ಕೊಡಗಿನಲ್ಲಿ ಹಾವು ಹಿಡಿದ ಆರು ವರ್ಷದ ಬಾಲಕಿ! ಬೆಚ್ಚಿ ಬಿದ್ದ ಮನೆಯವರು

ಕೊಡಗಿನಲ್ಲಿ ಆರು ವರ್ಷದ ಬಾಲಕಿಯೋರ್ವಳು ಹಾವೊಂದನ್ನು ಹಿಡಿದು ಎಲ್ಲರಿಗೂ ಶಾಕ್ ನೀಡಿದ್ದಾಳೆ. ಬಾಲಕಿ ತನುಷಾ ತಂದೆ ರೋಷನ್ ಉರಗ ಪ್ರೇಮಿ.

1/5
ಹಾವು ಎಂದರೆ ಸಾಕು ಎಲ್ಲರೂ ಬೆಚ್ಚಿ ಬಿದ್ದು ದೂರ ಓಡುತ್ತಾರೆ. ಅಂತಹದರಲ್ಲಿ ಕೊಡಗಿನಲ್ಲಿ ಆರು ವರ್ಷದ ಬಾಲಕಿಯೋರ್ವಳು ಹಾವೊಂದನ್ನು ಹಿಡಿದು ಎಲ್ಲರಿಗೂ ಶಾಕ್ ನೀಡಿದ್ದಾಳೆ.

2/5
ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಕಾವಡಿ ಗ್ರಾಮದ ಬಾಲಕಿ ತನುಷಾ ಎಂಬುವವಳು ಹಾವು ಹಿಡಿದ ದಿಟ್ಟ ಬಾಲಕಿ.

3/5
ತನುಷಾ ತಂದೆ ರೋಷನ್ ಉರಗ ಪ್ರೇಮಿ. ತಂದೆ ಬಹಳಷ್ಟು ಹಾವುಗಳನ್ನು ಹಿಡಿದು ಪಳಗಿದವರು. ತಂದೆ ಹವ್ಯಾಸವನ್ನು ನೋಡಿದ್ದ ಮಗಳಿಗೂ ಹಾವು ಹಿಡಿಯುವ ಧೈರ್ಯ ಬಂದಿದೆ.

4/5
ಮನೆಯ ಸಮೀಪ ಆಟವಾಡುತ್ತಿದ್ದಾಗ ಎದುರಿಗೆ ಹಾವು ಬಂದಿದೆ. ತಕ್ಷಣವೇ ಅದನ್ನು ಹಿಡಿದು ತಾಯಿಯನ್ನು ಕರೆದಿದ್ದಾಳೆ. ಓಡಿ ಬಂದ ತಾಯಿ ಮಗಳ ಕೈಯಲ್ಲಿ ಹಾವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.

5/5
ತಕ್ಷಣವೇ ತಂದೆ ರೋಷನ್ರನ್ನು ಕರೆದಿದ್ದಾರೆ. ಸ್ಥಳಕ್ಕೆ ಬಂದ ರೋಷನ್ ಮಗಳ ಕೈಯಿಂದ ಹಾವನ್ನು ತೆಗೆದು ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ.

Click on your DTH Provider to Add TV9 Kannada