Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇವ್ ಪಾರ್ಟಿ ಅಡ್ಡೆ ಮೇಲೆ ರೇಡ್​, ಆಯೋಜಕರು ಸೇರಿ 10 ಮಂದಿ ವಶಕ್ಕೆ

ರಾಮನಗರ: ವಿಭೂತಿಕೆರೆ ಬಳಿ ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿ ಅಡ್ಡೆ ಮೇಲೆ ರಾಮನಗರ ಪೊಲೀಸರ ದಾಳಿ ನಡೆಸಿ, 10 ಜನರನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಮೂಲದ ವೆಂಕಟೇಶ್ ಎಂಬುವರ ಸುಮಾರು 32 ಎಕೆರೆ ಜಮೀನಿನಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು. ಕೇರಳ, ತಮಿಳುನಾಡು, ಬೆಂಗಳೂರು ಸೇರಿದಂತೆ ಸುಮಾರು 500 ಮಂದಿ ಯುವಕ, ಯುವತಿಯರು ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ರು. ಆ್ಯಪ್ ಮೂಲಕ ಎಲ್ಲ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಿದ್ರು. ಬೆಂಗಳೂರಿನ ಮಧುಮಿತಾ ರೇವ್ ಪಾರ್ಟಿ ಆಯೋಜಿಸಿದ್ದರು. ಮಧುಮಿತಾಗೆ ಪೌರಾಣಿಕ್ […]

ರೇವ್ ಪಾರ್ಟಿ ಅಡ್ಡೆ ಮೇಲೆ ರೇಡ್​, ಆಯೋಜಕರು ಸೇರಿ 10 ಮಂದಿ ವಶಕ್ಕೆ
Follow us
ಸಾಧು ಶ್ರೀನಾಥ್​
|

Updated on:Dec 08, 2019 | 6:38 AM

ರಾಮನಗರ: ವಿಭೂತಿಕೆರೆ ಬಳಿ ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿ ಅಡ್ಡೆ ಮೇಲೆ ರಾಮನಗರ ಪೊಲೀಸರ ದಾಳಿ ನಡೆಸಿ, 10 ಜನರನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಮೂಲದ ವೆಂಕಟೇಶ್ ಎಂಬುವರ ಸುಮಾರು 32 ಎಕೆರೆ ಜಮೀನಿನಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು.

ಕೇರಳ, ತಮಿಳುನಾಡು, ಬೆಂಗಳೂರು ಸೇರಿದಂತೆ ಸುಮಾರು 500 ಮಂದಿ ಯುವಕ, ಯುವತಿಯರು ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ರು. ಆ್ಯಪ್ ಮೂಲಕ ಎಲ್ಲ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಿದ್ರು. ಬೆಂಗಳೂರಿನ ಮಧುಮಿತಾ ರೇವ್ ಪಾರ್ಟಿ ಆಯೋಜಿಸಿದ್ದರು. ಮಧುಮಿತಾಗೆ ಪೌರಾಣಿಕ್ ಪುರೋಹಿತ್, ನಬಿರಾ, ರಿಚು ಸೇರಿ ಹಲವರು ಕಾರ್ಯಕ್ರಮ ನಡೆಸಲು ಸಹಕಾರ ನೀಡಿದ್ರು.

ರಾಮನಗರ ಎಸ್​ಪಿ ಅನೂಪ್ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಸಿ ಆಯೋಜಕರು ಸೇರಿದಂತೆ 10 ಜನರನ್ನು ವಶಕ್ಕೆ ಪಡೆದಿದ್ದಾರೆ. ಮದ್ಯ, ಡಿಜೆ ಬಾಕ್ಸ್​ಗಳು, ಶಾಮಿಯಾನ, ಕ್ಯಾಮರಾ, ಬಸ್, ಕಾರು ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

Published On - 6:35 am, Sun, 8 December 19