Bengaluru: ರಾಜಸ್ಥಾನ ಮೂಲದ ಡ್ರಗ್ ಪೆಡ್ಲರ್ ಬಂಧನ; 35 ಲಕ್ಷ ಮೌಲ್ಯದ ಹೆರಾಯಿನ್ ಜಪ್ತಿ

Crime News: ರಾಜಸ್ಥಾನ ಮೂಲದ ಡ್ರಗ್ ಪೆಡ್ಲರ್​ ಬಂಧಿಸಲಾಗಿದೆ. ಆರೋಪಿ ರಾಜಸ್ಥಾನದಿಂದ ಹೆರಾಯಿನ್ ತಂದು ಮಾರಾಟ ಮಾಡ್ತಿದ್ದ. ಆರೋಪಿಯಿಂದ 35 ಲಕ್ಷ ಮೌಲ್ಯದ ಡ್ರಗ್ಸ್​ ಜಪ್ತಿ ಮಾಡಲಾಗಿದೆ. 440 ಗ್ರಾಂ ಹೆರಾಯಿನ್, ಬೈಕ್, ಮೊಬೈಲ್ ಜಪ್ತಿ ಮಾಡಲಾಗಿದೆ.

Bengaluru: ರಾಜಸ್ಥಾನ ಮೂಲದ ಡ್ರಗ್ ಪೆಡ್ಲರ್ ಬಂಧನ; 35 ಲಕ್ಷ ಮೌಲ್ಯದ ಹೆರಾಯಿನ್ ಜಪ್ತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on: Oct 13, 2021 | 4:50 PM

ಬೆಂಗಳೂರು: ನಗರದಲ್ಲಿ ರಾಜಸ್ಥಾನ ಮೂಲದ ಡ್ರಗ್ ಪೆಡ್ಲರ್​ ಒಬ್ಬನನ್ನು ಬಂಧಿಸಲಾಗಿದೆ. ಬಂಧಿತನಿಂದ 35 ಲಕ್ಷ ಮೌಲ್ಯದ 440 ಗ್ರಾಂ ಹೆರಾಯಿನ್ ಜಪ್ತಿ ಮಾಡಲಾಗಿದೆ. ಹೆಬ್ಬಗೋಡಿ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೊದಲು, ಬಂಧಿತ ಆರೋಪಿ ಸ್ಟೀಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ, 1 ವರ್ಷದಿಂದ ಕೆಲಸ ಬಿಟ್ಟು ಡ್ರಗ್ಸ್​​ ಸಪ್ಲೈ ಮಾಡ್ತಿದ್ದ ಎಂದು ಮಾಹಿತಿ ಲಭ್ಯವಾಗಿದೆ.

ರಾಜಸ್ಥಾನ ಮೂಲದ ಡ್ರಗ್ ಪೆಡ್ಲರ್​ ಬಂಧಿಸಲಾಗಿದೆ. ಆರೋಪಿ ರಾಜಸ್ಥಾನದಿಂದ ಹೆರಾಯಿನ್ ತಂದು ಮಾರಾಟ ಮಾಡ್ತಿದ್ದ. ಆರೋಪಿಯಿಂದ 35 ಲಕ್ಷ ಮೌಲ್ಯದ ಡ್ರಗ್ಸ್​ ಜಪ್ತಿ ಮಾಡಿದ್ದೇವೆ. 440 ಗ್ರಾಂ ಹೆರಾಯಿನ್, ಬೈಕ್, ಮೊಬೈಲ್ ಜಪ್ತಿ ಮಾಡಿದ್ದೇವೆ. ಕಳೆದ ಒಂದು ವರ್ಷದ ಹಿಂದೆ ಹೆಬ್ಬಗೋಡಿಯಲ್ಲಿ ವಾಸವಿದ್ದ. ಬೊಮ್ಮಸಂದ್ರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಅಕ್ರಮ ಹಣ ಸಂಪಾದನೆಗೆ ಡ್ರಗ್ಸ್ ದಂಧೆಕೋರರ ಜತೆ ಸಂಪರ್ಕ ಮಾಡಿದ್ದ. ಹೆಬ್ಬಗೋಡಿ ಪೊಲೀಸರು ಆರೋಪಿ ವಿಚಾರಣೆ ಮಾಡ್ತಿದ್ದಾರೆ ಎಂದು ಬೆಂಗಳೂರು ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ.

ಡ್ರಗ್ ಹಣದಿಂದ ಸಂಪಾದಿಸಿದ ಆರೋಪಿ ಆಸ್ತಿ ಜಪ್ತಿ ವಿಚಾರವಾಗಿ ಅವರು ಮಾತನಾಡಿದ್ದಾರೆ. ಕಳೆದ ಬಾರಿ ನಾನು ಬಹುಮಾನ ಘೋಷಣೆ ಮಾಡಿದ್ದೆ. ಈಗ ಬಹುಮಾನವಾಗಿ ಆಸ್ತಿ ಜಪ್ತಿ ಮಾಡಿದ ತಂಡಕ್ಕೆ 25 ಸಾವಿರ ಬಹುಮಾನವನ್ನು ಚಂದ್ರಶೇಖರ್ ನೀಡಿದ್ದಾರೆ. ಚೆನ್ನೈನಲ್ಲಿ ಆರೋಪಿಯು ನಮ್ಮ ಆಸ್ತಿ ಜಪ್ತಿ ಮಾಡಿದ ಬಗ್ಗೆ ಪ್ರಶ್ನೆ ಮಾಡಿದ. ನಮ್ಮ ತಂಡ ಆತನ ಎಲ್ಲಾ ದಾಖಲೆ, ಆಸ್ತಿ ಪತ್ರಗಳು, ಬೇನಾಮಿ ಹೆಸರಿನಲ್ಲಿ ಏನೇನು ಮಾಡಿತ್ತು ಎಲ್ಲವನ್ನೂ ನಮ್ಮ ತಂಡ ಪ್ರಾಧಿಕಾರದ ಮುಂದೆ ನೀಡಿತ್ತು. ಮೊನ್ನೆ ಚೆನ್ನೈ ‌ಪ್ರಾಧಿಕಾರ ಆರೋಪಿಯ ಆಸ್ತಿ ಪಾಸ್ತಿ ಅಕ್ರಮ ಎಂದು ಘೋಷಣೆ ಮಾಡಿದೆ. ಇದು ನಮಗೆ ದೊಡ್ಡಮಟ್ಟದ ಗೆಲುವು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಮೊದಲ ಪ್ರಕರಣದಲ್ಲಿ ಡ್ರಗ್ ಕೇಸ್​ನಲ್ಲಿ ಆರೋಪಿ ಆಸ್ತಿ ಜಪ್ತಿ ಮಾಡಲಾಗಿದೆ. ಮುಂದೆ ಡ್ರಗ್ಸ್ ಪ್ರಕರಣದಲ್ಲಿ ನಾವು ಇದೇ ರೀತಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಆದೇಶದ ಪ್ರಕಾರ ಆರೋಪಿ ಅಂಜಯ್ ಕುಮಾರ್ ಅಕ್ರಮ‌ ಚರ ಮತ್ತು ಸ್ಥಿರ ಆಸ್ತಿಗಳ ಮೇಲೆ ಯಾವುದೇ ವಹಿವಾಟು ನಡೆಸುವಂತಿಲ್ಲ. ವಿಲೇವಾರಿ, ಪರಬಾರೆ ಯಾವುದೇ ಉದ್ದೇಶಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಡ್ರಗ್ ಹಣದಿಂದ ಸಂಪಾದಿಸಿದ ಆಸ್ತಿ ಅಕ್ರಮ ಡ್ರಗ್ ಹಣದಿಂದ ಸಂಪಾದಿಸಿದ ಆರೋಪಿ ಅಂಜಯ್ ಕುಮಾರ್ ಸ್ಥಿರ ಆಸ್ತಿ ಅಕ್ರಮ ಎಂದು ಘೋಷಣೆ ಮಾಡಲಾಗಿದೆ. ಗಾಂಜಾ ಮಾರಾಟ ಮಾಡಿ ಬಂದಂತಹ ಹಣದಿಂದ ಸಂಪಾದಿಸಿದ ಆಸ್ತಿ ಅಕ್ರಮ ಎಂದು ಸಕ್ಷಮ ಪ್ರಾಧಿಕಾರ ಘೋಷಣೆ ಮಾಡಿದೆ. ಚೆನ್ನೈ Competent authority smugglers and foreign exchanges manipulators ನಲ್ಲಿ ವಾದ ಪತ್ರಿವಾದ ಆಗಿ ಆರೋಪಿ ಆಸ್ತಿ ಪಾಸ್ತಿ ಅಕ್ರಮ ಎಂದು ಘೋಷಣೆ ಪ್ರಾಧಿಕಾರ ಹೇಳಿದೆ.

ಆರೋಪಿ‌ ಅಂಜಯ್ ಕುಮಾರ್ (54)ಮೂಲತ ಬಿಹಾರ ರಾಜ್ಯದವನು. 2016 ರಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನೇಕಲ್ ತಾಲ್ಲೂಕಿನ ಬ್ಯಾಗಡದೇನಹಳ್ಳಿ ವಾಸವಿದ್ದ. 2019 ರಲ್ಲಿ ಸೂರ್ಯನಗರ ಪೊಲೀಸರು 822 ಕೆಜಿ ಗಾಂಜಾವನ್ನು ಆರೋಪಿಯಿಂದ ವಶಪಡಿಸಿಕೊಂಡಿದ್ರು. ಆರೋಪಿ ಅಂಜಯ್ ಕುಮಾರ್ ಗಾಂಜಾ ಮಾರಾಟದಿಂದ ಸಂಪಾದಿಸಿದ ಆಸ್ತಿ 30×40 ಸೈಟ್, 60×40 ಸೈಟ್, ಸತ್ಕೀರ್ಥಿ ಅಪಾರ್ಟ್‌ಮೆಂಟ್ ಒಂದು ಪ್ಲಾಟ್, ಒಂದು ಸ್ಕಾರ್ಪಿಯೋ ಕಾರ್, ಜಂಟಿ ಬ್ಯಾಂಕ್ ಅಕೌಂಟ್ ನಲ್ಲಿದ್ದ 9 ಲಕ್ಷ 75 ಸಾವಿರ 918 ಹಣ ಸೇರಿದಂತೆ 1 ಕೋಟಿ 68 ಲಕ್ಷದ 75 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಚಾಕು ತೋರಿಸಿ ಸುಲಿಗೆ; ಆರೋಪಿ ಬಂಧನ ವ್ಯಕ್ತಿಗೆ ಚಾಕು ತೋರಿಸಿ ಸುಲಿಗೆ ಮಾಡಿದ್ದ ಆರೋಪಿ ಬಂಧನ ಮಾಡಲಾಗಿದೆ. ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರಿಂದ ಆರೋಪಿ ಸೆರೆಯಾಗಿದೆ. ಕಲಬುರಗಿ ಮೂಲದ ಲಿಯಾಕತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 7 ಲ್ಯಾಪ್​ಟಾಪ್, ಒಂದು ಟ್ಯಾಬ್ ವಶಕ್ಕೆ ಪಡೆಯಲಾಗಿದೆ. ಮೆಜೆಸ್ಟಿಕ್​​ನಲ್ಲಿ ಜನರನ್ನು ಟಾರ್ಗೆಟ್​ ಮಾಡಿ ಸುಲಿಗೆ ಮಾಡಿದ್ದ ವ್ಯಕ್ತಿ ಬಂಧನವಾಗಿದೆ.

ಇದನ್ನೂ ಓದಿ: ಬೆಂಗಳೂರು: ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ಸೂಟ್​ಕೇಸ್ ಓಪನ್​; ತಲೆ ಕೆಡಿಸಿಕೊಂಡಿದ್ದ ಪೊಲೀಸರು ನಿರಾಳ

ಇದನ್ನೂ ಓದಿ: ಹುಬ್ಬಳ್ಳಿ: ಪೊಲೀಸರಿಂದಲೇ ಗಾಂಜಾ ಮಾರಾಟ ಪ್ರಕರಣ; ಇನ್ಸ್ಪೆಕ್ಟರ್ ಸೇರಿ ಏಳು ಜನ ಅಮಾನತು

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ