ನಿವೃತ್ತ ಪೊಲೀಸ್ ಅಧಿಕಾರಿ ಮನೆಗೆ ನುಗ್ಗಿ ಹಲ್ಲೆಗೈದು ದರೋಡೆಗೆ ಯತ್ನ;ಗಾಯಗೊಂಡ‌ ಮಹಿಳೆ ಜಿಲ್ಲಾಸ್ಪತ್ರೆಗೆ ದಾಖಲು

ನಿವೃತ್ತ ಪೊಲೀಸ್(Retired Police) ಅಧಿಕಾರಿ ಎಂ.ಸಿ.ಪ್ರಭಾಕರ್ ಪತ್ನಿ ಸಾಕಮ್ಮ ಎಂಬುವವರು ಮನೆಯಲ್ಲಿ ಒಬ್ಬರೇ ಇದ್ದಾಗ, ನುಗ್ಗಿದ ದುಷ್ಕರ್ಮಿಗಳು ಸಾಕಮ್ಮ ಅವರ ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆಗೈದ ದರೋಡೆಗೆ ಯತ್ನಿಸಿದ್ದಾರೆ. ಹಲ್ಲೆಗೊಳಗಾದ ಪ್ರಭಾಕರ್ ಪತ್ನಿ ಸಾಕಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಿವೃತ್ತ ಪೊಲೀಸ್ ಅಧಿಕಾರಿ ಮನೆಗೆ ನುಗ್ಗಿ ಹಲ್ಲೆಗೈದು ದರೋಡೆಗೆ ಯತ್ನ;ಗಾಯಗೊಂಡ‌ ಮಹಿಳೆ ಜಿಲ್ಲಾಸ್ಪತ್ರೆಗೆ ದಾಖಲು
ಮಡಿಕೇರಿ
Edited By:

Updated on: Nov 05, 2023 | 10:17 PM

ಕೊಡಗು, ನ.05: ನಿವೃತ್ತ ಪೊಲೀಸ್ ಅಧಿಕಾರಿ ಮನೆಗೆ ನುಗ್ಗಿ ಹಲ್ಲೆಗೈದು ದರೋಡೆಗೆ ಯತ್ನಿಸಿದ ಘಟನೆ ಮಡಿಕೇರಿ(Madikeri) ನಗರದ ಕಾಲೇಜು ರಸ್ತೆಯ IDBI ಬ್ಯಾಂಕ್ ಬಳಿ ನಡೆದಿದೆ. ನಿವೃತ್ತ ಪೊಲೀಸ್(Retired Police) ಅಧಿಕಾರಿ ಎಂ.ಸಿ.ಪ್ರಭಾಕರ್ ಪತ್ನಿ ಸಾಕಮ್ಮ ಎಂಬುವವರು ಮನೆಯಲ್ಲಿ ಒಬ್ಬರೇ ಇದ್ದಾಗ, ನುಗ್ಗಿದ ದುಷ್ಕರ್ಮಿಗಳು ಸಾಕಮ್ಮ ಅವರ ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆಗೈದ ದರೋಡೆಗೆ ಯತ್ನಿಸಿದ್ದಾರೆ. ಹಲ್ಲೆಗೊಳಗಾದ ಪ್ರಭಾಕರ್ ಪತ್ನಿ ಸಾಕಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಮಡಿಕೇರಿ ನಗರ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಣ್ಣಿಗೆ ಖಾರದಪುಡಿ ಎರಚಿ ಮಚ್ಚು ದೊಣ್ಣೆಗಳಿಂದ ವ್ಯಕ್ತಿ ಕೊಲೆಗೆ ಯತ್ನ

ಕೋಲಾರ: ಕಣ್ಣಿಗೆ ಖಾರದಪುಡಿ ಎರಚಿ ಮಚ್ಚು ದೊಣ್ಣೆಗಳಿಂದ ವ್ಯಕ್ತಿಯ ಮೇಲೆ ಕೊಲೆಗೆ ಯತ್ನಿಸಿದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವಜ್ರನಾಗೇನಹಳ್ಳಿಯಲ್ಲಿ ನಡೆದಿದೆ. ಹೌದು, ನಾರಾಯಣಸ್ವಾಮಿ ಎಂಬುವವರು ವಜ್ರನಾಗೇನಹಳ್ಳಿ ಬಳಿ ಹೊಲದ‌ಲ್ಲಿ ಕೆಲಸ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಗಾಯಾಳು ನಾರಾಯಣಸ್ವಾಮಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ವ್ಯಕ್ತಿಯೋರ್ವ ಹೆಂಡತಿಗೆ ಹಲ್ಲೆ ಮಾಡೋ ದೃಶ್ಯ ಕಂಡು ಹಾರ್ಟ್ ಅಟ್ಯಾಕ್​ನಿಂದ ಪ್ರಾಣಬಿಟ್ಟ ಗಂಡ

ವಿಜಯನಗರ: ಹೊಸಪೇಟೆ ತಾಲೂಕಿನ ರಾಯರಕೇರೆ ಪ್ರದೇಶದ ಹೊಲದಲ್ಲಿದ್ದ ದನಕರುಗಳ ಮೇಲೆ ಚಿರತೆ ದಾಳಿ ನಡೆಸಿದೆ. ಕಟಗಿ ವಸಂತಪ್ಪ ಎಂಬುವವರಿಗೆ ಸೇರಿದ ಹಸುಗಳು ಇದಾಗಿದೆ. ಕಳೆದ ಸ್ವಲ್ಪ ದಿನಗಳಿಂದ ಐದು ಕುರಿ, ನಾಲ್ಕು ನಾಯಿಗಳನ್ನು ಹೊತ್ತೊಯ್ದಿದೆ ಚಿರತೆ, ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಬೆಳೆಯುತ್ರಿರೋ ರೈತರಿಗೆ ಚಿರತೆ ಕಾಟ ಹೆಚ್ಚಾಗಿದೆ. ಇನ್ನೂ ಸ್ವಲ್ಪ ದಿನಗಳು ಬಿಟ್ರೆ, ಹೊಸಪೇಟೆ ನಗರ, ಹಳ್ಳಿಗಳ ಭಾಗದಲ್ಲಿ ಚಿರತೆ ಎಂಟ್ರಿಯಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದು, ಕೂಡಲೇ ಚಿರತೆ ಸೆರೆ ಹಿಡಯಬೇಕು ಎಂದು ಒತ್ತಾಯ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:08 pm, Sun, 5 November 23