ಮಡಿಕೇರಿಯಲ್ಲಿ ವೃದ್ಧೆಯರನ್ನು ಕಟ್ಟಿ ಹಾಕಿ ಮನೆ ದರೋಡೆ! 2.5 ಲಕ್ಷ ರೂ. ನಗದು, 83 ಗ್ರಾಂ ಚಿನ್ನಾಭರಣ ಕದ್ದು ಪರಾರಿ

ತಡರಾತ್ರಿ ಮನೆ ಬಾಗಿಲು ಮುರಿದು ದುಷ್ಕೃತ್ಯ ಎಸಗಿದ ನಾಲ್ವರು ಪರಾರಿಯಾಗಿದ್ದಾರೆ. ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಮಡಿಕೇರಿಯಲ್ಲಿ ವೃದ್ಧೆಯರನ್ನು ಕಟ್ಟಿ ಹಾಕಿ ಮನೆ ದರೋಡೆ! 2.5 ಲಕ್ಷ ರೂ. ನಗದು, 83 ಗ್ರಾಂ ಚಿನ್ನಾಭರಣ ಕದ್ದು ಪರಾರಿ
ಮನೆಯಲ್ಲಿದ್ದ ವೃದ್ಧೆಯರು
Follow us
TV9 Web
| Updated By: sandhya thejappa

Updated on:Feb 02, 2022 | 9:17 AM

ಕೊಡಗು: ವೃದ್ಧೆಯರನ್ನು ಕಟ್ಟಿ ಹಾಕಿ ಮನೆ ದರೋಡೆ (Robbery) ಮಾಡಿರುವ ಘಟನೆ ಜಿಲ್ಲೆಯ ಮಡಿಕೇರಿ (Madikeri) ತಾಲೂಕಿನ ಕೊಳಕೇರಿ ಗ್ರಾಮದಲ್ಲಿ ನಡೆದಿದೆ. ಜಾನಕಿ, ಅಮ್ನಕ್ಕಿಯನ್ನು ಬೆದರಿಸಿ, ಅವರ ಕೈಕಾಲು ಕಟ್ಟಿ ದರೋಡೆ ಮಾಡಿದ್ದಾರೆ. ಮನೆಯಲ್ಲಿದ್ದ 2.5 ಲಕ್ಷ ರೂ. ನಗದು, 83 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ತಡರಾತ್ರಿ ಮನೆ ಬಾಗಿಲು ಮುರಿದು ದುಷ್ಕೃತ್ಯ ಎಸಗಿದ ನಾಲ್ವರು ಪರಾರಿಯಾಗಿದ್ದಾರೆ. ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಕಬ್ಬು ಸಂಪೂರ್ಣ ಭಸ್ಮ: ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬೆಲವಂತರ ಹೊರಹೊಲಯದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹತ್ತಾರು ಎಕರೆ ಕಬ್ಬು ಬೆಳೆ ಹೊತ್ತಿ ಉರಿದಿದೆ. ಕಬ್ಬು ಸಂಪೂರ್ಣ ಭಸ್ಮವಾಗಿದೆ. ಧಿಡೀರ್ ಬೆಂಕಿ ಹೊತ್ತಿದ್ದರಿಂದ ಅಕ್ಕಪಕ್ಕದ ಜಮೀನಿಗೆ ಬೆಂಕಿ ವ್ಯಾಪಿಸಿದೆ. 11 ರೈತರ ಹೊಲಗಳಿಗೆ ಬೆಂಕಿ ವ್ಯಾಪಿಸಿದೆ.

ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯ ಬಂಧನ: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಗ್ರಾಮದ ಗಾಯತ್ರಿ ಎಂಬ ಮಹಿಳೆ ತನ್ನ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾಗ  ಕೊರಟಗೆರೆ ಅಬಕಾರಿ ಇಲಾಖೆ ಅಧಿಕಾರಿ ಲತಾ ನೇತೃತ್ವದಲ್ಲಿ ದಾಳಿ ನಡೆದಿದೆ. ಸುಮಾರು ಎಂಟು ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ

Fitness tips: ಯೋಗ ಮಾಡುವ ಮೊದಲು ಮತ್ತು ನಂತರ ಏನು ತಿನ್ನಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ ಪರಿಶೀಲಿಸಿ

Karnataka Weather Today: ಉತ್ತರ ಭಾರತದಲ್ಲಿ ಫೆ. 3ರಿಂದ ಮಳೆ ಹೆಚ್ಚಳ; ಹಿಮಾಚಲ ಪ್ರದೇಶದಲ್ಲಿ ಹಿಮಪಾತ

Published On - 9:07 am, Wed, 2 February 22