AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪ್ರವಾಸಕ್ಕೆಂದು ಬಂದು ಸಮುದ್ರದಲ್ಲಿ ಬಿದ್ದು ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಕರಾವಳಿ ಪೊಲೀಸರು

ಪ್ರವಾಸಕ್ಕೆ ಬಂದಿದ್ದ ಮಹಿಳೆಯೊಬ್ಬರು ಕುಟುಂಬದೊಂದಿಗೆ ಸಖತ್​ ಎಂಜಾಯ್​ ಮಾಡುತ್ತಿದ್ದರು. ಆದರೆ ಅವರು ಇದ್ದ ಬೋಟ್​​ಗೆ ಬಲವಾದ ಅಲೆ ಅಪ್ಪಳಿಸಿದ ಕಾರಣ ಮಹಿಳೆ ಸಮುದ್ರಕ್ಕೆ ಬಿದ್ದಿದ್ದರು.

Video: ಪ್ರವಾಸಕ್ಕೆಂದು ಬಂದು ಸಮುದ್ರದಲ್ಲಿ ಬಿದ್ದು ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಕರಾವಳಿ ಪೊಲೀಸರು
ಪೊಲೀಸರು ಮಹಿಳೆಯನ್ನು ರಕ್ಷಿಸಿದ ದೃಶ್ಯ
TV9 Web
| Edited By: |

Updated on: Jan 10, 2022 | 4:22 PM

Share

ಕಡಲತೀರಗಳಿಗೆ ಹೋದವರು, ಸಮುದ್ರದಲ್ಲಿ ಸಾಹಸ ಕ್ರೀಡೆಗಳನ್ನು ಆಡಲು ಹೋದವರು ಅಪಾಯಕ್ಕೆ ಸಿಲುಕುವ ಘಟನೆ ಆಗಾಗ ನಡೆಯುತ್ತಿರುತ್ತದೆ. ಅದೆಷ್ಟೋ ಮಂದಿ ಸಾಹಸಕ್ಕೆ ಕೈಹಾಕಿ ಜೀವವನ್ನೇ ಕಳೆದುಕೊಂಡವರೂ ಇದ್ದಾರೆ. ಹಾಗೇ, ಮುಂಬೈನಲ್ಲಿ ಭಾನುವಾರ ಇಂಥದದ್ದೇ ಅಪಾಯಕ್ಕೆ ಒಳಗಾಗಿದ್ದ ಮಹಿಳೆಯೊಬ್ಬರನ್ನು ಕರಾವಳಿ ಪೊಲೀಸರು ಮತ್ತು ಕೊಲಾಬಾ ಪೊಲೀಸರು ಜಂಟಿಯಾಗಿ ರಕ್ಷಿಸಿದ್ದಾರೆ. ಅಂದಹಾಗೇ, ಈ ಘಟನೆ ನಡೆದದ್ದು ಮುಂಬೈನ ಗೇಟ್​ ವೇ ಆಫ್​ ಇಂಡಿಯಾದ ಬಳಿ.

ಪ್ರವಾಸಕ್ಕೆ ಬಂದಿದ್ದ ಮಹಿಳೆಯೊಬ್ಬರು ಕುಟುಂಬದೊಂದಿಗೆ ಸಖತ್​ ಎಂಜಾಯ್​ ಮಾಡುತ್ತಿದ್ದರು. ಆದರೆ ಅವರು ಇದ್ದ ಬೋಟ್​​ಗೆ ಬಲವಾದ ಅಲೆ ಅಪ್ಪಳಿಸಿದ ಕಾರಣ ಮಹಿಳೆ ಸಮತೋಲನ ಕಳೆದುಕೊಂಡು ಸಾಗರಕ್ಕೆ ಬಿದ್ದಿದ್ದಾರೆ. ಮುಳುಗುತ್ತಿದ್ದ ಅವರು ಭಯದಿಂದ ಕೂಗುತ್ತಿದ್ದರು. ನಂತರ ಅಲ್ಲಿಗೆ ದೋಣಿಯಲ್ಲಿ ಬಂದ ಕರಾವಳಿ ಪೊಲೀಸರು ಮಹಿಳೆಗೆ ಆಸರೆಗೆ ಹಗ್ಗವೊಂದನ್ನು ಕೊಟ್ಟು, ಪೊಲೀಸ್​ ಸಿಬ್ಬಂದಿಯೊಬ್ಬ ನೀರಿಗೆ ಜಿಗಿದು ನಂತರ ರಕ್ಷಣೆ ಮಾಡಿದ್ದಾರೆ. ಹಾಗೇ ಘಟನೆಯ ಬಗ್ಗೆ ಮುಂಬೈ ಪೊಲೀಸರೂ ಕೂಡ ಮಾಹಿತಿ ನೀಡಿದ್ದಾರೆ. ಅಪಾಯದಲ್ಲಿದ್ದ ಮಹಿಳೆಯನ್ನು ಪೊಲೀಸರು ರಕ್ಷಿಸಿದ ವಿಡಿಯೋ ಕೂಡ ವೈರಲ್ ಆಗಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.  ಹಾಗೇ, ಮಹಿಳೆ ಲೈಪ್​ ಜಾಕೆಟ್​ ಧರಿಸಿದ್ದರಿಂದ ಒಂದೇ ಸಲ ಯಾವುದೇ ಸಮಸ್ಯೆ ಆಗಲಿಲ್ಲ. ಒಂದೊಮ್ಮೆ ಲೈಫ್ ಜಾಕೆಟ್​ ಧರಿಸದೆ ಇದ್ದಿದ್ದರೆ ಇನ್ನಷ್ಟು ಸಮಸ್ಯೆ ಆಗುತ್ತಿತ್ತೂ ಹೇಳಲಾಗಿದೆ.

ಇದನ್ನೂ ಓದಿ: ಮರದ ಸ್ಕೇಲ್​ನಲ್ಲಿ ಮದುವೆಯ ಊಟದ ಮೆನು ಬರೆಸಿದ ಕುಟುಂಬ: ವೈರಲ್​ ಆದ ಫೋಟೋಗಳು