ಮಹಿಳೆ‌ ಜೊತೆ ಅಕ್ರಮ‌ ಸಂಬಂಧ ಆರೋಪ; ಗುತ್ತಿಗೆದಾರನ ಮೇಲೆ ಮಹಿಳೆ ಸಂಬಂಧಿಕರಿಂದ ಹಲ್ಲೆ

ವಿವಾಹಿತ ಮಹಿಳೆ‌ ಜೊತೆ ಅಕ್ರಮ‌ ಸಂಬಂಧ ಆರೋಪಿಸಿ, ಮಹಿಳೆ ಸಂಬಂಧಿಕರಿಂದ ಗುತ್ತಿಗೆದಾರನ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ.

ಮಹಿಳೆ‌ ಜೊತೆ ಅಕ್ರಮ‌ ಸಂಬಂಧ ಆರೋಪ; ಗುತ್ತಿಗೆದಾರನ ಮೇಲೆ ಮಹಿಳೆ ಸಂಬಂಧಿಕರಿಂದ ಹಲ್ಲೆ
ಕೊಡಗು
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 20, 2023 | 7:11 AM

ಕೊಡಗು: ವಿವಾಹಿತ ಮಹಿಳೆ‌ ಜೊತೆ ಅಕ್ರಮ‌ ಸಂಬಂಧ ಆರೋಪಿಸಿ, ಮಹಿಳೆ ಸಂಬಂಧಿಕರಿಂದ ಗುತ್ತಿಗೆದಾರನ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಕುಶಾಲನಗರ(Kushalnagar) ಪಟ್ಟಣದಲ್ಲಿ ನಡೆದಿದೆ. ಗುತ್ತಿಗೆದಾರ ಸಂಪತ್ ಹಲ್ಲೆಗೊಳಗಾದ ವ್ಯಕ್ತಿ. ಹೌದು ಮಹಿಳೆಯ ಮನೆಯಲ್ಲಿದ್ದ ಸಂದರ್ಭದಲ್ಲಿ ಆಕೆಯ ಸಂಬಂಧಿಕರು ಇತನನ್ನ ರೆಡ್​ಹ್ಯಾಂಡ್​ ಆಗಿ ಹಿಡಿದು, ಹಲ್ಲೆ ಮಾಡಿ, ಜೊತೆಗೆ ಸಂಪತ್ ವಿರುದ್ಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. ಇನ್ನು ಈ​ ಹಲ್ಲೆಗೊಳಗಾಗಿದ್ದ ಸಂಪತ್ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದ, ಮಾಜಿ ಶಾಸಕ‌ ಅಪ್ಪಚ್ಚು ರಂಜನ್ ಪರವಾಗಿ ಸಂಪತ್ ಓಡಾಡಿದ್ದ. ಸಿದ್ದರಾಮಯ್ಯ ಕಾರಿನ‌ ಮೇಲೆ ಮೊಟ್ಟೆ ಹೊಡೆದ ಆರೋಪಿಗಳಲ್ಲಿ ಇತನು ಒಬ್ಬಾತನಾಗಿದ್ದ.

ಈಜುಕೋಳದಲ್ಲಿ ಈಜುಲು ಹೋಗಿದ್ದ ಇಬ್ಬರು ಬಾಲಕರ ಸಾವು

ದಾವಣಗೆರೆ: ಈಜುಕೋಳದಲ್ಲಿ ಈಜುಲು ಹೋಗಿದ್ದ ಇಬ್ಬರು ಬಾಲಕರು, ಈಜು ಬಾರದೆ ಸಾವನ್ನಪ್ಪಿದ ಘಟನೆ ನಗರದ ದೇವರಾಜು ಅರಸು ಬಡಾವಣೆಯಲ್ಲಿರುವ ರಾಷ್ಟ್ರೀಯ ಈಜು ಸ್ಪರ್ಧೆಗಾಗಿ ನಿರ್ಮಿಸಿದ ಈಜುಕೋಳದಲ್ಲಿ ನಡೆದಿದೆ. ಸಾವುತಾಜುದ್ದೀನ್ (16), ಮುಬಾರಕ್ (15) ಸಾವನ್ನಪ್ಪಿದ ಬಾಲಕರು. ಇವರು ಅಜಾದ್ ನಗರದ ಬೀಡಿ ಲೇಔಟ್ ನಿವಾಸಿಗಳು, ಯುವಜನ ಸೇವೆ ಕ್ರೀಡಾ ಇಲಾಖೆಗೆ ಸೇರಿದ ಈಜುಕೋಳದಲ್ಲಿ ನಿನ್ನೆ(ಮೇ.19) ಸಂಜೆ ವೇಳೆ ಈಜಲು ಹೋಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನು ಬಾಲಕರ ಶವಗಳನ್ನ ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಸ್ಥಳಕ್ಕೆ ಬಸವನಗರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ, ಸಿಸಿ ಕ್ಯಾಮರಾ ಪರಿಶೀಲನೆ ಹಾಗೂ ಸಿಬ್ಬಂದಿ ವಿಚಾರಣೆ ಮಾಡಿದ್ದಾರೆ.

ಇದನ್ನೂ ಓದಿ:ಪ್ರಿಯಕರನ ಜೊತೆ ಸೇರಿ ಗಂಡನನ್ನು ಅಪಹರಣ ಮಾಡಿಸಿದ್ದ ಹೆಂಡತಿ ಹಾಗೂ ಗ್ಯಾಂಗ್​ನ್ನು ಬಂಧಿಸಿದ ಪೀಣ್ಯ ಪೊಲೀಸ್​

ಖಾಸಗಿ ಕಂಪನಿ ಸೆಕ್ಯೂರಿಟಿ ಗಾರ್ಡ್​ ಶವ ಶೌಚಾಲಯದಲ್ಲಿ ಪತ್ತೆ; ಸಾವಿನ ಸುತ್ತ ಅನುಮಾನದ ಹುತ್ತ

ಬೆಂಗಳೂರು: ಶೌಚಾಲಯದಲ್ಲಿ ಬಿದ್ದಿರುವ ಮೃತದೇಹ, ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕುಟುಂಬ, ಮೃತ ದೇಹವನ್ನ ಹೊರಗಿಟ್ಟು ಕಂಪನಿ ವಿರುದ್ದ ಪ್ರತಿಭಟನೆ. ಈ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರಿನ ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿರುವ ಸ್ಟೀಲ್ ಪ್ರೊಫೈಲ್ ಕೈಗಾರಿಕೆ ಬಳಿ. ಹೌದು ಇದೇ ಕೈಗಾರಿಕೆಯಲ್ಲಿ ಕಳೆದ ಎರಡುವರೆ ವರ್ಷದಿಂದ ಕೆಲಸ ಮಾಡುತ್ತಿದ್ದ 40 ವರ್ಷದ ಸಾಬಪ್ಪ ಲಗಳಿ ಅವರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇದೀಗ ಇವರ ಸಾವಿನ ಸುತ್ತ ಹಲವಾರು ಅನುಮಾನಗಳು ಹುಟ್ಟಿಕೊಂಡಿದೆ.

ಮೃತ ಸಾಬಪ್ಪ ರೈನ್‌ಬೋ ಹೆಸರಿನ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಎರಡುವರೆ ವರ್ಷಗಳಿಂದ ಸ್ಟೀಲ್‌ ಪ್ರೊಫೈಲ್ ಕಾರ್ಖಾನೆಯಲ್ಲಿಯೇ ಕೆಲಸ ಮಾಡುತ್ತಿದ್ದ. ಎಂದಿನಂತೆ ನಿನ್ನೆ(ಮೇ.18) ರಾತ್ರಿ ಪಾಳಿಯಲ್ಲಿ ಸೆಕ್ಯುರಿಟಿ ಕೆಲಸ ಮಾಡಿದ್ದಾನೆ. ಮತ್ತೆ ಮುಂಜಾನೆ ಪಾಳಿ ಮುಂದುವರೆಸು ಎಂದು ಸಂಸ್ಥೆಯವರು ಹೇಳಿದ್ದರಂತೆ. ಈ ವೇಳೆ ಶೌಚಾಲಯಕ್ಕೆ ತೆರಳಿದ್ದ ಸಾಬಪ್ಪ ಶೌಚಾಲಯದಲ್ಲೆ ಅಂಗಾತ ಬಿದ್ದಿದ್ದಾನೆ. ಎಷ್ಟೋತ್ತಾದರು ಬರಲಿಲ್ಲವೆಂದು ಸಹೋದ್ಯೋಗಿಗಳು ನೋಡಿದಾಗ ಸಾಬಪ್ಪ ಸಾವನ್ನಪ್ಪಿರುವುದು ದೃಡ ಪಟ್ಟಿದೆ. ಒಟ್ಟಿನಲ್ಲಿ ಕುಟುಂಬಕ್ಕೆ ಆಧಾರಸ್ಥಂಭವಾಗಿದ್ದ ಗಂಡನನ್ನ ಕಳೆದುಕೊಂಡ ಹೆಂಡತಿ ನೋವಿನಲ್ಲಿ ಕೈತೊಳೆಯುತ್ತಿದ್ದು, ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ