ಬಲವಂತದಿಂದ ಶಿಕ್ಷಕಿ ವರ್ಗಾವಣೆ, ಮಾನವೀಯತೆ ಮರೆತ ಶಿಕ್ಷಣ ಇಲಾಖೆ
ರಾಯಚೂರು: ನಿಯಮಗಳನ್ನು ಗಾಳಿಗೆ ತೂರಿ ಬಲವಂತದಿಂದ ಪ್ರಾಥಮಿಕ ಶಾಲಾ ಶಿಕ್ಷಕಿಯನ್ನು ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಶಿಕ್ಷಣ ಇಲಾಖೆ ಮಾನವೀಯತೆಯನ್ನು ಮರೆತಿದೆ. ಜಹೀರಾಬಾದ್ ಶಾಲೆಯಿಂದ ಮಟಮಾರಿ ಗ್ರಾಮದ ಸರ್ಕಾರಿ ಶಾಲೆಗೆ ಶಿಕ್ಷಕಿ ಶಾಂತಲಕ್ಷ್ಮೀಯನ್ನು ಎತ್ತಂಗಡಿ ಮಾಡಿದ್ದಾರೆ. ಪತಿಯನ್ನು ಕಳೆದುಕೊಂಡು ವಿಶೇಷಚೇತನ ಮಗುವಿನ ಜತೆ ಶಿಕ್ಷಕಿ ಶಾಂತಲಕ್ಷ್ಮೀ ಜೀವನ ನಡೆಸುತ್ತಿದ್ದಾರೆ. 10 ವರ್ಷ ಸೇವಾವಧಿ ಮುಗಿಯದೇ ಇದ್ರೂ ನಿಯಮ ಉಲ್ಲಂಘಿಸಿ ಬಲವಂತದಿಂದ ವರ್ಗಾಗಣೆ ಮಾಡಿ ಅಧಿಕಾರಿಗಳು ಹಿಂಸೆ ನೀಡ್ತಿದ್ದಾರೆ. ಈಗ ವರ್ಗಾವಣೆ ಮಾಡಿದರೆ ಇಂತಹ ಮಗುವಿನ ಜೊತೆ ಜೀವನ […]
ರಾಯಚೂರು: ನಿಯಮಗಳನ್ನು ಗಾಳಿಗೆ ತೂರಿ ಬಲವಂತದಿಂದ ಪ್ರಾಥಮಿಕ ಶಾಲಾ ಶಿಕ್ಷಕಿಯನ್ನು ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಶಿಕ್ಷಣ ಇಲಾಖೆ ಮಾನವೀಯತೆಯನ್ನು ಮರೆತಿದೆ. ಜಹೀರಾಬಾದ್ ಶಾಲೆಯಿಂದ ಮಟಮಾರಿ ಗ್ರಾಮದ ಸರ್ಕಾರಿ ಶಾಲೆಗೆ ಶಿಕ್ಷಕಿ ಶಾಂತಲಕ್ಷ್ಮೀಯನ್ನು ಎತ್ತಂಗಡಿ ಮಾಡಿದ್ದಾರೆ.
ಪತಿಯನ್ನು ಕಳೆದುಕೊಂಡು ವಿಶೇಷಚೇತನ ಮಗುವಿನ ಜತೆ ಶಿಕ್ಷಕಿ ಶಾಂತಲಕ್ಷ್ಮೀ ಜೀವನ ನಡೆಸುತ್ತಿದ್ದಾರೆ. 10 ವರ್ಷ ಸೇವಾವಧಿ ಮುಗಿಯದೇ ಇದ್ರೂ ನಿಯಮ ಉಲ್ಲಂಘಿಸಿ ಬಲವಂತದಿಂದ ವರ್ಗಾಗಣೆ ಮಾಡಿ ಅಧಿಕಾರಿಗಳು ಹಿಂಸೆ ನೀಡ್ತಿದ್ದಾರೆ. ಈಗ ವರ್ಗಾವಣೆ ಮಾಡಿದರೆ ಇಂತಹ ಮಗುವಿನ ಜೊತೆ ಜೀವನ ಸಾಗಿಸುವುದು ಕಷ್ಟವಾಗುತ್ತೆ. ಹೀಗಾಗಿ ತನ್ನ ವರ್ಗಾವಣೆ ಹಿಂಪಡೆಯುವಂತೆ ಕಲಬುರ್ಗಿ ವಿಭಾಗದ ಶಿಕ್ಷಣ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಕಲಬುರ್ಗಿ ವಿಭಾಗದ ಶಿಕ್ಷಣ ಆಯುಕ್ತರ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ. ಶಿಕ್ಷಕಿಯ ಗೋಳು ಕೇಳದೆ ಪರಿಶೀಲಿಸುತ್ತೇನೆಂದು ಕಲಬುರ್ಗಿ ವಿಭಾಗದ ಶಿಕ್ಷಣ ಆಯುಕ್ತ ನಳೀನ್ ಅತುಲ್ ನಯವಾಗಿ ಜಾರಿಕೊಂಡಿದ್ದಾರೆ. ವಿಶೇಷಚೇತನ ಮಗುವಿನ ಜೊತೆ ಅಧಿಕಾರಿಗಳತ್ತ ತೆರಳಿ ಬಲವಂತದ ವರ್ಗಾವಣೆ ಕೈ ಬಿಡುವಂತೆ ಶಿಕ್ಷಕಿ ಅಳಲು ತೋಡಿಕೊಳ್ತಿದ್ದಾರೆ.
Published On - 7:49 am, Sun, 8 December 19