ಮಂತ್ರಿಗಿರಿಗಾಗಿ ತವಕಿಸುತ್ತಿದ್ದ ಕೆಎಂ ಶಿವಲಿಂಗೇಗೌಡರಿಗೆ ಮುಖ್ಯಮಂತ್ರಿ ಪಟ್ಟ! ನಮ್ಮ ಶಾಲೆ ಚಿತ್ರದಲ್ಲಿ ಸಿಎಂ ಪಾತ್ರ!

ಅರುಣ್​ ಕುಮಾರ್​ ಬೆಳ್ಳಿ

Updated on: Oct 31, 2023 | 6:25 PM

ನಮ್ಮ ರಾಜಕಾರಣಿಗಳು ಕೆಮೆರಾಗಳ ಮುಂದೆ ನಿಂತು ಹೇಳಿಕೆಗಳನ್ನು ನೀಡುವುದರಿಂದ ಅದು ಹೊಸ ಅನುಭವವೇನೂ ಅಲ್ಲ. ಡೈಲಾಗ್ ಡೆಲಿವರಿಯೂ ಗೌಡರಿಗೆ ತೊಂದರೆಯಾಗಲಿಕ್ಕಿಲ್ಲ ಯಾಕೆಂದರೆ ವಿಧಾನ ಸಭೆಯಲ್ಲಿ ಅವರು ಉತ್ತಮ ಸಂಸದೀಯ ಪಟು ಅನಿಸಿಕೊಂಡಿದ್ದಾರೆ. ಮಿಕ್ಕಿದಂತೆ ನಮ್ಮ ರಾಜಕಾರಣಿಗಳಿಗಿಂತ ಉತ್ತಮ ನಟರು ಬೇರೆ ಯಾರಿದ್ದಾರು?

ಹಾಸನ: ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡರಿಗೆ (KM Shivalinge Gowda) ಬಹಳ ವರ್ಷಗಳಿಂದ ಮಂತ್ರಿಯಾಗಬೇಕೆನ್ನುವ ಆಸೆಯಿದೆ, ಆದು ನೆರವೇರುತ್ತಿಲ್ಲ ಅನ್ನೋದು ಬೇರೆ ವಿಷಯ. ಆದರೆ ಕನ್ನಡ ಚಿತ್ರತಂಡವೊಂದು ಅವರಿಗೆ ಮಂತ್ರಿ ಅಲ್ಲ ಮುಖ್ಯಮಂತ್ರಿಯ (chief minister) ಸ್ಥಾನವನ್ನೇ ನೀಡಿದೆ. ಹೌದು, ಮಾರಾಯ್ರೇ, ನಿರ್ಮಾಣ ಹಂತದಲ್ಲಿರುವ ನಮ್ಮ ಶಾಲೆ (Namma Shale) ಹೆಸರಿನ ಚಿತ್ರದಲ್ಲಿ ಶಿವಲಿಂಗೇಗೌಡರು ಮುಖ್ಯಮಂತ್ರಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಅರಸೀಕೆರೆ ತಾಲ್ಲೂಕಿನ ಗೀಜಹಳ್ಳಿಯಲ್ಲಿ ನಡೆಯುತ್ತಿದ್ದು ಇವತ್ತಿನ ಶೂಟ್ ನಲ್ಲಿ ಗೌಡರು ಭಾಗವಹಿಸಿದ್ದರು. ಕೆಮೆರಾ ಎದುರು ಶಿವಲಿಂಗೇಗೌಡರು ಸಂಕೋಚವೇನೂ ಪಟ್ಟುಕೊಳ್ಳುತ್ತಿಲ್ಲ. ನಮ್ಮ ರಾಜಕಾರಣಿಗಳು ಕೆಮೆರಾಗಳ ಮುಂದೆ ನಿಂತು ಹೇಳಿಕೆಗಳನ್ನು ನೀಡುವುದರಿಂದ ಅದು ಹೊಸ ಅನುಭವವೇನೂ ಅಲ್ಲ. ಡೈಲಾಗ್ ಡೆಲಿವರಿಯೂ ಗೌಡರಿಗೆ ತೊಂದರೆಯಾಗಲಿಕ್ಕಿಲ್ಲ ಯಾಕೆಂದರೆ ವಿಧಾನ ಸಭೆಯಲ್ಲಿ ಅವರು ಉತ್ತಮ ಸಂಸದೀಯ ಪಟು ಅನಿಸಿಕೊಂಡಿದ್ದಾರೆ. ಮಿಕ್ಕಿದಂತೆ ನಮ್ಮ ರಾಜಕಾರಣಿಗಳಿಗಿಂತ ಉತ್ತಮ ನಟರು ಬೇರೆ ಯಾರಿದ್ದಾರು?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.