AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈಕೊಟ್ಟ ರೀಲ್ಸ್ ಸುಂದರಿ! ಶಿವಮೊಗ್ಗ ಯುವಕನಿಗೆ ಬ್ಯಾಂಕ್​ ಉದ್ಯೋಗಿ ಲವ್ ಮ್ಯಾರೇಜ್ ದೋಖಾ, 20 ಲಕ್ಷ ವಂಚನೆ ದೂರು ದಾಖಲು

ಆರಂಭದ ಒಂದೆರಡು ತಿಂಗಳು ಸಂಸಾರ ಮಾಡಿ ಬಳಿಕ ಯುವತಿಯು ತನ್ನ ಅಸಲಿ ಆಟ ಶುರುವಿಟ್ಟುಕೊಂಡಿದ್ದಾಳೆ. ಯುವಕನ ಜೊತೆ ಕಿರಿಕ್ ಮಾಡಿ ಸುಂದರಿಯು ಕೈಕೊಟ್ಟಿದ್ದಾಳೆ. ಪದೇ ಪದೇ ಯುವಕನಿಗೆ ನೀನು ಕೀಳು ಜಾತಿ ಹೀಯಾಳಿಸುತ್ತಿದ್ದಳಂತೆ. ಪ್ರೀತಿಸಿ ಮದುವೆಯಾದ ಬಳಿಕ ಮತ್ತೊಬ್ಬ ಯುವಕನ ಜೊತೆ ಓಡಾಟ ಶುರುವಾಗಿತ್ತಂತೆ. ಯುವತಿ ಕುಟುಂಬದವರು ಸುಮಾರು 20 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆಂದು ಯುವಕನು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾನೆ.

ಕೈಕೊಟ್ಟ ರೀಲ್ಸ್ ಸುಂದರಿ! ಶಿವಮೊಗ್ಗ ಯುವಕನಿಗೆ ಬ್ಯಾಂಕ್​ ಉದ್ಯೋಗಿ ಲವ್ ಮ್ಯಾರೇಜ್ ದೋಖಾ, 20 ಲಕ್ಷ ವಂಚನೆ ದೂರು ದಾಖಲು
ಕೈಕೊಟ್ಟ ರೀಲ್ಸ್ ಸುಂದರಿ! ಶಿವಮೊಗ್ಗ ಯುವಕನಿಗೆ ಬ್ಯಾಂಕ್​ ಉದ್ಯೋಗಿ ಲವ್ ದೋಖಾ
Basavaraj Yaraganavi
| Edited By: |

Updated on:Feb 19, 2024 | 7:54 AM

Share

ಕಳೆದ ಆರು ತಿಂಗಳ ಹಿಂದೆ ಪರಸ್ಪರ ಪ್ರೀತಿಸಿ ಆ ಇಬ್ಬರೂ ಮದುವೆಯಾಗಿದ್ದರು. ಅವಳ ಸೌಂದರ್ಯಕ್ಕೆ ಶಿವಮೊಗ್ಗದ ಯುವಕ (Shivamogga youth) ಕ್ಲೀನ್ ಬೋಲ್ಡ್ ಆಗಿದ್ದ. ಇಂತಹ ಪ್ರೀತಿಯ ಸಮ್ಮುಖದಲ್ಲಿ ಇಬ್ಬರೂ ಪ್ರೀ ವೆಡ್ಡಿಂಗ್ ಶೂಟ್ ಮಾಡಿಕೊಂಡು, ಬಳಿಕ ಎಲ್ಲರ ಸಮ್ಮುಖದಲ್ಲಿ ಮ್ಯಾರೇಜ್ ಆಗಿದ್ದರು (love marriage). ಇಬ್ಬರದ್ದು ಬೇರೆ ಬೇರೆ ಜಾತಿ. ಅದನ್ನು ಮೀರಿ ಪ್ರೀತಿ ಇಬ್ಬರನ್ನು ಒಂದು ಮಾಡಿತ್ತು… ಆದ್ರೆ ಮದುವೆಯಾದ ಬಳಿಕ ಯುವತಿಯು ತನ್ನ ಪ್ರಿಯತಮನಿಗೆ ಕೈಕೊಟ್ಟು ಹೋಗಿದ್ದಾಳೆ…ರೀಲ್ಸ್ ಸುಂದರಿಯ ದೋಖಾ ಕುರಿತು ಒಂದು ವರದಿ ಇಲ್ಲಿದೆ.

ಅವಳು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ (bank employee) ಉದ್ಯೋಗಿ. ಹೊಸನಗರ ತಾಲೂಕಿನ ನಗರ ಸಮೀಪದ ಹೆಂಡೆಗದ್ದೆ ಗ್ರಾಮದ ಸನ್ನಿಧಿ ನಿವಾಸಿ. ಶಿವಮೊಗ್ಗದಲ್ಲಿ ಉದ್ಯೋಗ ಮಾಡುವ ಸಂದರ್ಭದಲ್ಲಿ ಶಿವಮೊಗ್ಗ ನಗರದ ಸಂಕೇತ್ ಯುವಕನ ಜೊತೆ ಪರಿಚಯವಾಗಿದೆ. ಸನ್ನಿಧಿಯ ಮೊದಲ ನೋಟದಲ್ಲಿ ಈತ ಕ್ಲೀನ್ ಬೋಲ್ಡ್ ಆಗಿದ್ದ. ಯುವತಿ ಅಂದ ಚೆಂದ ನೋಡಿದ ಬಳಿಕ ಅವಳನ್ನು ಗಾಢವಾಗಿ ಪ್ರೀತಿಸಿದ್ದಾನೆ. ಯುವತಿಯು ಸಹ ಯುವಕನ ಪ್ರೀತಿಗೆ ಗ್ರೀನ್ ಸಿಗ್ನಲ್ ತೋರಿಸಿದ್ದಾಳೆ.

ಹೀಗೆ ಲವ್ ಆದ ಬಳಿಕ ಇಬ್ಬರೂ ಮದುವೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅದಕ್ಕೂ ಮೊದಲು ಕಾಂತಾರ ಚಿತ್ರದ ಹಾಡಿಗೆ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿದ್ದರು. ಇಬ್ಬರೂ ಪ್ರಣಯ ಪಕ್ಷಿಗಳಂತೆ ಸುತ್ತಾಡಿದ್ದಾರೆ. ತಮ್ಮ ಪ್ರೀತಿಯನ್ನು ಮುಂದುವರಿಯಲು ಬಿಟ್ಟು ಇಬ್ಬರೂ ಪರಸ್ಪರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಂತಹ ಸುಂದರ ಯುವತಿಯು ತನ್ನ ಮಡದಿಯಾಗಿ ಸಿಕ್ಕಲು ತಾನೇನು ಪುಣ್ಯ ಮಾಡಿದ್ದೆನೋ ಅಂತಾ ಯುವಕ ಫುಲ್ ಖುಷ್ ಆಗಿದ್ದ. ಆಕಾಶಕ್ಕೆ ಮೂರೇ ಹೆಜ್ಜೆ ಎನ್ನುವಷ್ಟು ಯುವಕನಲ್ಲಿ ಸಂತಸ ತುಂಬಿತುಳುಕಿದೆ. ಆದ್ರೆ ಇವರ ಪ್ರೀತಿಯ ಮದುವೆ ಆಯುಷ್ಯ ತುಂಬಾ ಕಡಿಮೆ ಎನ್ನುವುದು ಯುವಕನಿಗೆ ಆ ತಕ್ಷಣಕ್ಕೆ ಗೊತ್ತಾಗಲೇ ಇಲ್ಲ.

ಯುವಕ ಎಸ್ಸಿಗೆ ಸೇರಿದ್ರೆ ಯುವತಿ ಒಕ್ಕಲಿಗರ ಜಾತಿಗೆ ಸೇರಿದವಳು. ಜಾತಿ ಮೀರಿ ಇಲ್ಲಿ ಪ್ರೇಮಾಂಕುರವಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಮದುವೆಯಾದ ಬಳಿಕ ಯುವತಿಯು ತನ್ನ ಅಸಲಿ ವರಸೆ ತೋರಿಸಿದ್ದಾಳೆ. ಯುವಕನ ಬಳಿಯಿದ್ದ ಹಣ ನೋಡಿ ಯುವತಿಯು ಇಲ್ಲಿ ಲವ್ ಮಾಡಿದ್ದಾಳಂತೆ. ಹಣಕ್ಕಾಗಿ ಮದುವೆಯಾಗೋದು ಅವಳ ಖಯಾಲಿಯಂತೆ. ಮದುವೆಯಾದ ಬಳಿಕ ಯುವತಿಯು ಕೆಲ ತಿಂಗಳ ಸಂಸಾರ ಮಾಡಿ ಯುವಕನಿಗೆ ಬರೋಬರಿ 20 ಲಕ್ಷ ರೂಪಾಯಿ ಮೋಸ ಮಾಡಿದ್ದಾಳೆ.

ಹಣಕ್ಕಾಗಿ ಪ್ರೀತಿಸಿ ಮದುವೆಯಾಗುವುದಾಗಿ ನಾಟಕವಾಡಿ ಮೋಸ ಮಾಡಿದ್ದಾಳಂತೆ. ಈ ಯುವಕನೊಬ್ಬನೇ ಅಲ್ಲ; ಇನ್ನೂ ಬೇರೆ ಬೇರೆ ಯುವಕರ ಜೊತೆಯೂ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಸನ್ನಿಧಿ ಈಗ ಆರೋಪ ಮಾಡುತ್ತಿದ್ದಾನೆ! ಬೇರೆ ಯುವಕರ ಜೊತೆ ಸಂಬಂಧ ಇರುವ ಬಗ್ಗೆ ಅವಳ ಮೊಬೈಲ್ ಮೂಲಕ ಯುವಕನಿಗೆ ಮಾಹಿತಿ ಸಿಕ್ಕಿತ್ತಂತೆ. ಸನ್ನಿಧಿ ಮತ್ತು ಸಂಕೇತ್ ಇಬ್ಬರು ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಮದುವೆಯಾಗಿದ್ದರು.

ಆರಂಭದ ಒಂದೆರಡು ತಿಂಗಳು ಸಂಸಾರ ಮಾಡಿ ಬಳಿಕ ಯುವತಿಯು ತನ್ನ ಅಸಲಿ ಆಟ ಶುರುವಿಟ್ಟುಕೊಂಡಿದ್ದಾಳೆ. ಯುವಕನ ಜೊತೆ ಕಿರಿಕ್ ಮಾಡಿ ಸುಂದರಿಯು ಕೈಕೊಟ್ಟಿದ್ದಾಳೆ. ಪದೇ ಪದೇ ಯುವಕನಿಗೆ ನೀನು ಕೀಳು ಜಾತಿ ಹೀಯಾಳಿಸುತ್ತಿದ್ದಳಂತೆ. ಮದುವೆಯಾದ ಬಳಿಕ ಮತ್ತೊಬ್ಬ ಯುವಕನ ಜೊತೆ ಓಡಾಟ ಶುರುವಾಗಿತ್ತಂತೆ.

ಈ ಹಿಂದೆಯೂ ಕಡೂರು ಮೂಲದ ಯುವಕನ ಜೊತೆ ಸನ್ನಿಧಿ ಮದುವೆಯಾಗಿದ್ದಳಂತೆ. ಲವ್ ಮಾಡಿ ಹಣ ಕೀಳೋದು ಇವಳ ಖಯಾಲಿಯಂತೆ. ಯುವತಿಯು ಚಾಲಾಕತನದಿಂದ ಯುವಕನ ಖಾತೆಯಿಂದ ಆರು ಲಕ್ಷ ರೂಪಾಯಿ ಎಗರಿಸಿದ್ದಾಳೆ. ಹಾಗೂ ಒಂದಷ್ಟು ಒಡವೆಗಳನ್ನು ಯುವತಿಯ ತಾಯಿ ತೆಗೆದುಕೊಂಡು ಹೋಗಿದ್ದಾರಂತೆ. ಅದಾದಮೇಲೆ ತವರು ಮನೆ ಸೇರಿಕೊಂಡ ಯುವತಿ ವಾಪಸ್ ಬಂದಿಲ್ಲವಂತೆ. ಬರೋಬರಿ 20 ಲಕ್ಷಕ್ಕೂ ಅಧಿಕ ವಂಚನೆ ಮಾಡಿದ್ದಾರೆಂದು ಯುವಕನು ಯುವತಿ ಮತ್ತು ಆವಳ ತಂದೆ-ತಾಯಿ, ಅಣ್ಣನ ವಿರುದ್ಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾನೆ. ಇನ್ನು ಈತ ದೂರು ಕೊಟ್ಟ ಬಳಿಕ ಯುವತಿಯು ಯುವಕನ ಮೇಲೆ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾಳೆ. ಸದ್ಯ ಎರಡೂ ಕಡೆಯಿಂದ ದೂರು ದಾಖಲಾಗಿದ್ದು, ಪೊಲೀಸರು ಯಾವ ಕ್ರಮಕ್ಕೆ ಮುಂದಾಗುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:52 am, Mon, 19 February 24