AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು: ಸರ್ಕಾರಿ ಕಾಮಗಾರಿ ಟೆಂಡರ್​​ಗೆ ನಕಲಿ‌ ದಾಖಲೆ; ಲಕ್ಷಾಂತರ ರೂ ಲಪಟಾಯಿಸಲು ಯತ್ನ

ಕೊಡಗು ಜಿಲ್ಲೆಯಲ್ಲಿ ಮಳೆಹಾನಿ ಕಾಮಗಾರಿ ಟೆಂಡರ್‌ನಲ್ಲಿ ಬೃಹತ್ ಅಕ್ರಮ ಬಯಲಾಗಿದೆ. ಕೆಲ ಗುತ್ತಿಗೆದಾರರು ಕಾವೇರಿ ನೀರಾವರಿ ನಿಗಮ ಸೇರಿದಂತೆ ವಿವಿಧ ಇಲಾಖೆಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಲಕ್ಷಾಂತರ ರೂ. ಮೌಲ್ಯದ ಕಾಮಗಾರಿ ಪಡೆಯಲು ಯತ್ನಿಸಿದ್ದಾರೆ. ಗುತ್ತಿಗೆದಾರರ ಸಂಘದಿಂದ ದೂರು ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ತನಿಖೆಗೆ ಆಗ್ರಹಿಸಲಾಗಿದೆ.

ಕೊಡಗು: ಸರ್ಕಾರಿ ಕಾಮಗಾರಿ ಟೆಂಡರ್​​ಗೆ ನಕಲಿ‌ ದಾಖಲೆ; ಲಕ್ಷಾಂತರ ರೂ ಲಪಟಾಯಿಸಲು ಯತ್ನ
ಕಾಮಗಾರಿ ಟೆಂಡರ್‌ನಲ್ಲಿ ಅಕ್ರಮ
Gopal AS
| Edited By: |

Updated on: Apr 19, 2026 | 7:36 PM

Share

ಕೊಡಗು, ಏಪ್ರಿಲ್​ 19: ಸರ್ಕಾರದಿಂದ ಕೈಗೊಳ್ಳಲಾಗುವ ಯಾವುದೇ ಕಾಮಗಾರಿಗಳು ಅದರದ್ದೇ ಆದ ನೀತಿ ನಿಯಮಗಳಿಗೆ ಒಳಪಟ್ಟು ನಡೆಯುತ್ತವೆ. ಅಂದರೆ ಟೆಂಡರ್ (tender) ಕರೆಯುವುದು, ವರ್ಕ್ ಆರ್ಡರ್ ಪಡೆಯುವುದು, ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನ ಸಲ್ಲಿಸುವುದು ಇತ್ಯಾದಿ. ಆದರೆ ಕೊಡಗುನಲ್ಲಿ ಸರ್ಕಾರದ ಟೆಂಡರ್ ಪಡೆಯಲು ನಕಲಿ ದಾಖಲೆಯನ್ನ (Fake documents) ಸಲ್ಲಿಸಿ ಲಕ್ಷಾಂತರ ರೂ ಮೌಲ್ಯದ ಕಾಮಗಾರಿ ಪಡೆಯಲು ಮುಂದಾದ ಪ್ರಕರಣ ಬಯಲಿಗೆ ಬಂದಿದೆ.

ಮಳೆಹಾನಿ ಕಾಮಗಾರಿ ಟೆಂಡರ್‌ನಲ್ಲಿ ಬೃಹತ್ ಅಕ್ರಮ: ನಕಲಿ ದಾಖಲೆ ಸಲ್ಲಿಕೆ ಆರೋಪ

ಕೊಡಗು ಜಿಲ್ಲೆಯ ಪಂಚಾಯತ್ ರಾಜ್ ಇಲಾಖೆಯಲ್ಲಿ ಮಳೆಹಾನಿ ಪರಿಹಾರ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಾವೇರಿ ನೀರಾವರಿ ನಿಗಮದ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಗುತ್ತಿಗೆದಾರರಾದ ನವೀನ್, ಸುರೇಶ್ ಎಂಬುವವರು ಟೆಂಡರ್ ಗಿಟ್ಟಿಸಿಕೊಂಡಿದ್ದಾರೆ ಎಂದು ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಜೀವ್ ಲೋಚನ್ ದೂರಿದ್ದಾರೆ.

ಇದನ್ನೂ ಓದಿ: ಸಾರಿಗೆ ನೌಕರರಾಯ್ತು ಈಗ ಗುತ್ತಿಗೆದಾರರ ಸರದಿ: ಬಾಕಿ ಬಿಲ್​​ಗೆ ಆಗ್ರಹಿಸಿ ಮಾ.6ರಂದು ಪ್ರತಿಭಟನೆಗೆ ಕರೆ

ಯಾವುದೇ ಸರ್ಕಾರಿ ಟೆಂಡರ್​ ಪಡೆಯುವ ಮೊದಲು ಮುಂಚೆ ಇಂತಹ ಕಡೆಗಳಲ್ಲಿ ಗುತ್ತಿಗೆ ಕೆಲಸ ಮಾಡಿದ್ದೇನೆ ಅಂತ ದೃಢೀಕೃತ ಪ್ರಮಾಣ ಪತ್ರಗಳನ್ನ ಸಲ್ಲಿಸುವುದು ಕಡ್ಡಾಯ. ಆದರೆ ಯಾವುದೇ ಕಾಮಗಾರಿಗಳನ್ನ ಮಾಡದಿರುವ ಈ ಗುತ್ತಿಗೆದಾರು ತಾವು ಕಾವೇರಿ ನೀರಾವರಿ ನಿಗಮ, ಮೈಸೂರು ಜಿಲ್ಲಾ ಪಂಚಾಯತ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಇಲಾಖೆ ಸೇರಿದಂತೆ ಹಲವು ಕಡೆ ಗುತ್ತಿಗೆ ಆಧಾರಿತ ಕೆಲಸ ಮಾಡಿರುವುದಾಗಿ ನಕಲಿ ದಾಖಲೆಗಳನ್ನ ಸಲ್ಲಿಸಿ ಮೋಸ ಮಾಡಿದ್ದಾರೆ ಎಂಬುದು ಕೊಡಗು ಗುತ್ತಿಗೆದಾರರ ಸಂಘದ ಆರೋಪ.

ಇದನ್ನೂ ಓದಿ: ಕೆಲಸವಿಲ್ಲದೆ ಕರಾವಳಿ ಗುತ್ತಿಗೆದಾರರ ಕೈ ಖಾಲಿ: ರಾಜ್ಯ ಸರ್ಕಾರದಿಂದ ನಿರ್ಲಕ್ಷ್ಯ ಆರೋಪ

ಈ ಬಗ್ಗೆ ಈಗಾಗಲೇ ಪಂಚಾಯತ್ ರಾಜ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿ ಮೋಸ ಮಾಡಿದ ಗುತ್ತಿಗೆದಾರರನ್ನ ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹಿಸಲಾಗಿದೆ. ಇನ್ನು ಇಂತಹ ಹತ್ತಾರು ಪರಕರಣಗಳು ನಡೆದಿರುವ ಸಾಧ್ಯತೆ ದಟ್ಟವಾಗಿದ್ದು, ಸಮಗ್ರ ತನಿಖೆಗೆ ಆದೇಶ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us