ಕೊಡಗು, ಪ್ರವಾಸೋದ್ಯಮ (Tourism) ಜಿಲ್ಲೆಯಾಗಿ ಸಾಕಷ್ಟು ಹೆಸರು ಗಳಿಸಿದೆ. ಈ ಪ್ರವಾಸೋದ್ಯಮವನ್ನೇ ನಂಬಿಕೊಂಡು ಇಂದು ಅಲ್ಲಿ ಹಲವು ಉದ್ಯಮಗಳು ತಲೆ ಎತ್ತಿವೆ. ಅದ್ರಲ್ಲಿ ಟ್ಯಾಕ್ಸಿ ಬಿಸ್ನೆಸ್ ಕೂಡ ಒಂದು. ಆದ್ರೆ ಕೇರಳ ರಾಜ್ಯದ ಅಕ್ರಮ ಟ್ಯಾಕ್ಸಿ ವ್ಯವಹಾರ ( Kerala illegal taxis) ಕೊಡಗಿನ ಟ್ಯಾಕ್ಸಿಗಳ (Kodagu taxis) ಆದಾಯ ಕಿತ್ತುಕೊಳ್ಳುತ್ತಿರೋದು ಮಾತ್ರವಲ್ಲದೆ ರಾಜ್ಯಕ್ಕೆ ತೆರಿಗೆಯನ್ನೂ ವಂಚಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕೊಡಗು ಜಿಲ್ಲೆಗೆ ಬೇರೆ ಬೇರೆ ರಾಜ್ಯಗಳಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸ್ತಾರೆ. ಈ ಪ್ರವಾಸಿಗರನ್ನ ಕರೆದುಕೊಂಡು ಹೋಗಲೆಂದೇ ಜಿಲ್ಲೆಯಲ್ಲಿ ಏನಿಲ್ಲವೆಂದರೂ 600ಕ್ಕು ಅಧಿಕ ಟ್ಯಾಕ್ಸಿಗಳಿವೆ. ಪ್ರವಾಸೋಧ್ಯಮವನ್ನೇ ನಂಬಿ ಇವರೆಲ್ಲಾ ಸಾಲಸೋಲ ಮಾಡಿ ಕಾರು ಖರೀದಿಸಿ ಬದುಕು ನಡೆಸುತ್ತಿದ್ದಾರೆ. ಆದ್ರೆ ಇವರ ಹೊರ ರಾಜ್ಯಗಳ ಅಕ್ರಮ ಟ್ಯಾಕ್ಸಿಗಳು ಕೊಡಗು ಜಿಲ್ಲೆಯ ಟ್ಯಾಕ್ಸಿಗಳಿಗೆ ಅನ್ಯಾಯ ಮಾಡುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಕೇರಳದಿಂದ ಬರುವ ಟ್ಯಾಕ್ಸಿಗಳು ಕೊಡಗಿನಲ್ಲಿ ಬಹಳ ಕಡಿಮೆ ಬೆಲೆಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತವೆ. ಮಾತ್ರವಲ್ಲದೆ, ಕೇರಳದ ಟ್ಯಾಕ್ಸಿಗಳಿಗೆ ತೆರಿಗೆ ಹಾಕಲು ಕೊಗಿನಲ್ಲಿ ಎಲ್ಲಿಯೂ ಆರ್ಟಿಒ ಚೆಕ್ ಪೋಸ್ಟ್ ಕೂಡ ಇಲ್ಲ. ಹಾಗಾಗಿ ಕೊಡಗಿನ ಟ್ಯಾಕ್ಸಿಗಳಿಗೆ ಅನ್ಯಾಯ ಒಂದಾದ್ರೆ ಸರ್ಕಾರಕ್ಕೆ ನಿತ್ಯ ಲಕ್ಷಾಂತರ ರೂ ತೆರಿಗೆ ವಂಚನೆಯಾಗುತ್ತಿದೆ ಎಂಬ ಆರೋ ಕೇಳಿ ಬಂದಿದೆ.
ಅತ್ತ ಹೊರ ಜಿಲ್ಲೆಗಳಿಂದ ಒನ್ ವೇ ಟ್ರಿಪ್ ಬರುವ ಕಾರುಗಳು ಜಿಲ್ಲಯ ಟ್ಯಾಕ್ಸಿ ಚಾಲಕರಿಗೆ ಅನ್ಯಾಯ ಮಾಡುತ್ತಿದ್ದರೆ ಇತ್ತ ಹೊರ ರಾಜ್ಯದ ಟ್ಯಾಕ್ಸಿಗಳೂ ರಾಜ್ಯದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿವೆ. ಇದನ್ನ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಟ್ಯಾಕ್ಸಿ ಚಾಲಕರು ಆಗ್ರಹಿಸಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ