ಕೊಡಗು: ಕೆಲಸದ ನಡುವೆ ಒಂದಷ್ಟು ಸಮಯ ಏಕಾಂತದಲ್ಲಿ ಕಳೆಯಬೇಕು ಎಂಬುವುದು ಹಲವರ ಮನಸ್ಥಿತಿಯಾದರೆ, ವೀಕೆಂಡ್ನಲ್ಲಿ(Weekend) ಜಾಲಿಯಾಗಿ ಸ್ನೇಹಿತರ ಜತೆ ರೈಡ್ ಹೋಗಿಬರಬೇಕು ಎಂಬುವುದು ಮತ್ತಷ್ಟು ಜನರ ನಿರ್ಣಯವಾಗಿರುತ್ತದೆ. ಹೀಗೆ ಪ್ರವಾಸಕ್ಕೆ ಹೋಗಲು ಮುಂದಾದವರಿಗೆ ಅದರಲ್ಲೂ ಮಡಿಕೇರಿ ಕಡೆಗೆ ಪ್ರವಾಸಕ್ಕೆ ಹೋಗಲು ಹೊರಟವರಿಗೆ ಖುಷಿಯ ಸುದ್ದಿಯೊಂದು ಸಿಕ್ಕಂತ್ತಾಗಿದೆ. ಐತಿಹಾಸಿಕ ರಾಜಾ ಸೀಟ್(Raja seat) ಪ್ರವಾಸಿಗರಿಗಾಗಿ ನಳನಳಿಸುತ್ತಿದೆ. ಐದು ಕೋಟಿ ವೆಚ್ಚದ ಕಾಮಗಾರಿ ಸದ್ಯ ಸಂಪೂರ್ಣವಾಗಿದ್ದು, ಪ್ರವಾಸಿಗರನ್ನು(Tourists) ಮಂಜಿನ ನಗರಿ ಕೈ ಬೀಸಿ ಕರೆಯುತ್ತಿದೆ.
ಮಡಿಕೇರಿ ರಾಜಾ ಸೀಟ್, ಯಾರಿಗೆ ತಾನೆ ಇಷ್ಟ ಇಲ್ಲಾ ಹೇಳಿ. ಮಡಿಕೇರಿಗೆ ಬಂದ ಮೇಲೆ ಒಂದು ಸಲ ಈ ರಾಜಾ ಸೀಟ್ಗೆ ಬಂದು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ, ಸುಮಧುರ ಸೂರ್ಯಾಸ್ತವನ್ನು ವೀಕ್ಷಣೆ ಮಾಡುವುದು ಎಂದರೆ ಅದೊಂದು ಸ್ವರ್ಗ ಸುಖ. ಈ ಖುಷಿಯನ್ನು ಜಾಸ್ತಿ ಮಾಡುವುದಕ್ಕೆ ಅಂತಾನೆ ಕೊಡಗು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ತೋಟಗಾರಿಕಾ ಇಳಾಖೆ ಜಂಟಿಯಾಗಿ ಗ್ರೇಟರ್ ರಾಜಾ ಸೀಟ್ ಅನ್ನು ಅಭಿವೃದ್ಧಿ ಪಡಿಸಿದೆ. ಐದು ಕೋಟಿ ರೂಪಾಯಿ ವೆಚ್ಚದ ಈ ಕಾಮಗಾರಿ ಬಹುತೇಕ ಸಂಪೂರ್ಣವಾಗಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆ ಗೊಳ್ಳಲಿದೆ.
ಮಡಿಕೇರಿಯ ರಾಜಾ ಸೀಟ್ ಗ್ರೇಟ್ ಆಗುತ್ತಾ ಇರುವುದು ಸ್ಥಳೀಯರಲ್ಲೂ ಹೆಚ್ಚು ಖುಷಿ ತಂದಿದೆ. ಕಡಿದಾದ ಬೆಟ್ಟದಲ್ಲಿ ಎಂಟು ವೀವ್ ಪಾಯಿಂಟ್ಗಳು ನಿರ್ಮಾಣವಾಗುತ್ತಾ ಇವೆ. ಪ್ರಕೃತಿ ಮಡಿಲಲ್ಲಿ ಆಸ್ವಾದಿಸಬೇಕು ಎಂದು ಬಯಸುವವರಿಗೆ ಇದು ಪ್ರಥಮ ಆಧ್ಯತೆಯಾಗಲಿದೆ ಎಂದು ಗ್ರೇಟರ್ ರಾಜಾಸೀಟ್ ಉಸ್ತುವಾರಿ ಪ್ರವೀಣ್ ಹೇಳಿದ್ದಾರೆ.
ಒಟ್ಟಿನಲ್ಲಿ ಕೊಡಗು ಪ್ರವಾಸೋದ್ಯಮ ದಿನದಿಂದ ದಿನಕ್ಕೆ ಅಭಿವೃದ್ಧಿ ಆಗುತ್ತಾ ಇದೆ. ಪ್ರವಾಸಿಗರ ಮನ ತಣಿಸಲು ಹೊಸ ಹೊಸ ಯೋಜನೆಗಳು ಅನುಷ್ಠಾಗೊಳುತ್ತಿವೆ. ಇದರೊಂದಿಗೆ ಕೊಡಗಿನ ಅಭಿವೃದ್ಧಿಯೊಂದಿಗೆ ಪ್ರವಾಸೋದ್ಯಮವೂ ಅಭಿವೃದ್ಧಿಯಾಗುತ್ತಿವೆ.
ವರದಿ: ಗೋಪಾಲ್ ಸೋಮಯ್ಯ
ಇದನ್ನೂ ಓದಿ:
ಲಾಕ್ಡೌನ್ ನಡುವೆಯೂ ಲಾಭ ಗಳಿಸಿದ ಪ್ರವಾಸಿ ತಾಣ; ಬನ್ನೇರುಘಟ್ಟ ಉದ್ಯಾನವನದಲ್ಲಿ ಕೋಟ್ಯಾಂತರ ರೂ. ಹಣ ಸಂಗ್ರಹ
Published On - 11:42 am, Fri, 11 February 22