ತುಮಕೂರು: ಸೀಮೆಎಣ್ಣೆ ಸ್ಟೌವ್ ಸಿಡಿದು ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕಳೆದ 4 ದಿನಗಳ ಹಿಂದೆ ಪಾವಗಡ ತಾಲೂಕಿನ ಎ.ಹೆಚ್.ಪಾಳ್ಯದಲ್ಲಿ ಸ್ಟೌವ್ ಸ್ಫೋಟಗೊಂಡ ನವೀನ್(22) ಗಾಯಗೊಂಡಿದ್ದ. ಗಾಯಾಳು ನವೀನ್ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನವೀನ್(22) ಸಾವಿಗೀಡಾಗಿದ್ದಾನೆ. ವೈದ್ಯರ ನಿರ್ಲಕ್ಷ್ಯದಿಂದಲೇ ನವೀನ್ ಮೃತಪಟ್ಟಿದ್ದಾನೆಂದು ಪಾವಗಡ ಪಟ್ಟಣದ ರಸ್ತೆ ತಡೆ ನಡೆಸಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪಾವಗಡ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on
ತುಮಕೂರು: ಸೀಮೆಎಣ್ಣೆ ಸ್ಟೌವ್ ಸಿಡಿದು ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕಳೆದ 4 ದಿನಗಳ ಹಿಂದೆ ಪಾವಗಡ ತಾಲೂಕಿನ ಎ.ಹೆಚ್.ಪಾಳ್ಯದಲ್ಲಿ ಸ್ಟೌವ್ ಸ್ಫೋಟಗೊಂಡ ನವೀನ್(22) ಗಾಯಗೊಂಡಿದ್ದ.
ಗಾಯಾಳು ನವೀನ್ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನವೀನ್(22) ಸಾವಿಗೀಡಾಗಿದ್ದಾನೆ. ವೈದ್ಯರ ನಿರ್ಲಕ್ಷ್ಯದಿಂದಲೇ ನವೀನ್ ಮೃತಪಟ್ಟಿದ್ದಾನೆಂದು ಪಾವಗಡ ಪಟ್ಟಣದ ರಸ್ತೆ ತಡೆ ನಡೆಸಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪಾವಗಡ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.