ಕೊಡಗು: ಕೊರೊನಾ ವಾರಿಯರ್ಸ್​ಗೆ ಊಟ ಪೂರೈಸಿದ್ದ ಹೋಟೆಲ್ ಮಹಿಳೆಗೆ ಕಿರುಕುಳ; ಅಧಿಕಾರಿಗಳ ವಿರುದ್ಧ ಆರೋಪ

| Updated By: sandhya thejappa

Updated on: Sep 29, 2021 | 2:57 PM

ತನ್ನ ಮಗ ಸಾವನ್ನಪ್ಪಿದ ನೋವಿನ ಸಂದರ್ಭದಲ್ಲೂ ಮಾನವೀಯತೆಯಿಂದ ಅಧಿಕಾರಿಗಳಿಗೆ ಊಟ ಪೂರೈಸಿದ್ದೆ. ಆದರೆ ಅಧಿಕಾರಿಗಳು ಮಾತ್ರ ಇದೀಗ ಹಣ ನೀಡದೆ ಕಿರುಕುಳ ನೀಡುತ್ತಿದ್ದಾರೆ ಅಂತ ಆರೋಪಿಸಿದ್ದಾರೆ.

ಕೊಡಗು: ಕೊರೊನಾ ವಾರಿಯರ್ಸ್​ಗೆ ಊಟ ಪೂರೈಸಿದ್ದ ಹೋಟೆಲ್ ಮಹಿಳೆಗೆ ಕಿರುಕುಳ; ಅಧಿಕಾರಿಗಳ ವಿರುದ್ಧ ಆರೋಪ
ಹೋಟೆಲ್
Follow us on

ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶಿರಂಗಾಲ ಗ್ರಾಮದಲ್ಲಿ ಸಣ್ಣ ಹೋಟೆಲ್ ನಡೆಸುತ್ತಿರುವ ಆಶಾ ಎಂಬುವರು ಅಧಿಕಾರಿಗಳ ವಿರುದ್ಧ ಕಿರುಕುಳ ನೀಡಿರುವ ಆರೋಪ ಮಾಡಿದ್ದಾರೆ. ಕೊರೊನಾ ಲಾಕ್​ಡೌನ್​ ಅವಧಿಯಲ್ಲಿ ಇವರು ಚೆಕ್ ಪೋಸ್ಟ್ ಕರ್ತವ್ಯದಲ್ಲಿದ್ದ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಸೇರಿದಂತೆ ಕೊರೊನಾ ವಾರಿಯರ್ಸ್​ಗೆ ಊಟ ಪೂರೈಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರತಿ ತಿಂಗಳು ಸರ್ಕಾರದಿಂದ ಹಣವನ್ನೂ ಪಡೆದಿದ್ದಾರೆ. ಆದರೆ ಇದೀಗ ಕಳೆದ ಎರಡು ತಿಂಗಳಿನಿಂದ ಸುಮಾರು 43 ಸಾವಿರ ರೂ. ಬಿಲ್ ಮೊತ್ತ ಪಡೆಯಲು ಬಾಕಿ ಇದೆ. ಸ್ಥಳೀಯ ಗ್ರಾಮ ಪಂಚಾಯಿತಿ ಗ್ರಾಮಲೆಕ್ಕಿಗರಾಗಿರುವ ಉಷಾ ಎಂಬುವರು ಬಿಲ್ ಬಿಡುಗಡೆ ಮಾಡದೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೋಟೆಲ್ ಮಾಲಕಿ ಆಶಾ ಆರೋಪಿಸಿದ್ದಾರೆ.

ತನ್ನ ಮಗ ಸಾವನ್ನಪ್ಪಿದ ನೋವಿನ ಸಂದರ್ಭದಲ್ಲೂ ಮಾನವೀಯತೆಯಿಂದ ಅಧಿಕಾರಿಗಳಿಗೆ ಊಟ ಪೂರೈಸಿದ್ದೆ. ಆದರೆ ಅಧಿಕಾರಿಗಳು ಮಾತ್ರ ಇದೀಗ ಹಣ ನೀಡದೆ ಕಿರುಕುಳ ನೀಡುತ್ತಿದ್ದಾರೆ ಅಂತ ಆರೋಪಿಸಿದ್ದಾರೆ. ಇದೀಗ ಹೋಟೆಲ್ ನಡೆಸಲು ಹಣವಿಲ್ಲದೆ ಹೋಟೆಲ್ ಮುಚ್ಚುವ ಪರಿಸ್ಥಿತಿ ಬಂದಿದೆ ಎಂದು ಗೋಳಾಡುತ್ತಿದ್ದಾರೆ. ಅಧಿಕಾರಿಗಳ ವರ್ತನೆಗೆ ಶಿರಂಗಾಲ ಗ್ರಾಮಸ್ಥರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಲ್ ಪಾವತಿಸುವ ಭರವಸೆ ನೀಡಿದ ತಹಶೀಲ್ದಾರ್
ಪ್ರಕರಣ ಕುರಿತು ಟಿವಿ9 ಗೆ ಪ್ರತಿಕ್ರಿಯೆ ನೀಡಿರುವ ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು, ಹೋಟೆಲ್ ಬಿಲ್ ತಕ್ಷಣವೇ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ

ವದಂತಿ ವಿಚಾರದಲ್ಲಿ ಮೌನ ಮುರಿದ ಸಮಂತಾ ಅಕ್ಕಿನೇನಿ; ಅಭಿಮಾನಿಗಳಿಗೆ ಎಲ್ಲವನ್ನೂ ಸ್ಪಷ್ಟಪಡಿಸಿದ ನಟಿ

ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಮುಳ್ಳಿನ ಪೊದೆಯಲ್ಲಿ ಸಿಲುಕಿ ಪ್ರಾಣಾಪಾಯದಿಂದ ಪಾರು, ಮಗುವಿಗಾಗಿ ಶೋಧ

(Kodagu woman accused against official of not paying money)

Published On - 2:49 pm, Wed, 29 September 21