ಕರಡಿ ದಾಳಿಯಿಂದ ಮಗುವಿನ ಮುಖಕ್ಕೆ ಗಾಯ: ಪ್ಲಾಸ್ಟಿಕ್ ಸರ್ಜರಿಯಿಂದ ಜೀವ ಉಳಿಸಿದ ಕಿಮ್ಸ್ ಆಸ್ಪತ್ರೆ ತಜ್ಞರು
ಬಾಯಿ ಮತ್ತು ಮುಖದ ಶಸ್ತ್ರ ಚಿಕಿತ್ಸೆ ವಿಭಾಗಕ್ಕೆ ಸರಕಾರಿ ವೈದ್ಯಕೀಯ ಕಾಲೇಜುಗಳ ಪೈಕಿ ಇಲ್ಲಿ ಮಾತ್ರ ಈ ವಿಭಾಗ ಇರುವುದು ಎನ್ನುವುದು ವಿಶೇಷ. ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಿ ಅರ್ಧ ಮುಖವನ್ನೇ ಕಳೆದುಕೊಂಡು ಸಾವಿನ ಕದ ಕಟ್ಟಿದ್ದ ಮಗು, ಕೊನೆಗೂ ಬದುಕುಳಿದಿದೆ. ಮುಖವನ್ನೆ ದವಡೆಯ ಸಹಿತ ಪ್ಲಾಸ್ಟಿಕ್ ಸರ್ಜರಿ ಮಾಡಿ ವೈದ್ಯರು ಕಂದಮ್ಮನಿಗೆ ಮರುಜೀವ ನೀಡಿದ್ದಾರೆ.
ಹುಬ್ಬಳ್ಳಿ: ತೋಟದ ಮನೆಯಲ್ಲಿ ಮಲಗಿದ್ದ 9 ತಿಂಗಳ ಮಗುವಿನ ಮೇಲೆ ಏಕಾಏಕಿ ತೋಳವೊಂದು ದಾಳಿ ನಡೆಸಿ ಮಗುವಿನ ಅರ್ಧ ಮುಖವನ್ನೇ ತಿಂದ ಘಟನೆ ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಆದರೆ ಹುಬ್ಬಳ್ಳಿಯ ಕಿಮ್ಸ್ ವೈದ್ಯರ ತಂಡವೊಂದು ಮಗುವಿನ ಜೀವವನ್ನು ಉಳಿಸಿದ್ದಷ್ಟೇ ಅಲ್ಲದೆ ಮತ್ತೊಂದು ಚಮತ್ಕಾರಿ ಚಿಕಿತ್ಸೆ ಮಾಡುವ ಮೂಲಕ, ಸರಕಾರಿ ಆಸ್ಪತ್ರೆ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಮಾರ್ಚ್ 8 ರಂದು ಹಾಡಹಗಲೇ ಈ ದುರ್ಘಟನೆ ಸಂಭವಿಸಿದ್ದು, 9ತಿಂಗಳ ಮಗು ಅನ್ನಪ್ಪನ ಮೇಲೆ ಮನೆಯಲ್ಲಿ ಯಾರು ಇಲ್ಲದ ಸಮಯವನ್ನೇ ನೊಡಿಕೊಂಡು ತೋಳ ಮಾರಣಾಂತಿಕವಾಗಿ ದಾಳಿ ಮಾಡಿತ್ತು. ಮುಖದ ಮೇಲೆ ಅಷ್ಟೇ ಅಲ್ಲ ಮೈಮೇಲೆ ಗಂಭೀರವಾಗಿ ಗಾಯ ಮಾಡಿತ್ತು. ಹೆತ್ತವರು ಜೋರಾಗಿ ಅಳುತ್ತಿದ್ದ ಶಬ್ದ ಕೇಳಿ ಓಡಿ ಬಂದಾಗ ತೋಳ ಕಾಲ್ಕಿತ್ತಿದೆ. ಅನ್ನಪ್ಪನ ಪರಿಸ್ಥಿತಿ ತೀರಾನೇ ಗಂಭೀರವಾಗಿತ್ತು. ದವಡೆಯ ಭಾಗ ಸಂಪೂರ್ಣವಾಗಿ ಸೀಳಿ ಹಾಕಿತ್ತು. ತಕ್ಷಣ ಪಾಲಕರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿದ್ದಾರೆ. ಮಗು ರಕ್ತದ ಮಡುವಿನಲ್ಲಿದ್ದ ಸ್ಥಿತಿ ಕಂಡು ಎಲ್ಲರೂ ಮಗು ಉಳಿಯುವುದು ಅನುಮಾನ ಎಂದು ಹೇಳಿದ್ದರು. ಆದರೆ ಮಗು ಅದೃಷ್ಟವಶಾತ್ ಬದುಕುಳಿದಿದೆ.
ಬಾಯಿ ಮತ್ತು ಮುಖದ ಶಸ್ತ್ರ ಚಿಕಿತ್ಸೆ ವಿಭಾಗಕ್ಕೆ ಸರಕಾರಿ ವೈದ್ಯಕೀಯ ಕಾಲೇಜುಗಳ ಪೈಕಿ ಇಲ್ಲಿ ಮಾತ್ರ ಈ ವಿಭಾಗ ಇರುವುದು ಎನ್ನುವುದು ವಿಶೇಷ. ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಿ ಅರ್ಧ ಮುಖವನ್ನೇ ಕಳೆದುಕೊಂಡು ಸಾವಿನ ಕದ ಕಟ್ಟಿದ್ದ ಮಗು, ಕೊನೆಗೂ ಬದುಕುಳಿದಿದ್ದಾನೆ. ಮುಖವನ್ನೆ ದವಡೆಯ ಸಹಿತ ಪ್ಲಾಸ್ಟಿಕ್ ಸರ್ಜರಿ ಮಾಡಿ ವೈದ್ಯರು ಕಂದಮ್ಮನಿಗೆ ಮರುಜೀವ ನೀಡಿದ್ದಾರೆ.
ದವಡೆಗೆ ಪ್ಲೇಟ್‌ನ್ನು ಹಾಕಿ ಮುಖಕ್ಕೆ ಮತ್ತೆ ಅದೇ ಆಕಾರ ನೀಡಿದ್ದಾರೆ. ಚಿಕ್ಕಮಕ್ಕಳಿಗೆ ಅರವಳಿಕೆ ನೀಡಿ, ನಾಲ್ಕು ಗಂಟೆ ಶಸ್ತ್ರ ಚಿಕಿತ್ಸೆ ಮಾಡುವುದು ಎಂದರೆ ಅದೊಂದು ಸವಾಲೇ ಸರಿ. ಇಡಿ ಮುಖವನ್ನೇ ಮತ್ತೆ ಅದೇ ಆಕಾರಕ್ಕೆ ತರುವ ಪ್ರಯತ್ನದಲ್ಲಿ ಯಶಸ್ವಿಯಾಗಿರುವ ಕಿಮ್ಸ್ ವೈದ್ಯಕೀಯ ತಂಡ ಮತ್ತು ಡಾಕ್ಟರ್ ಮಂಜುನಾಥ್ ಅವರಿಗೆ ಸದ್ಯ ವ್ಯಾಪಕ ಪ್ರಶಂಸೆ ಕೇಳಿಬಂದಿದೆ.
9 ವರ್ಷದ ಮಗುವನ್ನು ನೋಡಿದಾಗ ಆ ಮೂಗಿಗೆ ಎಮರ್ಜನ್ಸಿ ಚಿಕಿತ್ಸೆ ಬೇಕು ಎಂದು ಅನಿಸಿತ್ತು. ಈ ಮಗುವಿನ ದವಡೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದೇವೆ. ಕ್ಲಿಷ್ಟಕರವಾದ ಚಿಕಿತ್ಸೆ ಇದಾಗಿತ್ತು. ಸದ್ಯ ಮಗು ಆರೋಗ್ಯವಾಗಿದೆ. ಇನ್ನು ಮೂರು ತಿಂಗಳ ನಂತರ ದವಡೆಗೆ ಇನ್ನೊಂದು ಚಿಕಿತ್ಸೆ ಮಾಡುವ ಅಗತ್ಯತೆ ಇದೆ ಎಂದು ಕಿಮ್ಸ್ ಆಸ್ಪತ್ರೆಯ ತಜ್ಞ ಡಾ. ಮಂಜುನಾಥ್ ಹೇಳಿದ್ದಾರೆ.
ಈ ವೈದ್ಯಕೀಯ ಕಾಲೇಜಿನ ವಿಶೇಷ ಬಾಯಿ ಮತ್ತು ಮುಖ ಶಸ್ತ್ರ ಚಿಕಿತ್ಸೆ ವಿಭಾಗ ಬಡವರ ಪಾಲಿಗೆ ಆತ್ಮಬಂಧುವಿನಂತಾಗಿದೆ. ಲಕ್ಷಾಂತರ ರೂಪಾಯಿ ಖರ್ಚಾಗುವಂತ ಈ ಸರ್ಜರಿ ಇಲ್ಲಿ ಮಾತ್ರ ಸಂಪೂರ್ಣ ಉಚಿತವಾಗಿ ಸೇವೆ ನೀಡಲಾಗುತ್ತದೆ.
ಇದನ್ನೂ ಓದಿ: ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಿದ್ದಾರೆ ಬಿಗ್ ಬಿ ಅಮಿತಾಭ್ ಬಚ್ಚನ್