟಿ ರೂ. ವ್ಯವಹಾರ, ತನಿಖೆ ವೇಳೆ ಬಯಲಾಯ್ತು ಆರ್‌ಡಿ ಪಾಟೀಲನ ಡೀಲಿಂಗ್
ಕಳೆದ ತಿಂಗಳ 28, 29 ರಂದು ನಡೆದಿರುವ ಕೆಇಎ ಪರೀಕ್ಷೆ ವೇಳೆ ಅಕ್ರಮವೆಸಗಿ ಯಾದಗಿರಿಯಲ್ಲಿ ಬಂಧಿತರಾಗಿರುವ ಸಿದ್ದರಾಮ ಸೇರಿ 15 ಜನರನ್ನ ವಿಚಾರಣೆ ನಡೆಸಲಾಗಿದ್ದು ಈ ವೇಳೆ ಡೀಲಿಂಗ್ನ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಆರ್.ಡಿ ಪಾಟೀಲ್ನಿಂದ ನಡೆದಿದೆ ಎನ್ನಲಾದ ಕೋಟಿ ಕೋಟಿ ರೂಪಾಯಿಗಳ ಡೀಲಿಂಗ್ ಬಯಲಾಗಿದೆ.
ಯಾದಗಿರಿ, ನ.12: ಇಡೀ ರಾಜ್ಯವನ್ನೆ ತಲ್ಲಣಗೊಳಿಸಿದ್ದ ಕೆಇಎ ಎಫ್‌ಡಿಎ ಪರೀಕ್ಷೆ ಹಗರಣದ (FDA Exam Scan) ಕಿಂಗ್‌ಪಿನ್ ಆರ್‌ಡಿ ಪಾಟೀಲ್ (RD Patil) ಕೊನೆಗೋ ಖಾಕಿ ಬೀಸಿದ ಬಲೆಗೆ ಬಿದ್ದಿದ್ದಾನೆ. ಸದ್ಯ ಆರ್.ಡಿ ಪಾಟೀಲ್ನಿಂದ ನಡೆದಿದೆ ಎನ್ನಲಾದ ಕೋಟಿ ಕೋಟಿ ರೂಪಾಯಿಗಳ ಡೀಲಿಂಗ್ ಬಯಲಾಗಿದೆ. ಪರೀಕ್ಷೆ ವೇಳೆ ಅರೆಸ್ಟ್ ಆದವರು ಈ ಅಕ್ರಮದ ಬಗ್ಗೆ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಆರೋಪಿ ಆರ್‌ಡಿ ಪಾಟೀಲ್ ಅಂದಾಜು 300 ಜನ ಅಭ್ಯರ್ಥಿಗಳಿಂದ 35 ರಿಂದ 40 ಕೋಟಿ ಹಣ ಪಡೆದಿರುವ ಬಗ್ಗೆ ಪೊಲೀಸರ ತನಿಖೆ ವೇಳೆ ಮಾಹಿತಿ ಸಿಕ್ಕಿದೆ. ಆರ್.ಡಿ ಪಾಟೀಲ್ ಜೊತೆಗೆ ಅಕ್ರಮ ನಡೆಸುವುದಕ್ಕೆಂದೇ ದೊಡ್ಡ ಟೀಮ್ ಇತ್ತು. ಎ.ಬಿ. ಹಾಗೂ ಸಿ ಹಂತದ ಗ್ರೂಪ್‌ಗಳ ಮೂಲಕ ಈತ ಅಕ್ರಮ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
ಅಕ್ರಮ ಎಸಗಲೆಂದೇ ಆರ್‌ಡಿ ಪಾಟೀಲ್ ಭರ್ಜರಿ ಸಿದ್ದತೆ ಮಾಡಿಕೊಂಡಿದ್ದ. A,B,C ಎಂಬ ಮೂರು ಗುಂಪುಗಳನ್ನು ವಿಂಗಡಿಸಿ ಎಲ್ಲರಿಗೂ ಕೆಲಸಗಳನ್ನು ಕೊಟ್ಟಿದ್ದ. ಎ ಗ್ರೂಪ್‌ನಲ್ಲಿ ಆರ್.ಡಿ ಪಾಟೀಲ್ ಹಾಗೂ ಇವನ ಜೊತೆ ಇನ್ನು ಮೂರು ಜನ ಇರ್ತಿದ್ದರು. ಆರ್.ಡಿ ಪಾಟೀಲ್ ಹೊರತು ಪಡಿಸಿ ಇನ್ನುಳಿದ ಮೂವರು ಪ್ರಶ್ನೆ ಪತ್ರಿಕೆ ತರೋದು, ಉತ್ತರ ರೆಡಿ ಮಾಡುವ ಕೆಲಸ ಮಾಡುತ್ತಿದ್ದರು. ಈ ಮೂರು ಜನರಲ್ಲಿ ಓರ್ವ ಸರ್ಕಾರಿ ನೌಕರನಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು ಬಿ ಗ್ರೂಪ್ ನಲ್ಲಿ ಇಬ್ಬರು ಕೆಲಸ ಮಾಡ್ತಾರೆ. ಒಬ್ಬ ಶಶಿಕುಮಾರ್ ಇನ್ನೊರ್ವ ಸಾಗರ್. ಶಶಿಕುಮಾರ್ ಹುದ್ದೆಗಳಿಗೆ ಅರ್ಜಿ ಹಾಕಿದವರ ಹೆಸರು ಮತ್ತು ಮೊಬೈಲ್ ನಂಬರ್ ಕಲೆಕ್ಟ್ ಮಾಡುವ ಕೆಲಸ ಮಾಡ್ತಾಯಿದ್ದ. ಸಾಗರ್ ಡೀಲ್ ಆದವರಿಗೆ ಡಿವೈಸ್ ಮತ್ತು ಬ್ಲೂಟೂತ್ ನೀಡ್ತಾಯಿದ್ದ. ಸಿ ಗುಂಪಿನಲ್ಲಿ 12 ಜನ ಇದ್ರು. ಅದರಲ್ಲೂ ಪ್ರಮುಖ ವ್ಯಕ್ತಿ ಸಿದ್ದರಾಮ ಎಲಿಯಾಸ್ ಪುಟ್ಟು. ಈ ಸಿದ್ದರಾಮ್ ಎಲಿಯಾಸ್ ಪುಟ್ಟು ಸಹ ಪರೀಕ್ಷೆ ಬರೆಯಲು ಹೋಗಿ ಯಾದಗಿರಿಯಲ್ಲಿ ಅರೆಸ್ಟ್ ಆಗಿದ್ದ. ಸಿದ್ದರಾಮ ಪರೀಕ್ಷೆಗೂ ಮುನ್ನ ಕಲಬುರ್ಗಿ ನಗರ ಪೈ ಹಾಗೂ ಸಂಗೀತ ಮೊಬೈಲ್ ಸ್ಟೋರ್ ನಲ್ಲಿ 12 ಮೊಬೈಲ್ ಹಾಗೂ 12 ಸೀಮ್ ಕಾರ್ಡ್ ಖರೀದಿ ಮಾಡಿದ್ದ.
ಇದನ್ನೂ ಓದಿ: FDA ಪರೀಕ್ಷೆಯಲ್ಲಿ ಅಕ್ರಮ ಕೇಸ್; ಪೊಲೀಸರು ಕರೆದೊಯ್ಯುವ ವೇಳೆ ಮಾಧ್ಯಮಗಳ ಮೇಲೆ ಪಾಟೀಲ್ ದರ್ಪ
SDAಗೆ 8 ಲಕ್ಷ, FDAಗೆ 22 ಲಕ್ಷ
ಖರೀದಿ ಮಾಡಿದ್ದ ಮೊಬೈಲ್ಗಳನ್ನ ತನ್ನ ಜೊತೆಗಿದ್ದ 11 ಜನರಿಗೆ ಮೊಬೈಲ್ ಫೋನ್ ನೀಡಿ ಜೊತೆಗೆ ಪ್ರತಿಯೊಬ್ಬರಿಗೆ 10 ಸಾವಿರ ರೂ. ಕೊಟ್ಟಿದ್ದ. ತನ್ನ ಬಳಿ ಒಂದು ಫೋನ್ ಉಳಿಸಿಕೊಂಡಿದ್ದ. ಇನ್ನು ಈ 12 ಜನರಿಗೆ ಶಶಿಕುಮಾರ್ ತಲಾ 20 ಜನರ ಹೆಸರು ಮತ್ತು ಮೊಬೈಲ್ ನಂಬರ್ ಕೊಟಿದ್ದ. ಲಿಸ್ಟ್ ಪಡೆದ ಎಲ್ಲರೂ ನಂಬರ್ಗಳಿಗೆ ಕಾಲ್ ಮಾಡಿ ಅಭ್ಯರ್ಥಿಗಳ ಜೊತೆ ಪರೀಕ್ಷೆಯ ಡೀಲ್ ಮಾಡಿಕೊಂಡಿದ್ದ. SDAಗೆ 8 ಲಕ್ಷ ಹಣ ಫಿಕ್ಸ್ ಮಾಡಿದ್ರೆ, FDAಗೆ 22 ಲಕ್ಷ ಹಣ ಫಿಕ್ಸ್ ಮಾಡಿದ್ರು. ಎಲ್ಲರ ಬಳಿ ಹಣ ಪಡೆದು ಸಿದ್ದರಾಮ ನೇರವಾಗಿ ಆರ್.ಡಿ ಪಾಟೀಲ್ಗೆ ನೀಡಿದ್ದ. ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೂ ಹಾಗೂ ಆರ್.ಡಿ ಪಾಟೀಲ್ಗೂ ನೇರವಾಗಿ ಸಂಪರ್ಕ ಇರ್ತಾಯಿರಲಿಲ್ಲ. ಹೀಗೆ ಉತ್ತರ ಕರ್ನಾಟಕ ಭಾಗದಲ್ಲೇ ಸುಮಾರು 300 ಜನರ ಜೊತೆ ಆರ್‌ಡಿ ಪಾಟೀಲ್ ಡೀಲ್ ಮಾಡಿಕೊಂಡಿದ್ದ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ