ಕೊಡವರಿಗೆ ಬಂದೂಕು ಲೈಸೆನ್ಸ್​ನಿಂದ ವಿನಾಯಿತಿ; ಹೈಕೋರ್ಟ್​​ನಲ್ಲಿ ನಡೆದ ವಿಚಾರಣೆಯ ವಿವರ ಇಲ್ಲಿದೆ

ಬಂದೂಕು ಕೊಡವರ ಪರಂಪರೆಯ ಭಾಗವಾಗಿದೆ. ಬಂದೂಕು ಪರಂಪರೆಗೆ 200 ವರ್ಷದ ಇತಿಹಾಸವಿದೆ.

ಕೊಡವರಿಗೆ ಬಂದೂಕು ಲೈಸೆನ್ಸ್​ನಿಂದ ವಿನಾಯಿತಿ; ಹೈಕೋರ್ಟ್​​ನಲ್ಲಿ ನಡೆದ ವಿಚಾರಣೆಯ ವಿವರ ಇಲ್ಲಿದೆ
ಕರ್ನಾಟಕ ಹೈಕೋರ್ಟ್


ಬೆಂಗಳೂರು: ಕೊಡವರಿಗೆ ಬಂದೂಕು ಲೈಸೆನ್ಸ್​ನಿಂದ ವಿನಾಯಿತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇಂದು ( ಸೆಪ್ಟೆಂಬರ್ 16) ಹೈಕೋರ್ಟ್​ನಲ್ಲಿ ನಡೆಯಿತು. ಕೊಡವರು‌ ಕರ್ನಾಟಕದ ವಿಶಿಷ್ಟ ಮಹತ್ವದ ಸಮುದಾಯ. ಜಾತಿಪದ್ಧತಿ, ಪುರೋಹಿತಶಾಹಿ ಕೊಡವರಲ್ಲಿಲ್ಲ. ಕಾವೇರಿ ನದಿ, ಶಸ್ತ್ರಾಸ್ತ್ರ ಪೂಜಿಸುತ್ತಾರೆ. ನಿರ್ದಿಷ್ಟ ರೈಫಲ್ಗಷ್ಟೇ ಅನುಮತಿ ನೀಡಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ.ನರಗುಂದ್ ವಾದ ಮಂಡಿಸಿದರು.

ಬಂದೂಕು ಕೊಡವರ ಪರಂಪರೆಯ ಭಾಗವಾಗಿದೆ. ಬಂದೂಕು ಪರಂಪರೆಗೆ 200 ವರ್ಷದ ಇತಿಹಾಸವಿದೆ. ಕೊಡವ ಮುಸ್ಲಿಂ ಮಾಪಿಳ್ಳೆಗಳಿಗೂ ಈ ಸವಲತ್ತಿದೆ. ಜಮ್ಮಾ ಭೂಮಿ‌ ಹೊಂದಿದವರಿಗೂ ವಿನಾಯಿತಿಯಿದೆ ಎಂದು ಹಿರಿಯ ವಕೀಲ ಎ.ಎಸ್.ಪೊನ್ನಣ್ಣ, ಸಜನ್‌ ಪೂವಯ್ಯ, ಧ್ಯಾನ್ ಚಿನ್ನಪ್ಪ, ಎಂ.ಟಿ.ನಾಣಯ್ಯ ಸಹ ವಾದ ಮಂಡಸಿದರು.

ವಾದಗಳನ್ನು ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿತು. ನಿವೃತ್ತ ಕ್ಯಾ. ವೈ.ಕೆ.ಚೇತನ್ ಸಲ್ಲಿಸಿದ್ದ ಕೊಡವರಿಗೆ ಬಂದೂಕು ಲೈಸೆನ್ಸ್ ವಿನಾಯಿತಿ ಪ್ರಶ್ನಿಸಿ ಪಿಐಎಲ್ ಸಲ್ಲಿಸಿದ್ದರು.

ಇದನ್ನೂ ಓದಿ: 

ಕೊಡಗು ಸ್ಪೆಷಲ್ ಚಿಕನ್ ಕೀಮಾ ಬಾಲ್; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

Netflix: ‘ಕ್ರೈಂ ಸ್ಟೋರೀಸ್: ಇಂಡಿಯಾ ಡಿಟೆಕ್ಟೀವ್ಸ್’ ಟ್ರೈಲರ್​ಗೆ ಕನ್ನಡಿಗರು ಬಹುಪರಾಕ್; ಏನು ವಿಶೇಷ? ಇಲ್ಲಿದೆ ಮಾಹಿತಿ

Read Full Article

Click on your DTH Provider to Add TV9 Kannada