ನಾಳೆ ಕೊಡಗು ಜಿಲ್ಲಾ ಬಂದ್​ಗೆ ಕರೆ: ಖಾಸಗಿ ಶಾಲೆಗಳಿಗೆ ರಜೆ, ಕಾರಣವೇನು?

| Updated By: ಗಂಗಾಧರ​ ಬ. ಸಾಬೋಜಿ

Updated on: Dec 11, 2024 | 8:49 PM

ವಕೀಲ ವಿದ್ಯಾಧರ್ ಅವರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರಿಗೆ ಅವಮಾನ ಮಾಡಿದ್ದಾರೆ. ಹೀಗಾಗಿ ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಕೊಡಗು ಜಿಲ್ಲೆಯಲ್ಲಿ ನಾಳೆ ಬಂದ್‌ಗೆ ಕರೆ ನೀಡಲಾಗಿದೆ. ಅನುದಾನ ರಹಿತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಘಟನೆ ಕೊಡಗಿನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ನಾಳೆ ಕೊಡಗು ಜಿಲ್ಲಾ ಬಂದ್​ಗೆ ಕರೆ: ಖಾಸಗಿ ಶಾಲೆಗಳಿಗೆ ರಜೆ, ಕಾರಣವೇನು?
ನಾಳೆ ಕೊಡಗು ಜಿಲ್ಲಾ ಬಂದ್​ಗೆ ಕರೆ: ಖಾಸಗಿ ಶಾಲೆಗಳಿಗೆ ರಜೆ, ಕಾರಣವೇನು?
Follow us on

ಕೊಡಗು, ಡಿಸೆಂಬರ್​ 11: ಫೀಲ್ಡ್​ ಮಾರ್ಷಲ್​​ ಕೆ.ಎಂ.ಕಾರ್ಯಪ್ಪ (KM Cariappa) ಮತ್ತು ಜನರಲ್ ತಿಮ್ಮಯ್ಯಗೆ ವಕೀಲ ವಿದ್ಯಾಧರ್​​​ರಿಂದ ಅವಮಾನ ಮಾಡಲಾಗಿದ್ದು, ವಿದ್ಯಾಧರ್ ಗಡಿಪಾರಿಗೆ ಒತ್ತಾಯಿಸಿ ನಾಳೆ ಕೊಡಗು ಬಂದ್​ಗೆ ಕರೆ ನೀಡಲಾಗಿದೆ. ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳಿಂದ ಬೆಂಬಲ ವ್ಯಕ್ತವಾಗಿದ್ದು, ಅನುದಾನ ರಹಿತ ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ.

ವೀರಸೇನಾನಿಗಳಿಗೆ ಅಪಮಾನ ಖಂಡಿಸಿ ಕೊಡಗು ಜಿಲ್ಲಾ ಸಮಾನ ಮನಸ್ಕರ ಒಕ್ಕೂಟದಿಂದ ನಾಳೆ ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಬಂದ್​ಗೆ ಕರೆ ನೀಡಲಾಗಿದೆ. ಫೀಲ್ಡ್​ ಮಾರ್ಷಲ್​​ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರನ್ನು ಅಪಮಾನಿಸಿ ವಕೀಲ ವಿದ್ಯಾಧರ್​ ಸೊಶೀಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು ಇದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕಾರ್ಯಪ್ಪ, ತಿಮ್ಮಯ್ಯಗೆ ಅವಮಾನಿಸಿ ಪೋಸ್ಟ್: ಪೊಲೀಸ್ ವರಿಷ್ಠಾಧಿಕಾರಿಗೆ ದೂರು

ವೀರಸೇನಾನಿಗಳಿಗೆ ಅಪಮಾನದ ಬಳಿಕ ವಿದ್ಯಾಧರ್ ಅವರನ್ನು ನಂವೆಂಬರ್​ 22ರಂದು ತಡರಾತ್ರಿ ಕೊಡಗು ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ಮಡಿಕೇರಿಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ (ಜೆಎಂಎಫ್‌ಸಿ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಅಲ್ಲಿ ಸರ್ಕಾರಿ ಅಭಿಯೋಜಕರು ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿದರು. ವಿರೋಧದ ನಡುವೆಯೂ ವಿದ್ಯಾಧರ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದ್ದು, ಸಂಜೆ ವೇಳೆಗೆ ಬಿಡುಗಡೆಗೊಂಡಿದ್ದರು. ಇದು ಸ್ಥಳೀಯರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಗಿತ್ತು.

ರಾಜೀವ್ ಬೋಪಯ್ಯ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ರಾಜೀವ್ ಬೋಪಯ್ಯ, ಇಂತಹ ಆಕ್ಷೇಪಾರ್ಹ ಕೃತ್ಯಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ತುರ್ತು ಅಗತ್ಯವಿದೆ. ವಕೀಲ ವಿದ್ಯಾಧರ್​ ಹೇಳಿಕೆಯಿಂದ ಸ್ಥಳೀಯ ಜನತೆಯ ಭಾವನೆಗಳಿಗೆ ತೀವ್ರ ಧಕ್ಕೆ ಉಂಟಾಗಿದೆ ಎಂದಿದ್ದಾರೆ. ನಾಳೆ ಬಂದ್​​ಗೆ ಆಟೋ ಚಾಲಕರು, ವ್ಯಾಪಾರಿಗಳು ಮತ್ತು ವ್ಯಾಪಾರ ಮಾಲೀಕರು, 29 ಸಮುದಾಯ ಸಂಘಟನೆಗಳ ಒಕ್ಕೂಟವು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕಾವೇರಿಯಲ್ಲಿ ತೀರ್ಥೋದ್ಭವ ಆಗುತ್ತಿದ್ದಂತೆ ಮತ್ತೊಮ್ಮೆ ಗರಿಷ್ಠ ಮಟ್ಟ ತಲುಪಿದ ಕೆಆರ್​ಎಸ್

ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರು ದೇಶಕಂಡ ಮಹಾ ಸೇನಾನಿಗಳು. ಕೊಡಗಿನ ಪ್ರೀತಿಪಾತ್ರರು. ಅವರ ಪರಂಪರೆಯು ಸಮುದಾಯಕ್ಕೆ ದೊಡ್ಡ ಹೆಮ್ಮೆ ವಿಷಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.