ಕೆಐಎಬಿ: ಕೆಂಪೇಗೌಡ ಏರ್ಪೋರ್ಟ್ನಲ್ಲಿ 3 ದಿನಗಳ ಕಾಲ ಹೈಟೆಕ್ ತಂತ್ರಜ್ಞಾನದ ಪ್ರದರ್ಶನ, ಪ್ರಯಾಣಿಕರ ಸುರಕ್ಷತೆಗಾಗಿ ಅತ್ಯಾಧುನಿಕ ಸಲಕರಣೆಗಳ ಶೋ!
KIAB Airport Security Technology Show: ಕೆಂಪೇಗೌಡ ಏರ್ಪೋರ್ಟ್ನಲ್ಲಿ ಯಾವೆಲ್ಲಾ ರೀತಿಯ ತಂತ್ರಜ್ಞಾನವಿದೆ ಅನ್ನೂದನ್ನ ಪ್ರಯಾಣಿಕರಿಗೆ ತಿಳಿಸುವ ನಿಟ್ಟಿನಲ್ಲಿ ಈ ಪ್ರದರ್ಶನ ಹಮ್ಮಿಕೊಂಡಿದ್ದು ಇದ್ರಿಂದ ಪ್ರಯಾಣಿಕರ ಆತಂಕ ದೂರವಾಗಲಿದೆ ಅನ್ನುತ್ತಾರೆ ಕೆಂಪೇಗೌಡ ಏರ್ಪೋಟ್ ಎಂಡಿ ಹರಿಹರನ್
ದೇವನಹಳ್ಳಿ, ಆಗಸ್ಟ್ 5: ಸಿಲಿಕಾನ್ ಸಿಟಿಗೆ ಹೆಗ್ಗಳಿಕೆ ಎಂಬಂತೆ ಕೆಂಪೇಗೌಡ ಏರ್ಪೋರ್ಟ್ನ ಗಾರ್ಡನ್ ಟರ್ಮಿನಲ್ ಹಾಗೂ ಹೈಟೆಕ್ ಭದ್ರತೆ ದೇಶದ ಗಮನ ಸೆಳೆಯುತ್ತಿದೆ. ಹೀಗಾಗೆ ದೇಶದ ಗಮನ ಸೆಳೆಯುತ್ತಿರುವು ಕೆಐಎಬಿಯಲ್ಲಿ ಯಾವೆಲ್ಲ ಅತ್ಯಾಧುನಿಕ ತಂತ್ರಜ್ನಾನ ಬಳಸಿಕೊಳ್ಳಲಾಗ್ತಿದೆ ಅನ್ನೂದನ್ನ ತೋರಿಸಲು ಸುರಕ್ಷತಾ ಎಕ್ಸಿಬಿಷನ್ ಹಮ್ಮಿಕೊಂಡಿದ್ದು ಹೈಟೆಕ್ ತಂತ್ರಜ್ಞಾನದ ಅನಾವರಣ ಮಾಡಿದ್ದಾರೆ. ಹಚ್ಚ ಹಸಿರಿನ ಗಾರ್ಡನ್ ಟರ್ಮಿನಲ್ ಎಲ್ಲೆಡೆ ಕಣ್ಣಾಡಿಸಿದಷ್ಟು ದೂರ ಕಾಣುವ ಕಣ್ಮನ ಸೆಳೆಯುವಂತಹ ಹಚ್ಚ ಹಸಿರು ಗಾರ್ಡನ್ ಜೊತೆಗೆ ಪ್ರಯಾಣಿಕರನ್ನ ಸೆಳೆಯುವಂತಹ ಕೃತಕ ವಾಟರ್ ಫಾಲ್ಸ್. ಅಂದಹಾಗೆ ಇಷ್ಟೆಲ್ಲ ಅದ್ಬುತ ಪರಿಸರ ಹೊಂದಿರಬೇಕಾದ್ರೆ ಇಲ್ಲಿಯ ಭದ್ರತೆಯು (Passenger Safety) ಅಷ್ಟೆ ಮುಖ್ಯ ಹೀಗಾಗೆ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಪ್ರದರ್ಶನ (KIAB Airport Security Technology Show) ಮಾಡಿದ್ದು ಏರ್ಪೋರ್ಟ್ ಸುತ್ತಲಿನ ಫೆನ್ಸಿಂಗ್ ಕಾಂಪೊಂಡ್, ವಾಕಿಟಾಕಿ, ಲಗೇಜ್ ಸ್ಕ್ಯಾನರ್ ಕಂಡು ಪ್ರಯಾಣಿಕರು ಅಚ್ಚರಿಗೊಳಗಾಗಿದ್ದಾರೆ.
ಅಂದಹಾಗೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದಿಂದ ಪ್ರತಿನಿತ್ಯ ಸಾವಿರಾರು ಜನ ದೇಶ ವಿದೇಶಗಳಿಗೆ ಪ್ರಯಾಣ ಬೆಳೆಸುತ್ತಾರೆ. ಹೀಗಾಗೆ ಏರ್ಪೋರ್ಟ್ ನಿಂದ ಪ್ರಯಾಣಿಸುವ ಪ್ರಯಾಣಿಕರ ಪ್ರಯಾಣಕ್ಕೆ ಯಾವುದೇ ಅಡ್ಡಿ ಆತಂಕ ಉಂಟಾಗಬಾರದು ಅಂತ ಏರ್ಪೋರ್ಟ್ ಆಡಳಿತ ಮಂಡಳಿ ಸಾಕಷ್ಟು ಅತ್ಯುನ್ನತ ತಂತ್ರಜ್ಞಾನ ಬಳಸಿದೆ. ಏರ್ಪೋರ್ಟ್ನ ಟರ್ಮಿನಲ್ 2 ರಲ್ಲಿ ಬೆಳೆಸಿರುವ ಗಾರ್ಡನ್ ನಲ್ಲಿ ಗಿಡಗಳು ಒಣಗದಂತೆ ಕೃತಕವಾಗಿ ಗಿಡಗಳಿಗೆ ನೀರು ಗೊಬ್ಬರ ಹಾಗೂ ಬೇಕಾದ ಹಾರೈಕೆ ನೀಡಲು ಇಂಟರ್ ನೆಟ್ ಸೆನ್ಸರ್ಗಳ ಮೂಲಕ ಕಾರ್ಯ ನಿರ್ವಹಿಸಿಸುತ್ತಿದ್ದಾರೆ.
ಜೊತೆಗೆ ಏರ್ಪೋರ್ಟ್ 4 ಸಾವಿರ ಎಕರೆ ಪ್ರದೇಶದಲ್ಲಿದ್ದು ನಾಲ್ಕು ಕಿಲೋಮೀಟರ್ಗಳ 2 ರನ್ ವೇಗಳನ್ನ ಸಹ ಹೊಂದಿದೆ. ಹೀಗಾಗಿ ಏರ್ಪೋರ್ಟ್ನ ರನ್ ವೇಗೆ ಹಾಗೂ ಟರ್ಮಿನಲ್ ಒಳ ಭಾಗಕ್ಕೆ ಯಾರೊಬ್ಬರೂ ನುಸುಳದಂತೆ ಅತ್ಯಾಧುನಿಕ ತಂತ್ರಜ್ಞಾನದ ಫೆನ್ಸಿಂಗ್ ಅಳವಡಿಸಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಯಾರಾದ್ರು ಏರ್ಪೋರ್ಟ್ ಫೆನ್ಸಿಂಗ್ ದಾಟಿ ಒಳನುಸುಳಲು ಯತ್ನ ಮಾಡಿದ್ರೆ ವಿದ್ಯುತ್ ಶಾಕ್ ಜೊತೆಗೆ ಒಳ ನುಸುಳಲು ಬಂದವರ ಚಲನ ವಲನಗಳನ್ನ 360 ಡಿಗ್ರಿಯ ಕ್ಯಾಮರಾ ಸೆರೆಹಿಡಿಯುತ್ತೆ. ಜೊತೆಗೆ ಒಳ ನುಸುಳುಕೋರರು ಎಲ್ಲೆಲಿ ಹೋಗ್ತಿದ್ದಾರೆ ಏನೇನು ಮಾಡ್ತಿದ್ದಾರೆ ಅನ್ನೂದನ್ನ ಗಮನಿಸುತ್ತಲೆ ಸಮೀಪದ ಏರ್ಪೋರ್ಟ್ ಭದ್ರತಾ ಸಿಬ್ಬಂದಿಗೆ ಅಲರ್ಟ್ ಸಂದೇಶ ನೀಡುತ್ತೆ ಎನ್ನುತ್ತಾರೆ ಸಂದೇಶ್ ಕುಮಾರ್ ಭದ್ರತಾ ಫೆನ್ಸಿಂಗ್ ನಿರ್ವಹಣೆ ತಜ್ಞ.
ಫೆನ್ಸಿಂಗ್ ಜೊತೆಗೆ ದಿನದ 24 ಗಂಟೆಯು ಏರ್ಪೋರ್ಟ್ ಕಾಂಪೋಂಡ್ ಬಳಿ ಕಾವಲು ಕಾಯುವ ಯೋಧರಿಗೂ ಅನುಕೂಲವಾಗುವಂತೆ ನಿಂತ ಸ್ಥಳದಿಂದ 800 ಮೀಟರ್ ವರೆಗೂ ಕ್ಲಿಯರ್ ಜೂಂ ಮಾಡಿ ನೋಡುವಂತಹ ಸಲಕರಣೆಗಳನ್ನ ನೀಡಲಾಗಿದ್ದು ಅದನ್ನು ಸಹ ಪ್ರದರ್ಶನಕ್ಕಿಟ್ಟಿದ್ದಾರೆ. ಜೊತೆಗೆ ಎಲ್ಲೆಡೆ ವಾಕಿ ಟಾಕಿಗಳು ನಿಗದಿತ ರೇಂಜಿನಲ್ಲಿ ಮಾತ್ರ ಕೆಲಸ ನಿರ್ವಹಿಸಿದ್ರೆ ಏರ್ಪೋರ್ಟ್ನ ವಾಕಿಟಾಕಿಗಳಲ್ಲಿ ಸಿಮ್ ಸಹಾಯದಿಂದ ದೇಶದ ಇತರೆಡೆಗೆ ಕರೆ ಮಾಡಿ ಮಾಹಿತಿ ನೀಡಬಹುದಾದಂತ ಅತ್ಯಾಧುನಿಕ ತಂತ್ರ ಜ್ಞಾನವಿದೆ.
ಪ್ರಯಾಣಿಕರು ಹೆಚ್ಚು ಲಗೇಜ್ ತಂದಾಗ ಅದರಲ್ಲಿ ಏನಿದೆ ಅನ್ನೂದನ್ನ ನೋಡಲು ಹೈಟೆಕ್ ಲಗೇಜ್ ಸ್ಕ್ಯಾನರ್ ಯಂತ್ರಗಳನ್ನ ಸಹ ಅಳವಡಿಸಲಾಗಿದ್ದು ಪ್ರಯಾಣಿಕರು ಕಡಿಮೆ ಅವಧಿಯಲ್ಲಿ ಸೆಕ್ಯುರಿಟಿ ಚೆಕಿಂಗ್ ಮುಗಿಸಿಕೊಂಡು ಹೋಗ ಬಹುದಾಗಿದೆ. ಇನ್ನು ಏರ್ಪೋರ್ಟ್ ಯಾವೆಲ್ಲಾ ರೀತಿಯ ತಂತ್ರಜ್ಞಾನವಿದೆ ಎಷ್ಟು ಸುರಕ್ಷಿತವಾಗಿದೆ ಅನ್ನೂದನ್ನ ಪ್ರಯಾಣಿಕರಿಗೆ ತಿಳಿಸುವ ನಿಟ್ಟಿನಲ್ಲಿ ಈ ಪ್ರದರ್ಶನವನ್ನ ಹಮ್ಮಿಕೊಂಡಿದ್ದು ಇದ್ರಿಂದ ಪ್ರಯಾಣಿಕರ ಆತಂಕ ದೂರವಾಗಲಿದೆ ಅಂತ ಕೆಂಪೇಗೌಡ ಏರ್ಪೋರ್ಟ್ನ ಎಂಡಿ ಹರಿಹರನ್ ತಿಳಿಸಿದ್ದಾರೆ.
ಒಟ್ಟಾರೆ ದಿನದ 24 ಗಂಟೆಯು ಪ್ರಯಾಣಿಕರ ಓಡಾಟದಿಂದ ಸದಾ ಬ್ಯುಸಿಯಾಗಿರುವ ಕೆಂಪೇಗೌಡ ಏರ್ಪೋರ್ಟ್ನ ಆಡಳಿತ ಮಂಡಳಿ ಕಾಲಕಾಲಕ್ಕೆ ದೇಶದ ಇತರೆ ಏರ್ಪೋರ್ಟ್ ಗಳಿಗಿಂತ ಭಿನ್ನವಾಗಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತಿದೆ.
ದೇವನಹಳ್ಳಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ