ಸ್ವಲ್ಪ ಮೃದು, ಸ್ವಲ್ಪ ಸಿಹಿ; ಪೌಷ್ಟಿಕ ಉಪಾಹಾರ ಮಂಗಳೂರು ಬನ್ಸ್ ಬಗ್ಗೆ ನಿಮಗೆಷ್ಟು ಗೊತ್ತು?

ಬೆಳಗ್ಗಿನ ತಿಂಡಿಯಾದರೂ ಸೈ, ಸಂಜೆಯ ಚಹಾ ಜತೆಗೆ ಆದರೂ ಓಕೆ ಎಂದು ತಿನ್ನಬಹುದಾದ ತಿಂಡಿಗಳಲ್ಲೊಂದು ಈ ಮಂಗಳೂರು ಬನ್ಸ್. ತುಂಬಾ ಮೃದು, ಸ್ವಲ್ಪ ಸಿಹಿಯಾಗಿರುವ ಈ ಬನ್ಸ್ ಆರೋಗ್ಯಕರವಾದ ತಿಂಡಿಗಳಲ್ಲೊಂದು. ನೋಡಲು ಪೂರಿಯಂತಿರುವ ಈ ಬನ್ಸ್ ಬಗ್ಗೆ ಸ್ವಾದಿಷ್ಟ ಮತ್ತು ರುಚಿಕರವಾದ ಸಂಗತಿಗಳನ್ನು ಅರಿಯಲು ಲೇಖನ ಓದಿ..

ಸ್ವಲ್ಪ ಮೃದು, ಸ್ವಲ್ಪ ಸಿಹಿ; ಪೌಷ್ಟಿಕ ಉಪಾಹಾರ ಮಂಗಳೂರು ಬನ್ಸ್ ಬಗ್ಗೆ ನಿಮಗೆಷ್ಟು ಗೊತ್ತು?
ಮಂಗಳೂರು ಬನ್ಸ್
Image Credit source: commons.wikimedia.org

Updated on: May 29, 2024 | 1:22 PM

ಕೆಲವೊಂದು ಆಹಾರದ ಹೆಸರಿನ ಜತೆಗೆ ಊರಿನ ಹೆಸರು ಕೂಡಾ ಅಂಟಿಕೊಂಡಿರುತ್ತದೆ. ಉದಾಹರಣೆಗೆ ಧಾರವಾಡ ಪೇಡಾ, ಮೈಸೂರು ಪಾಕ್, ಮಂಗಳೂರು ಬಜ್ಜಿ, ಮದ್ದೂರ್ ವಡಾ, ದಾವಣಗೆರೆ ಬೆಣ್ಣೆ ದೋಸೆ ಹೀಗೆ ಸಾಗುತ್ತದೆ ಪಟ್ಟಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಉಪಾಹಾರಗಳಲ್ಲಿ ತನ್ನ ಹೆಸರಿನೊಂದಿಗೆ ಊರ ಹೆಸರು ಜೋಡಿಸಿಕೊಂಡಿರುವ ಉಪಾಹಾರವೆಂದರೆ ಅದು ಮಂಗಳೂರು ಬನ್ಸ್ (Mangalore Buns). ಬೆಳಗ್ಗಿನ ತಿಂಡಿಯಾದರೂ ಸೈ, ಸಂಜೆಯ ಚಹಾ ಜತೆಗೆ ಆದರೂ ಓಕೆ ಎಂದು ತಿನ್ನಬಹುದಾದ ತಿಂಡಿಗಳಲ್ಲೊಂದು ಈ ಬನ್ಸ್. ತುಂಬಾ ಮೃದು, ಸ್ವಲ್ಪ ಸಿಹಿಯಾಗಿರುವ ಈ ಬನ್ಸ್ ಆರೋಗ್ಯಕರವಾದ ತಿಂಡಿಗಳಲ್ಲೊಂದು. ನೋಡಲು ಪೂರಿಯಂತಿರುವ ಈ ಬನ್ಸ್ ಬಗ್ಗೆ ರುಚಿಕರವಾದ ವಿಚಾರಗಳನ್ನು ತಿಳಿಯೋಣ ಬನ್ನಿ… ಮಂಗಳೂರು ಬನ್ಸ್ ಪೋಷಕಾಂಶಗಳ ಸಮೃದ್ಧ ಮೂಲ. ಇದು ಕಾರ್ಬೋಹೈಡ್ರೇಟ್ಸ್ , ಪ್ರೋಟೀನ್‌ ಮತ್ತು ಫೈಬರ್‌ನಂತಹ ಅಗತ್ಯ ಪೋಷಕಾಂಶಗಳಿಂದ ಕೂಡಿದೆ. ಬಾಳೆಹಣ್ಣು ಮತ್ತು ಮೊಸರು ಬಳಸಿ ಮಾಡುವ ತಿಂಡಿ ಇದಾಗಿರುವುರಿಂದ ಇವೆರಡ ಸಂಯೋಜನೆ ಇದನ್ನು ಪೌಷ್ಟಿಕ ಉಪಾಹಾರವನ್ನಾಗಿ ಮಾಡುತ್ತದೆ ಮಂಗಳೂರು ಬನ್‌ಗಳು ಕೇವಲ ರುಚಿಕರವಾದ ತಿಂಡಿ ಮಾತ್ರವಲ್ಲ ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು  ಹೊಂದಿದೆ. ಹಿಟ್ಟು, ಬಾಳೆಹಣ್ಣುಗಳು ಮತ್ತು ಮೊಸರುಗಳ ಸಂಯೋಜನೆಯು ಇದನ್ನು ಪೌಷ್ಟಿಕ ಉಪಾಹಾರವನ್ನಾಗಿ ಮಾಡಿದೆ. ಬನ್ಸ್ ತಯಾರಿಸುವ ಪಾಕವಿಧಾನದಲ್ಲಿ ಬಳಸಲಾದ ಬಾಳೆಹಣ್ಣು ಪೊಟ್ಯಾಸಿಯಮ್, ವಿಟಮಿನ್ B6ಮತ್ತು ವಿಟಮಿನ್ Cಯ ಉತ್ತಮ ಮೂಲವಾಗಿದೆ. ಅದೇ ರೀತಿ  ಮೊಸರು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಪ್ರೋಬಯಾಟಿಕ್‌ಗಳ ಅತ್ಯುತ್ತಮ ಮೂಲವಾಗಿದೆ. ಮೊಸರಿನಲ್ಲಿರುವ ಪ್ರೋಬಯಾಟಿಕ್ಸ್ ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇವು ಜೀರ್ಣಕ್ರಿಯೆಯನ್ನು ಉತ್ತೇಜಿಸಿ, ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ. ಮಂಗಳೂರು...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ