ಶಿರೂರು ಗುಡ್ಡಕುಸಿತ: ಧರಾಶಾಯಿಯಾದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಅಪ್ಪನಿಗಾಗಿ ಕಾಯುತ್ತಿವೆ ಮೂರು ಮಕ್ಕಳು!
ಗುಡ್ಡ ಕುಸಿತವುಂಟಾದಾಗ ಹೋಟೆಲ್ ನಲ್ಲಿ 15-20 ಜನ ಇದ್ದರಂತೆ. ಮಣ್ಣಿನಡಿ ಸಿಲುಕಿ ಎಷ್ಟು ಜನ ಸತ್ತಿದ್ದಾರೆ ಅನ್ನೋದು ನಿಖರವಾಗಿ ಗೊತ್ತಾಗುತ್ತಿಲ್ಲ. ಮಣ್ಣು ತೆರವು ಮಾಡುವ ಕಾರ್ಯಾಚರಣೆ ಮಳೆಯ ಕಾರಣ ನಿಧಾನಗತಿಯಲ್ಲಿ ಸಾಗುತ್ತಿದೆ. ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಇವತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೋಗಿದ್ದರು.
ಕಾರವಾರ: ಈ ಮಕ್ಕಳ ವೇದನೆ ಸಂಕಟವನ್ನುಂಟು ಮಾಡುತ್ತದೆ. ಇವರ ತಂದೆ ಜಗನ್ನಾಥ 4 ದಿನಗಳ ಹಿಂದೆ ಶಿರೂರು ಬಳಿ ಗುಡ್ಡಕುಸಿತವುಂಟಾದಾಗ ಅದರಡಿ ಸಿಲುಕಿದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಗುಡ್ಡ ಕುಸಿತ ನಡೆದ ದಿನದಿಂದ ಜಗನ್ನಾಥ ನಾಪತ್ತೆಯಾಗಿದ್ದಾರೆ. ದುರ್ಘಟನೆ ನಡೆದಾಗ ಅವರು ಹೋಟೆಲ್ ನಲ್ಲಿದ್ದರಂತೆ. ಈ ಹೋಟೆಲ್ ಅನ್ನು ಜಗನ್ನಾಥ ಅವರ ಪತ್ನಿಯ ಅಣ್ಣ ನಡೆಸುತ್ತಿದ್ದರು. ಮಕ್ಕಳ ಮಾತು ಕೇಳುತ್ತಿದ್ದರೆ ಜಗನ್ನಾಥ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ ಅದರೆ ಇದುವರೆಗೆ ದೇಹ ಸಿಕ್ಕಿಲ್ಲ. ನಮ್ಮ ತಂದೆಯ ದೇಹವನ್ನಾದರೂ ಹುಡುಕಿಕೊಡಿ ಅಂತ ಮಕ್ಕಳು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಮೂರು ಹೆಣ್ಣುಮಕ್ಕಳ ಕುಟುಂಬಕ್ಕೆ ಕೇವಲ ಜಗನ್ನಾಥ ಮಾತ್ರ ಅನ್ನ ಸಂಪಾದಿಸುವ ವ್ಯಕ್ತಿಯಾಗಿದ್ದರು. ಮಕ್ಕಳು ಆನಾಥರಅಗಿರುವುದರಿಂದ ದೊಡ್ಡ ಮಗಳಿಗೆ ಕೆಲಸ ಕೊಡಿಸಿ ಅಂತ ಜಿಲ್ಲಾಧಿಕಾರಿಗಳಿಗೆ ಅವರ ಚಿಕ್ಕಪ್ಪ ಮನವಿ ಮಾಡಿದ್ದು ಡಿಸಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರಂತೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾರವಾರದ ಶಿರೂರು ಬಳಿ ನಡೆದ ಗುಡ್ಡಕುಸಿತ ಮತ್ತು ಅನಾಹುತಗಳ ಮಾಹಿತಿ ನೀಡಿದ ಕೃಷ್ಣ ಭೈರೇಗೌಡ