Bengaluru News: ಸಿಎಲ್ ಪಿ ಸಭೆ ಬಳಿಕ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿದರೆ ಶಿವಲಿಂಗೇಗೌಡ ಮುಖ್ಯಮಂತ್ರಿಯ ಭೇಟಿಗೆ ಆಗಮಿಸಿದರು!
ಶಿವಲಿಂಗೇಗೌಡರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಗ್ಯಾರಂಟಿಯಂತೂ ಸಿದ್ದರಾಮಯ್ಯ ಈಗಾಗಲೇ ನೀಡಿದ್ದಾರೆ, ಆ ಗ್ಯಾರಂಟಿ ಯಾವಾಗ ಜಾರಿಯಾಗುತ್ತೆ ಅಂತ ಕೇಳಲು ಬಂದಿದ್ದರೇ?
ಬೆಂಗಳೂರು: ಗುರುವಾರ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ಶಾಸಕರು ಮತ್ತು ಸಚಿವರ ನಡುವೆ ಯಾವುದೇ ವೈಮನಸ್ಸಿಲ್ಲ ಮತ್ತು ತನಗೆ ಮಂತ್ರಿಯಾಗುವ ಬಯಕೆ ಇಲ್ಲ ಅಂತ ಹೇಳಿದ್ದರು. ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಅವರು ಸಚಿವನಾಗುವ ಕನಸಿಟ್ಟುಕೊಂಡಿದ್ದು ಸತ್ಯ ಮತ್ತು ಮಂತ್ರಿ ಸ್ಥಾನ ತಪ್ಪಿದ ಅಸಮಾಧಾನ ಒಂದು ವಾರದವರೆಗೆ ಕಾಡಿತ್ತಂತೆ. ಆ ವಿಷಯವನ್ನು ಬದಿಗೊತ್ತಿ ಮುಂದೆ ಸಾಗುತ್ತಿರುವುದಾಗಿ ಹೇಳಿದ್ದ ಗೌಡರು, ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (CM Siddaramaiah) ಭೇಟಿಯಾಗಲು ಅವರ ನಿವಾಸಕ್ಕೆ ಆಗಮಿಸಿದರು. ಯಾಕೆ ಏನು ಅಂತ ಗೊತ್ತಿಲ್ಲ ಆದರೆ, ಬೇರೆ ಯಾರೂ ಬಾರದೆ ಇವರು ಮಾತ್ರ ಭೇಟಿ ನೀಡಿದ್ದು ವಿಶೇಷವೆನಿಸುತ್ತದೆ. ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಗ್ಯಾರಂಟಿಯಂತೂ (guarantee) ಸಿದ್ದರಾಮಯ್ಯ ಈಗಾಗಲೇ ನೀಡಿದ್ದಾರೆ. ಆ ಗ್ಯಾರಂಟಿ ಯಾವಾಗ ಜಾರಿಗೆ ಬರುತ್ತೆ ಅಂತ ವಿಚಾರಿಸಲು ಶಿವಲಿಂಗೇಗೌಡರು ಆಗಮಿಸಿದ್ದರೆ? ಇರಬಹುದು ಮಾರಾಯ್ರೇ, ರಾಜಕಾರಣಿಗಳ ಮನಸ್ಥಿತಿ ಹೇಳಲಾಗದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ