ರೈತರ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಅಧಿಕಾರಿಗಳು! ಉಚಿತ ವಿದ್ಯುತ್ ನೀಡುವ ಸಿದ್ದರಾಮಯ್ಯ ಸರ್ಕಾರದ ವಾಗ್ದಾನ ಏನಾಯಿತು?

| Updated By: ಸಾಧು ಶ್ರೀನಾಥ್​

Updated on: Feb 20, 2024 | 11:13 AM

ಬಜೆಟ್​ನಲ್ಲಿ ಇದರ ಬಗ್ಗೆ ವಿಷಯ ಪ್ರಸ್ತಾಪವಾಗಿಲ್ಲ. ಇದು ರೈತರನ್ನ ನಿರಾಶೆಗೆ ತಳ್ಳಿದೆ. ಇತ್ತ ಚೆಸ್ಕಾಂ ಅಧಿಕಾರಿಗಳು ರೈತರ ಮನೆಗಳಿಗೆ ತೆರಳಿ ಪಂಪ್​ಸೆಟ್​ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ. ಇದೀಗ ಕಾಫಿ ಹೂವು ಅರಳುವ ಸಮಯ. ಈ ಸಂದರ್ಭ ಅಗತ್ಯವಾಗಿ ತೋಟಕ್ಕೆ ನೀರು ಹಾಯಿಸಲೇಬೇಕು. ಇಂತಹ ಸಮಯದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ರೈತರ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಅಧಿಕಾರಿಗಳು! ಉಚಿತ ವಿದ್ಯುತ್ ನೀಡುವ ಸಿದ್ದರಾಮಯ್ಯ ಸರ್ಕಾರದ ವಾಗ್ದಾನ ಏನಾಯಿತು?
ರೈತರಿಗೆ ಉಚಿತ ವಿದ್ಯುತ್ ನೀಡುವ ಸಿದ್ದರಾಮಯ್ಯ ಸರ್ಕಾರದ ವಾಗ್ದಾನ ಏನಾಯಿತು?
Follow us on

ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಸಮಸ್ಯೆ ಮುಗಿಯುತ್ತಿಲ್ಲ. ಇವರ ಪಂಪ್​ ಸೆಟ್​ಗಳಿಗೆ ಸರ್ಕಾರ ಉಚಿತ ವಿದ್ಯುತ್ ನೀಡ್ತೇವೆ ಎನ್ನುತ್ತಿದೆ. ಆದ್ರೆ ಈಗಿನ ಬಜೆಟ್​ನಲ್ಲಿ ಮಾತ್ರ
ಉಚಿತ ವಿದ್ಯುತ್ ಬಗ್ಗೆ ಯಾವುದೇ ಘೋಷಣೆಗಳಾಗಿಲ್ಲ. ಹಾಗಾಗಿ ಕೊಡಗಿನ ಕಾಫಿ ಬೆಳೆಗಾರರು ಬಾಕಿ ಉಳಿಸಿಕೊಂಡಿರುವ ಲಕ್ಷಾಂತರ ರೂ ವಿದ್ಯುತ್ ಬಿಲ್​ ಪಾವತಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರ ಇದ್ದಾಗ ಕೊಡಗಿನ ಕಾಫಿ ಬೆಳೆಗಾರರ 10 ಹೆಚ್​ಪಿ ವರೆಗಿನ ಪಂಪ್ ಸೆಟ್​ಗಳಿಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿತ್ತು. ಆದ್ರೆ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಿಲ್ಲ. ಆದ್ರೂ ಕೊಡಗಿನ ಬೆಳೆಗಾರರು ಮಾತ್ರ ಇಂದು ಅಥವಾ ನಾಳೆ ಆದೇಶ ಬರಬಹುದು ಅಂತಾ ಕಾಯುತ್ತಲೇ ಇದ್ದರು. ಅದ್ರಲ್ಲೂ ಮೊನ್ನೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡುವಾಗಲಾದ್ರೂ ಈ ಬಾರಿ ಕೊಡಗಿನ ರೈತರಿಗೆ ಉಚಿತ ವಿದ್ಯುತ್ ಘೋಷಣೆ ಮಾಡುತ್ತಾರೆ ಎಂದೇ ಬಲವಾಗಿ ನಂಬಿದ್ದರು.

ಇದನ್ನೂ ಓದಿ: Golmaal officer suspended: ಸಮಾಜ ಕಲ್ಯಾಣ ಇಲಾಖೆಯ ಭ್ರಷ್ಟ ಅಧಿಕಾರಿ ಕೊನೆಗೂ ಅಮಾನತು, ಇನ್ನಷ್ಟು ತನಿಖೆ ಆದ್ರೆ ಮತ್ತಷ್ಟು ಗೋಲ್ ಮಾಲ್ ಬಯಲಾಗುತ್ತೆ

ಆದ್ರೆ ಬಜೆಟ್​ನಲ್ಲಿ ಮಾತ್ರ ಇದರ ಬಗ್ಗೆ ಯಾವುದೇ ವಿಷಯ ಪ್ರಸ್ತಾಪವಾಗಿಲ್ಲ. ಇದು ರೈತರನ್ನ ನಿರಾಶೆಗೆ ತಳ್ಳಿದೆ. ಇತ್ತ ಚೆಸ್ಕಾಂ ಅಧಿಕಾರಿಗಳು ಮಾತ್ರ ರೈತರ ಮನೆಗಳಿಗೆ ತೆರಳಿ ಪಂಪ್​ಸೆಟ್​ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ. ಇದೀಗ ಕಾಫಿ ಹೂವು ಅರಳುವ ಸಮಯ. ಈ ಸಂದರ್ಭ ಅಗತ್ಯವಾಗಿ ತೋಟಕ್ಕೆ ನೀರು ಹಾಯಿಸಲೇಬೇಕು. ಇಂತಹ ಸಮಯದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರ ಕಾಫಿಯನ್ನ ಹೊರತುಪಡಿಸಿ ಉಳಿದೆಲ್ಲಾ ಬೆಳೆಗಳಿಗೆ ಉಚಿತ ವಿದ್ಯುತ್ ನೀಡಿದೆ. ಅಡಿಕೆ, ತೆಂಗು, ಮಾವು ಬೆಳೆಯುವ ರೈತರು ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಆದ್ರೆ ಕಾಫಿ ಬೆಳೆಗಾರರಿಗೆ ಮಾತ್ರ ಭಾರೀ ಅನ್ಯಾಯ ಮಾಡ್ತಾ ಇದ್ದಾರೆ ಎನ್ನುವುದು ರೈತರ ಆಕ್ರೋಶ. ಉಚಿತ ವಿದ್ಯುತ್ ಗಾಗಿ ಕಳೆದ ಐದು ವರ್ಷಗಳಿಂದ ರೈತರು ಬೇಡಿಕೆ ಸಲ್ಲಿಸುತ್ತಲೇ ಇದ್ದಾರೆ. ಆದ್ರೆ ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ. ಹಾಗಾಗಿ ಈಗಾಗಲೇ ಭಾರೀ ನಷ್ಟದಲ್ಲಿರೋ ಕಾಫಿ ಉದ್ಯಮ ಮತ್ತಷ್ಟು ಹೊಡೆತ ತಿನ್ನುತ್ತಿದೆ ಅನ್ನೋದು ಇವರ ಅಸಮಾಧಾನ.

Also Read: ಕೈಕೊಟ್ಟ ರೀಲ್ಸ್ ಸುಂದರಿ! ಶಿವಮೊಗ್ಗ ಯುವಕನಿಗೆ ಬ್ಯಾಂಕ್​ ಉದ್ಯೋಗಿ ಲವ್ ಮ್ಯಾರೇಜ್ ದೋಖಾ, 20 ಲಕ್ಷ ವಂಚನೆ ದೂರು ದಾಖಲು

ಕೆಲ ತಿಂಗಳ ಹಿಂದೆ ಸಂಸದ ಪ್ರತಾಪ್ ಸಿಂಹ ಕೂಡ ಕೊಡಗಿನ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಲಾಗುವುದು ಅಂತ ಭರವಸೆ ನೀಡಿದ್ದರು. ಅತ್ತ ನೂತನ ಶಾಸಕರಾದ ಎಎಸ್ ಪೊನ್ನಣ್ಣ ಹಾಗೂ ಮಂಥರ್ ಗೌಡ ಕೂಡ ಉಚಿತ ವಿದ್ಯುತ್ ಬಗ್ಗೆ ಜಾಣ ಮೌನ ವಹಿಸಿದ್ದಾರೆ. ಹಾಗಾಗಿ ಸಧ್ಯ ಕೊಡಗಿನ ರೈತರು ಅತಂತ್ರರಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:09 am, Tue, 20 February 24