ಕೊಡಗು: ಮಡಿಕೇರಿ (Madikeri) ತಾಲೂಕಿನ ಚೆಂಬು (Chembu Village) ಗ್ರಾಮದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಭೂಕುಸಿತ (Land Slide) ಸಂಭವಿಸಿದ್ದು, ಭೂಕುಸಿತದಿಂದ ಹಾನಿಗೊಳಗಾದ ಮನೆಗಳಿಗೆ ಸಚಿವ ಆರ್. ಅಶೋಕ್ (R Ashok) ಭೇಟಿ ನೀಡಿದ್ದಾರೆ. ಈ ವೇಳೆ ಸಂತ್ರಸ್ತ ಕುಟುಂಬಕ್ಕೆ 3 ಲಕ್ಷ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಸಂತ್ರಸ್ತೆ ಅಕ್ಕಮ್ಮ ಎಂಬುವರಿಗೆ ಆರ್.ಅಶೋಕ್ ಸ್ಥಳದಲ್ಲೇ 24 ಸಾವಿರ ರೂ. ಪರಿಹಾರ ನೀಡಿದ್ದಾರೆ. ಉಳಿದ 2.76 ಲಕ್ಷ ಮುಂದಿನ ದಿನಗಳಲ್ಲಿ ನೀಡುವ ಭರವಸೆ ನೀಡಿದ್ದಾರೆ.
ಮಂಗಳೂರಿನ ಕಡಲ್ಕೊರೆತ ಪ್ರದೇಶಗಳಿಗೆ ಸಚಿವರ ಭೇಟಿ
ದಕ್ಷಿಣ ಕನ್ನಡ: ಮಂಗಳೂರಿನ ಉಚ್ಚಿಲ ಬಟ್ಟಪಾಡಿ ಕಡಲ ತೀರಕ್ಕೆ ಕಂದಾಯ ಸಚಿವ ಆರ್.ಅಶೋಕ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಬಂದರು ಸಚಿವ ಎಸ್.ಅಂಗಾರ ಭೇಟಿ ನೀಡಿದ್ದಾರೆ. ಕಡಲ್ಕೊ ರೆತದಿಂದ ಹಾನಿಗೊಳಗಾದ ಉಚ್ಚಿಲದ ಪ್ರದೇಶಗಳನ್ನು ಸಚಿವರು ವೀಕ್ಷಿಸಿ, ಕಡಲ್ಕೊರೆತ ಸಂತ್ರಸ್ತರ ಜೊತೆ ಮಾತುಕತೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಈ ವೇಳೆ ಸಚಿವ ಸುನೀಲ್ ಕುಮಾರ್ ಅವರಿಗೆ ಸಮುದ್ರಕ್ಕೆ ಕಲ್ಲು ಹಾಕಿ ಕಡಲ್ಕೊರೆತ ನಿಯಂತ್ರಿಸಲು ಮೀನುಗಾರರು ಮನವಿ ಮಾಡಿದ್ದಾರೆ. ಆದರೆ ಕೇವಲ ರೆಸಾರ್ಟ್ಗಳನ್ನು ರಕ್ಷಿಸಲು ಕಲ್ಲು ಹಾಕಿತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಅತೀ ಹೆಚ್ಚು ಕಡಲ್ಕೊರೆತ ಪೀಡಿತ ಜಾಗಗಳಲ್ಲಿ ತಡೆಗೋಡೆ ಕಾಮಗಾರಿ ನಡೆಸಿಲ್ಲ ಎಂದು ಸಚಿವ ಸುನೀಲ್ ಕುಮಾರ್ ಮತ್ತು ಅಂಗಾರ ಬಳಿ ಮೀನುಗಾರರು ಅಳಲು ತೋಡಿಕೊಂಡರು.
Published On - 4:58 pm, Thu, 7 July 22