ಬೆಂಗಳೂರು: ತಮ್ಮ ರಾಜ್ಯಕ್ಕೆ ವಾಪಸಾಗಲು ನೋಂದಣಿಗೆ ಬಂದಿದ್ದ ವಲಸೆ ಕಾರ್ಮಿಕನ ಮೇಲೆ ಕೆ.ಜಿ.ಹಳ್ಳಿ ಠಾಣೆ ASI ರಾಜಾಸಾಬ್ ದರ್ಪ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಲಸ ಅರಸಿ ಬಂದಿದ್ದ ವಲಸೆ ಕಾರ್ಮಿಕರು ತಮ್ಮ ತವರಿಗೆ ತೆರಳಲು ನೋಂದಣಿ ಮಾಡಿಸಲೆಂದು ಕೆ.ಜಿ.ಹಳ್ಳಿ ಠಾಣೆಗೆ ಬಂದಿದ್ದಾರೆ. ಈ ವೇಳೆ ASI ರಾಜಾಸಾಬ್ ಇಲ್ಲಿ ನೋಂದಣಿ ಮಾಡಲ್ಲ ಮಾರ್ಕೆಟ್‌ಗೆ ಹೋಗಿ ಎಂದು ಹಲ್ಲೆಗೆ ಮುಂದಾಗಿದ್ದಾರೆ.
ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕನ ಮೇಲೆ ಕೈಮಾಡಿ, ಬೂಟು ಕಾಲಲ್ಲಿ ಹೊಡೆಯಲು ಮುಂದಾಗಿದ್ದಾರೆ. ಎಎಸ್‌ಐ ದರ್ಪ ತೋರಿಸಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಬೆಂಗಳೂರಿನಲ್ಲಿರುವ ಉತ್ತರ ಪ್ರದೇಶದ ಕಾರ್ಮಿಕರ ನೆರವಿಗೆ ಧಾವಿಸುವಂತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ಗೆ ವಿಡಿಯೋ ಟ್ಯಾಗ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.
Published On - 10:42 am, Mon, 11 May 20