ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಮಗು; ಕೇವಲ 4 ಗಂಟೆಯಲ್ಲಿ ಕೇರಳದಿಂದ ಬೆಂಗಳೂರಿಗೆ ಕರೆತಂದ ಆಂಬ್ಯುಲೆನ್ಸ್ ಚಾಲಕ

| Updated By: ಆಯೇಷಾ ಬಾನು

Updated on: Oct 13, 2021 | 5:36 PM

9 ತಿಂಗಳ ಇನಾರ ಮರಿಯಂಗೆ ಅಪರೂಪದ‌ ಖಾಯಿಲೆ ಇದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನಿಸಬೇಕಿತ್ತು. ಕೇರಳದ ಕಣ್ಣೂರಿನಿಂದ ಕೇವಲ 6 ಗಂಟೆಯಲ್ಲಿ ಬೆಂಗಳೂರಿಗೆ ತಲುಪುವ ಅನಿವಾರ್ಯವಿತ್ತು.

ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಮಗು; ಕೇವಲ 4 ಗಂಟೆಯಲ್ಲಿ ಕೇರಳದಿಂದ ಬೆಂಗಳೂರಿಗೆ ಕರೆತಂದ ಆಂಬ್ಯುಲೆನ್ಸ್ ಚಾಲಕ
ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಮಗು; ಕೇವಲ 6 ಗಂಟೆಯಲ್ಲಿ ಕೇರಳದಿಂದ ಬೆಂಗಳೂರಿಗೆ ಕರೆತಂದ ಆಂಬುಲೆನ್ಸ್ ಚಾಲಕ
Follow us on

ಮಡಿಕೇರಿ: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವನ್ನು ವಿಶೇಷ ಆಂಬ್ಯುಲೆನ್ಸ್ ಮೂಲಕ ಝೀರೋ ಟ್ರಾಫಿಕ್ನಲ್ಲಿ ರವಾನಿಸಲಾಗಿದೆ. ಕೇರಳದ ಕಣ್ಣೂರಿನಿಂದ ಬೆಂಗಳೂರಿಗೆ ಗೋಣಿಕೊಪ್ಪ, ಮೈಸೂರು ಮೂಲಕ ಮಣಿಪಾಲ್ ಆಸ್ಪತ್ರೆಗೆ 9 ತಿಂಗಳ ಮಗುವನ್ನು ರವಾನಿಸಲಾಗಿದೆ.

9 ತಿಂಗಳ ಇನಾರ ಮರಿಯಂಗೆ ಅಪರೂಪದ‌ ಖಾಯಿಲೆ ಇದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನಿಸಬೇಕಿತ್ತು. ಕೇರಳದ ಕಣ್ಣೂರಿನಿಂದ ಕೇವಲ 6 ಗಂಟೆಯಲ್ಲಿ ಬೆಂಗಳೂರಿಗೆ ತಲುಪುವ ಅನಿವಾರ್ಯವಿತ್ತು. ಟ್ರಾಫಿಕ್ ಸಮಸ್ಯೆಯ ನಡುವೆ ಮಗುವನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ರೀಚ್ ಮಾಡುವುದು ಅಸಾಧ್ಯದ ಮಾತಾಗಿತ್ತು. ಆದ್ರೆ ಮಗುವಿನ ಜೀವ ಉಳಿಸಲು ಸಾರ್ವಜನಿಕರೇ ಸಾಥ್ ನೀಡಿದ್ದಾರೆ.

ಕೇರಳಿದಿಂದ ಮೈಸೂರು ಮೂಲಕ ಬೆಂಗಳೂರಿಗೆ ಹೊರಟಿದ್ದ ವಿಶೇಷ ಆಂಬ್ಯುಲೆನ್ಸ್ ಹೋಗುವುದಕ್ಕೆ ರಸ್ತೆಯುದ್ದಕ್ಕೂ ಜನರಿಂದಲೇ ಝೀರೋ ಟ್ರಾಫಿಕ್ ವ್ಯವಸ್ಥೆಯಾಗಿದ್ದು ಆಂಬ್ಯುಲೆನ್ಸ್ ತೆರಳಲು ಸಾರ್ವಜನಿಕರ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಇದರಿಂದ 6 ಗಂಟೆಯಲ್ಲಿ ತಲುಪ ಬೇಕಿದ್ದ ಆಂಬ್ಯುಲೆನ್ಸ್  ಕೇವಲ 4 ಗಂಟೆಯಲ್ಲಿ  ಮಣಿಪಾಲ್ ಆಸ್ಪತ್ರೆಗೆ ರೀಚ್ ಆಗಿದೆ. ಈಗ ಇನಾರ ಮರಿಯಂ ಸರಿಯಾದ ಸಮಯಕ್ಕೆ ಆಸ್ಪತ್ರೆ ಸೇರಿದ್ದಾಳೆ. ಹೃದಯ ಗಟ್ಟಿ ಮಾಡಿ ಯಮನನ್ನೇ ಎದುರು ಹಾಕಿಕೊಂಡು ಸರಿಯಾದ ಸಮಯಕ್ಕೆ ಮಗುವನ್ನು ಆಸ್ಪತ್ರೆಗೆ ರವಾನಿಸಿದ ಆಂಬ್ಯುಲೆನ್ಸ್ ಚಾಲಕ ಹನೀಫ್ ಸಹಾಯ್ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು ಸನ್ಮಾನ ಮಾಡಿದ್ದಾರೆ.

ಇದನ್ನೂ ಓದಿ: Bengaluru: ರಾಜಸ್ಥಾನ ಮೂಲದ ಡ್ರಗ್ ಪೆಡ್ಲರ್ ಬಂಧನ; 35 ಲಕ್ಷ ಮೌಲ್ಯದ ಹೆರಾಯಿನ್ ಜಪ್ತಿ

ಅ.16ರಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಮತ್ತೆ ಆರಂಭ: ನ್ಯಾಮತಿಯಲ್ಲಿ ಮುಖ್ಯಮಂತ್ರಿ ಚಾಲನೆ

Published On - 5:05 pm, Wed, 13 October 21