ಬರದ ಗೃಹಲಕ್ಷ್ಮಿ ಹಣ; ಸಿದ್ದರಾಮಯ್ಯ ಸರ್ಕಾರಕ್ಕೆ ಹಿಡಿಶಾಪ ಹಾಕ್ತಿರುವ ಮಹಿಳೆಯರು
ರಾಜ್ಯದಲ್ಲಿ ಈಗ ಏನಿದ್ರು ಹಗರಣಗಳ ಚರ್ಚೆ ಶುರುವಾಗಿದೆ. ನಿಮ್ಮದು ಇಷ್ಟು ಕೋಟಿ ಹಗರಣವಾಗಿದೆ ಎಂದು ದಿನ ಬೆಳಗಾದರೆ ಹೋರಾಟ. ಇದಕ್ಕೆ ಪ್ರತಿಯಾಗಿ ಇನ್ನೊಬ್ಬರ ವಾದ. ನೀವು ಸಹ ಸಾಚಾ ಅಲ್ಲ, ನೂರಾರು ಕೋಟಿ ನುಂಗಿದ್ದೀರಿ ಎಂಬ ಆರೋಪ. ಇದರ ನಡುವೆ ಗ್ಯಾರಂಟಿಗಳಿಗೆ ಗತಿ ಇಲ್ಲದಂತಾಗಿದೆ. ಇದೀಗ ಗೃಹಲಕ್ಷ್ಮಿ ನಂಬಿಕೊಂಡು ಕುಳಿತ ಲಕ್ಷಾಂತರ ಮಹಿಳೆಯರು ಸಿದ್ದು ಸರ್ಕಾರಕ್ಕೆ ಹಿಡಿ ಶಾಪಾ ಹಾಕುತ್ತಿದ್ದಾರೆ. ಇಲ್ಲಿದೆ ಎರಡು ಸಾವಿರದ ನಿರೀಕ್ಷೆಯಲ್ಲಿದ್ದ ಮಹಿಳೆಯ ಆಕ್ರೋಶದ ಸ್ಟೋರಿ.
ದಾವಣಗೆರೆ, ಜು.20: ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ, ಪಂಚ ಗ್ಯಾರಂಟಿಗಳನ್ನ ಮುಂದಿಟ್ಟು ಮತ ಕೇಳಿತ್ತು. ಮೇಲಾಗಿ ಈ ಗ್ಯಾರಂಟಿ ಕಾರ್ಡಗಳ ಮೇಲೆ ಸಿದ್ದರಾಮಯ್ಯ(Siddaramaiah)ಯ ಹಾಗೂ ಡಿಕೆ ಶಿವಕುಮಾರ್ ಅವರ ಸಹಿ ಸಹ ಇತ್ತು. ಈ ಗ್ಯಾರಂಟಿಗಳು ಗೆಲುವಿನ ಅಬ್ಬರದಲ್ಲಿದ್ದ ಬಿಜೆಪಿಗೆ ಬಿಸಿ ಮುಟ್ಟಿಸಿತ್ತು. ಈ ಗ್ಯಾರಂಟಿಗಳು ವಿಧಾನ ಸಭೆ ಚುನಾವಣೆಯಿಂದ ಲೋಕ ಸಭೆ ಚುನಾವಣೆಯ ತನಕ ಚೆನ್ನಾಗಿಯೇ ಇದ್ದವು. ಲಕ್ಷಾಂತರ ಜನ ಮಹಿಳೆಯರು ಸರ್ಕಾರಿ ಬಸ್ಸಿನ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ, ಮನೆಯ ಕರಂಟ್ ಬಿಲ್ ಉಚಿತ, ಅನ್ನ ಭಾಗ್ಯ ಹಾಗೂ ಮನೆ ಒಡತಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿಯ ಗೃಹಲಕ್ಷ್ಮಿ(Gruha Lakshmi Scheme), ಇಷ್ಟು ಗ್ಯಾರಂಟಿ ಯೋಜನೆ ಕೊಟ್ಟರು ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ರಾಜ್ಯದ ಜನ ಕಾಂಗ್ರೆಸ್ಸಿಗೆ ಬೆಂಬಲಿಸಲಿಲ್ಲ. ಇದೇ ಕಾರಣಕ್ಕೋ ಎನೋ ಲೋಕಸಭಾ ಚುನಾವಣೆ ಬಳಿಕ ಗೃಹಲಕ್ಷ್ಮಿ ದುಡ್ಡು ಬಂದಿಲ್ಲ.
ಸರ್ಕಾರದ ಮೇಲೆ ಮಹಿಳೆಯರು ಆಕ್ರೋಶ
ಹೌದು, ಬ್ಯಾಂಕಿಗೆ ಹೋಗಿ ಹತ್ತಾರು ಸಲ ಪಾಸ್ಬುಕ್ನಲ್ಲಿ ಎಂಟ್ರಿ ಮಾಡಿಸಿಕೊಂಡು ಬಂದಿದ್ದಾರೆ. ಆದರೆ, ಸರ್ಕಾರ ಹಣ ಮಾತ್ರ ಹಾಕಿಲ್ಲ. ಕಳೆದ ಮೇ ನಾಲ್ಕರಂದು ಹಾಕಿದ್ದೆ ಕೊನೆ, ಬಳಿಕ ಯಾವುದೇ ರೀತಿಯ ಹಣ ಮಹಿಳೆಯರ ಪಾಸ್ ಬುಕ್ಕಿಗೆ ಬಂದಿಲ್ಲ. ಎರಡು ತಿಂಗಳಿಂದ ಹಣ ಹಾಕಿಲ್ಲ. ಈಗ ಹಾಕಿದ್ರೆ ಎರಡು ತಿಂಗಳ ಹಣ ಹಾಕಬೇಕಾಗುತ್ತದೆ. ಇದರಿಂದ ಸಿದ್ದರಾಮಯ್ಯ ಸರ್ಕಾರದ ಮೇಲೆ ಮಹಿಳೆಯರು ಆಕ್ರೋಶಗೊಂಡಿದ್ದಾರೆ.
ಇದನ್ನೂ ಓದಿ:ಗೃಹಲಕ್ಷ್ಮಿ ಯೋಜನೆ ಹಣ ಕೊಂಚ ತಡವಾದರೂ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ
ಒಟ್ಟಾರೆ ಗೃಹಲಕ್ಷ್ಮಿ ಹಣ ಬರದಿರುವುದು ಒಂದು ಕಡೆಯಾದ್ರೆ, ಸರ್ಕಾರ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುತ್ತಿಲ್ಲ. ಎಲ್ಲಿ ನೋಡಿದರಲ್ಲಿ ಮಹಿಳೆಯರು ಸಿದ್ದು ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಗೃಹ ಲಕ್ಷ್ಮಿ ಹಣ ಬಂದ ಬಳಿಕ ಮಕ್ಕಳು ಹಾಗೂ ಪತಿ ಹಣ ಕೊಡುವುದು ನಿಲ್ಲಿಸಿದ್ದಾರೆ. ಇದೀಗ ಮನೆ ಖರ್ಚು ಆಸ್ಪತ್ರೆ ಹಾಗೂ ಔಷಧಿ ಖರ್ಚಿಗೆ ಹಣ ಇಲ್ಲದೆ ಪರದಾಡುವಂತಾಗಿದೆ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ