ಕೊಡಗಿನಲ್ಲಿ ದಂಪತಿ ಆತ್ಮಹತ್ಯೆ; ಪತ್ನಿಯ ಶವ ನೋಡುತ್ತಿದ್ದಂತೆ ತಾನೂ ಆತ್ಮಹತ್ಯೆ ಮಾಡಿಕೊಂಡ

| Updated By: ಆಯೇಷಾ ಬಾನು

Updated on: Feb 21, 2022 | 8:50 AM

ದಂಪತಿ ಬಿರುನಾಣಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮೊದಲು ಪತ್ನಿ ಶಿಲ್ಪಾ ಆತ್ಮಹತ್ಯೆಗೆ ಶರಣಾಗಿದ್ದರು. ಬಳಿಕ ಮನೆಗೆ ಬಂದ ಪತಿ ಯುವರಾಜ್, ಪತ್ನಿಗೆ ಶವ ನೋಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡಗಿನಲ್ಲಿ ದಂಪತಿ ಆತ್ಮಹತ್ಯೆ; ಪತ್ನಿಯ ಶವ ನೋಡುತ್ತಿದ್ದಂತೆ ತಾನೂ ಆತ್ಮಹತ್ಯೆ ಮಾಡಿಕೊಂಡ
ದಂಪತಿ ಆತ್ಮಹತ್ಯೆ
Follow us on

ಕೊಡಗು: ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಗ್ರಾಮದಲ್ಲಿ ಪತಿ ಪತ್ನಿ ಇಬ್ಬರೂ ಆತ್ಮಹತ್ಯೆಗೆ(Couple Suicide) ಶರಣಾಗಿರುವ ಘಟನೆ ನಡೆದಿದೆ. ಪತಿ ಯುವರಾಜ್ (25), ಪತ್ನಿ ಶಿಲ್ಪಾ (22) ಆತ್ಮಹತ್ಯೆ ಮಾಡಿಕೊಂಡವರು. ಮೃತ ಯುವರಾಜ್ ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ದಂಪತಿ ಬಿರುನಾಣಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮೊದಲು ಪತ್ನಿ ಶಿಲ್ಪಾ ಆತ್ಮಹತ್ಯೆಗೆ ಶರಣಾಗಿದ್ದರು. ಬಳಿಕ ಮನೆಗೆ ಬಂದ ಪತಿ ಯುವರಾಜ್, ಪತ್ನಿಗೆ ಶವ ನೋಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಕೊಡಗಿನಲ್ಲೇ ಮತ್ತೊಂದು ಕಡೆ ಅನುಮಾನಾಸ್ಪದವಾಗಿ ಇಬ್ಬರ ಸಾವಾಗಿದೆ. ಮಡಿಕೇರಿ ತಾಲೂಕಿನ ಚೇಲಾವರ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಕೇರಳ ಮೂಲದ ಪೌಲಸ್, ಸುಕುಮಾರ್ ಸಾವಾಗಿದೆ. ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪೌಲಸ್ ಶವ ಸಿಕ್ಕಿದ್ದು ನೇಣು ಬಿಗಿದ ಸ್ಥಿತಿಯಲ್ಲಿ ಸುಕುಮಾರ್ ಮೃತದೇಹ ಪತ್ತೆಯಾಗಿದೆ. ಪೌಲಸ್ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು ಪೌಲಸ್ ಸಾವು ನೋಡಿ ಹೆದರಿ ಸುಕುಮಾರ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದೂ ಊಹಿಸಲಾಗಿದೆ. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯ ನಂತರವೇ ಸತ್ಯ ಬಯಲಾಗಬೇಕಿದೆ.

ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ
ತುಮಕೂರು: ಹಗಲಲ್ಲಿ ಬೀಗ ಹಾಕಿರುವ ಮನೆಗಳನ್ನ ಟಾರ್ಗೆಟ್ ಮಾಡಿ ರಾತ್ರಿ ವೇಳೆ ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಾವಗಡ ತಾಲೂಕಿನ ತಿರುಮಣಿ ಪೊಲೀಸರು ಜಯಪ್ರಕಾಶ್ ನಾಯ್ಕ್ (21), ಲೊಕೇಶ್ (27), ದೇವರಾಜ್ (31) ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 11 ಲಕ್ಷ 60 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಮಲೆನಾಡು ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಭೀಕರ ಹತ್ಯೆ
ಭಾನುವಾರ ರಾತ್ರಿವರೆಗೂ ಮಲೆನಾಡು ಶಿವಮೊಗ್ಗ (Shivamogga) ತಣ್ಣಗಿತ್ತು.. ರಾತ್ರಿ 9.30ರ ಸಮಯ.. ಎಲ್ಲರೂ ಊಟ ಮಾಡಿ ಮಲಗೋಕೆ ಸಜ್ಜಾಗಿದ್ರು.. ಇನ್ನೇನು ನಿದ್ರೆಗೆ ಜಾರಬೇಕು ಅನ್ನುವಷ್ಟರಲ್ಲೇ ರಕ್ತಪಾತ ನಡೆದಿದೆ.. ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಿಂದೂ ಕಾರ್ಯಕರ್ತನನ್ನು ಕೊಚ್ಚಿ ಕೊಚ್ಚಿ ಕೊಲೆಗೈದು (murder) ಎಸ್ಕೇಪ್ ಆಗಿದ್ದಾರೆ.. ಇದ್ರಿಂದಾಗಿ ಶಿವಮೊಗ್ಗ ಈಗ ಬೂದಿ ಮುಚ್ಚಿದ ಕೆಂಡದತಾಗಿದೆ. ಕತ್ತಲ ಹೊತ್ತು.. ನೆಮ್ಮದಿಯಿಂದ ನಿದ್ದೆ ಮಾಡ್ಬೇಕಿದ್ದ ಜನರು ಇದ್ದಕ್ಕಿದ್ದಂತೆ ರೊಚ್ಚಿಗೆದ್ದಿದ್ರು.. ಮನ ಬಂದಂತೆ ಕಲ್ಲು ತೂರಾಟ ನಡೆಸಿದರು… ಪೊಲೀಸರು ಎಷ್ಟೇ ತಡೆದ್ರೂ ಬಿಡದೇ ಮನಸೋ ಇಚ್ಛೆ ಕಲ್ಲೆಸೆಯುತ್ತಿದ್ರು.. ಕಣ್ಣಿಗೆ ಕಂಡ ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ರು.. ಈ ಸಿಟ್ಟು ಆಕ್ರೋಶಕ್ಕೆ ಕಾರಣವೇ ಆ ರಕ್ತಸಿಕ್ತ ಸೀನ್ಗಳು.. ಏಕೆಂದರೆ ನಡುರಸ್ತೆಯಲ್ಲೇ ನೆತ್ತರೋಕುಳಿ ಹರಿದಿದೆ. ದುಷ್ಕರ್ಮಿಗಳು ಮನಬಂದಂತೆ ಕೊಚ್ಚಿ ಕೊಚ್ಚಿ ಕೊಂದಿದ್ದಾರೆ. ಕಿರಾತಕರ ರಕ್ತದಾಹಕ್ಕೆ ಬಜರಂಗದಳ (Bajrang Dal) ಕಾರ್ಯಕರ್ತ ಬಲಿಯಾಗಿದ್ದಾನೆ..!

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕತನ ಹತ್ಯೆ-ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಮಲೆನಾಡು..!
ರಾತ್ರಿ 9.30ರ ಸಮಯ.. ಗೃಹ ಸಚಿವ ಆರಗ ಜ್ಞಾನೇಂದ್ರ ತವರು ಜಿಲ್ಲೆ ಬೆಚ್ಚಿ ಬಿದ್ದಿತ್ತು.. ಯಾಕಂದ್ರೆ, ಶಿವಮೊಗ್ಗದ ತೀರ್ಥಹಳ್ಳಿಗೆ ಹೋಗುವ ರಸ್ತೆ ಪಕ್ಕದ ಬಡಾವಣೆಯಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಕಾರಿನಲ್ಲಿ ಬಂದಿದ್ದ 4ರಿಂದ 6 ಜನರ ಗುಂಪು, ಬಜರಂಗದಳ ಕಾರ್ಯಕರ್ತ ಹರ್ಷ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.. ತೀವ್ರವಾಗಿ ಗಾಯಗೊಂಡಿದ್ದ ಹರ್ಷ ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದ.. ಕೂಡ್ಲೇ ಯುವಕನನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದ್ರೂ ಚಿಕಿತ್ಸೆ ಫಲಿಸದೇ ಹರ್ಷ ಜೀವಬಿಟ್ಟಿದ್ದಾನೆ.

ಇದನ್ನೂ ಓದಿ: ವ್ಯಾಯಾಮ ನಿಮಗೆ ಯಾವೆಲ್ಲಾ ಪ್ರಯೋಜನಗಳನ್ನು ನೀಡಲಿದೆ ಗೊತ್ತಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ

ತೂಕ ಇಳಿಕೆಗೆ ಸಹಾಯಕವಾಗಲಿದೆ ಅಲೋವೆರಾ; ಈ 4 ವಿಧಾನಗಳ ಬಗ್ಗೆ ಮಾತ್ರ ಇರಲಿ ಗಮನ

Published On - 8:06 am, Mon, 21 February 22