ಕೊಡಗು: ಸಂಭ್ರಮ ಸಡಗರದಿಂದ ನಡೆದ ಹುತ್ತರಿ ಹಬ್ಬದ ಆಚರಣೆ
ವಿಶಿಷ್ಟ ಸಂಸ್ಕೃತಿಗಳ ತವರೂರಾಗಿರುವ ಕೊಡಗು ಜಿಲ್ಲೆಯ ಆಚಾರ ವಿಚಾರಗಳನ್ನ ನೋಡೋದೇ ಒಂದು ಚಂದ ಅದರಲ್ಲೂ ಹುತ್ತರಿ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆ ನಡೆಯುವ ಹುತ್ತರಿ ಕೋಲಾಟ ಎಂಬ ಕಾರ್ಯಕ್ರಮ ನೋಡುಗರ ಕಣ್ಮನ ಸೂರೆಗೊಳ್ಳುತ್ತದೆ.
ಮಡಿಕೇರಿ: ಜಿಲ್ಲೆಯ ವಿವಿಧೆಡೆ ಡಿ.7 ರಂದು ಹುತ್ತರಿ ಹಬ್ಬ ನಡೆದಿದ್ದು. ಕೊಡಗಿನ ಮೂಲ ನಿವಾಸಿಗಳೆಲ್ಲ ಭತ್ತದ ಗದ್ದೆಗೆ ತೆರಳಿ ಧಾನ್ಯ ಲಕ್ಷ್ಮಿಯನ್ನ ಪೂಜಿಸಿ ಸಡಗರ ಸಂಭ್ರಮದಿಂದ ಮನೆಗೆ ಬರಮಾಡಿಕೊಂಡಿದ್ದಾರೆ. ಇದಾದ ಬಳಿಕ ಹುತ್ತರಿ ಹಬ್ಬದ ಮರುದಿನ ಮಡಿಕೇರಿ ಕೊಟೆ ಆವರಣದಲ್ಲಿ ಪಾಂಡಿರ ಕುಟುಂಬಸ್ಥರಿಂದ ಹುತ್ತರಿ ಕೋಲಾಟ ಸಂಭ್ರಮ ನಡೆಯುತ್ತದೆ. ಪುರುಷರು, ಮಕ್ಕಳು ಕೋಲಾಟ, ಕತ್ತಿಯಾಟ, ಪರೆ ಕಳಿ, ಪೀಲಿಯಾಟ ಆಡಿದರೆ, ಮಹಿಳೆಯರು ಉಮ್ಮತ್ತಾಟ್ ಆಡಿ ಸಂಭಮಿಸಿದರು. ಈ ನೃತ್ಯವನ್ನು ಕೊಡಗಿನ ಕುಲದೇವಿ ಕಾವೇರಿ ಮಾತೆ ಮತ್ತು ಪ್ರಕೃತಿಯನ್ನ ಸ್ತುತಿಸಿ ಆಡಲಾಗುತ್ತದೆ. ಹೀಗೆ ಹಲವು ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 09, 2022 01:02 PM
Latest Videos