Kodagu News: ಡಿಸಿ ಕಚೇರಿ ರಕ್ಷಣೆಗೆ 7 ಕೋಟಿ ರೂ. ವೆಚ್ಚದ ತಡೆಗೋಡೆ ನಿರ್ಮಾಣ: ಅವ್ಯವಹಾರ ಆರೋಪ

|

Updated on: Jun 14, 2023 | 1:31 PM

7 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ನಿರ್ಮಾಣದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. 7 ಕೋಟಿ ರೂ. ವೆಚ್ಚದಲ್ಲಿ ಜರ್ಮನ್ ತಂತ್ರಜ್ಞಾನ ಬಳಸಿ 148 ಮೀ ಉದ್ದ, 15 ಮೀಟರ್ ಎತ್ತರದ ಬೃಹತ್ ತಡೆಗೋಡೆ ನಿರ್ಮಾಣ ಮಾಡಲಾಗಿದೆ.

Kodagu News: ಡಿಸಿ ಕಚೇರಿ ರಕ್ಷಣೆಗೆ 7 ಕೋಟಿ ರೂ. ವೆಚ್ಚದ ತಡೆಗೋಡೆ ನಿರ್ಮಾಣ: ಅವ್ಯವಹಾರ ಆರೋಪ
ಕೊಡುಗು ಜಿಲ್ಲಾಧಿಕಾರಿ ಕಚೇರಿ ದುರಸ್ತಿ ಕಾರ್ಯ
Follow us on

ಕೊಡಗು: 7 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕೊಡಗು ಜಿಲ್ಲಾಧಿಕಾರಿ ಕಚೇರಿ (Kodagu DC Office) ತಡೆಗೋಡೆ (Barrier) ನಿರ್ಮಾಣದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. 7 ಕೋಟಿ ರೂ. ವೆಚ್ಚದಲ್ಲಿ ಜರ್ಮನ್ ತಂತ್ರಜ್ಞಾನ ಬಳಸಿ 148 ಮೀ ಉದ್ದ, 15 ಮೀಟರ್ ಎತ್ತರದ ಬೃಹತ್ ತಡೆಗೋಡೆ ನಿರ್ಮಾಣ ಮಾಡಲಾಗಿದೆ. 2018ರಲ್ಲಿ ಆರಂಭವಾದ ಕಾಮಗಾರಿ 2022 ರಲ್ಲಿ ಪೂರ್ಣವಾಗಿದೆ. ಆದರೆ ಪೂರ್ಣವಾದ ಬೆನ್ನಲ್ಲೆ ಮಳೆಗಾಲದಲ್ಲಿ ತಡೆಗೋಡೆ ನೀರು, ಮಣ್ಣಿನ ಒತ್ತಡ ತಾಳಿಕೊಳ್ಳಲಾಗದೆ ಕುಸಿದು ಬೀಳುವ ಸ್ಥಿಗೆ ಬಂದು ತಲುಪಿದೆ. ಇದೀಗ ತಡೆಗೋಡೆಯನ್ನು ಪಿಡ್ಲೂಡಿ ಇಲಾಖೆ ರಿಪೇರಿ ಮಾಡುತ್ತಿದೆ.

5 ಕೋಟಿ ರೂ. ವೆಚ್ಚದ ಜಿಲ್ಲಾಧಿಕಾರಿಗಳ ಕಚೇರಿ ರಕ್ಷಣೆಗೆ 7 ಕೋಟಿ ರೂ. ವೆಚ್ಚದ ತಡೆಗೋಡೆ ನಿರ್ಮಾಣ ಮಾಡಲಾಗಿದ್ದು, 7 ಕೊಟಿ ವೆಚ್ಚದ ತಡೆಗೋಡೆ ರಕ್ಷಣೆಗೆ 5 ಸಾವಿರ ರೂ. ಮೌಲ್ಯದ ಪ್ಲಾಸ್ಟಿಕ್ ಹೊದಿಕೆಯನ್ನು ಎಂಜಿನಿಯರ್​​ಗಳು ಹೊದಿಸಿದ್ದಾರೆ.

ಇದನ್ನೂ ಓದಿ: Madikeri News: ಮಡಿಕೇರಿಯಲ್ಲಿ ಅವೈಜ್ಞಾನಿಕ ಲೇಔಟ್ ನಿರ್ಮಾಣಕ್ಕೆ ಬೃಹತ್ ಬೆಟ್ಟವೇ ಬಲಿ, ಭೂ ಕುಸಿತದ ಆತಂಕ

ಏಳುಕೋಟಿ ವೆಚ್ಚದ ತಡೆಗೋಡೆ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ತೆನ್ನಿರ ಮಹಿನಾರಿಂದ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಇದೀಗ ತರಾತುರಿಯಲ್ಲಿ ತಡೆಗೋಡೆ ದುರಸ್ಥಿ ಕಾಮಗಾರಿ ಆರಂಭವಾಗಿದೆ.

ಈ ಮಳೆಗಾಲದಲ್ಲಿ ತಡೆಗೋಡೆ ಕುಸಿಯುವ ಆತಂಕ ಸೃಷ್ಠಿಯಾಗಿದ್ದು, ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕೊಚ್ಚಿಹೋಗುವ ಭೀತಿ ಎದುರಾಗಿದೆ. ಅಲ್ಲದೇ ಡಿಸಿ ಕಚೇರಿ ಕೆಳಭಾಗದ ಮನೆಗಳಿಗೆ ಭೂ ಕುಸಿತದ ಭೀತಿ ಶುರುವಾಗಿದೆ. ಪಶ್ಚಿಮಘಟ್ಟಕ್ಕೆ ಸೂಕ್ತವಲ್ಲದ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಅವೈಜ್ಞಾನಿಕ ತಡೆಗೋಡೆಗೆ 7 ಕೋಟಿ ರೂ. ದುಂದುವೆಚ್ಚ ಮಾಡಲಾಗಿದೆ ಎಂದು ಪಿಡ್ಲೂಡಿ ವಿರುದ್ಧ ಸಾರ್ವಜನಿಕರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಎಂಜಿನಿಯರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ