ವದಂತಿ ವಿಚಾರದಲ್ಲಿ ಮೌನ ಮುರಿದ ಸಮಂತಾ ಅಕ್ಕಿನೇನಿ; ಅಭಿಮಾನಿಗಳಿಗೆ ಎಲ್ಲವನ್ನೂ ಸ್ಪಷ್ಟಪಡಿಸಿದ ನಟಿ

ಸಮಂತಾ ಅಕ್ಕಿನೇನಿ ಸದ್ಯ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಅವರು ಕೆಲ ಕಾಲ ಚಿತ್ರರಂಗದಿಂದ ಬ್ರೇಕ್​ ಪಡೆಯಲಿದ್ದಾರೆ ಎನ್ನಲಾಗಿತ್ತು. ಆದರೆ, ಇದು ಸುಳ್ಳು ಎನ್ನುತ್ತಿವೆ ಕೆಲ ಮೂಲಗಳು.

ವದಂತಿ ವಿಚಾರದಲ್ಲಿ ಮೌನ ಮುರಿದ ಸಮಂತಾ ಅಕ್ಕಿನೇನಿ; ಅಭಿಮಾನಿಗಳಿಗೆ ಎಲ್ಲವನ್ನೂ ಸ್ಪಷ್ಟಪಡಿಸಿದ ನಟಿ
ಸಮಂತಾ ಅಕ್ಕಿನೇನಿ
TV9kannada Web Team

| Edited By: Rajesh Duggumane

Sep 29, 2021 | 2:36 PM

ಸಮಂತಾ ಅಕ್ಕಿನೇನಿ ಇತ್ತೀಚೆಗೆ ಸಾಕಷ್ಟು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಕೆಲ ಮಾಧ್ಯಮಗಳು  ಅವರ ವಿಚ್ಛೇದನದ ವದಂತಿ ಬಗ್ಗೆ ಮನಬಂದಂತೆ ಸುದ್ದಿ ಬಿತ್ತರ ಮಾಡುತ್ತಿವೆ. ಇದರಲ್ಲಿ ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಎಂಬುದು ಅಭಿಮಾನಿಗಳಿಗೆ ಪ್ರಶ್ನೆಯಾಗಿದೆ. ಈಗ ಅವರು ಕೆಲ ವದಂತಿಗೆ ಫುಲ್​ ಸ್ಟಾಪ್​ ಹಾಕಿದ್ದಾರೆ.

ಸಮಂತಾ ಅಕ್ಕಿನೇನಿ ಸದ್ಯ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಅವರು ಕೆಲ ಕಾಲ ಚಿತ್ರರಂಗದಿಂದ ಬ್ರೇಕ್​ ಪಡೆಯಲಿದ್ದಾರೆ ಎನ್ನಲಾಗಿತ್ತು. ಆದರೆ, ಇದು ಸುಳ್ಳು ಎನ್ನುತ್ತಿವೆ ಕೆಲ ಮೂಲಗಳು. ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ನಲ್ಲಿ ನಟಿಸಿದ ನಂತರ ಅವರಿಗೆ ಬಾಲಿವುಡ್​ ಕಡೆಯಿಂದ ಆಫರ್​ಗಳು ಬರುತ್ತಿವೆ ಎನ್ನಲಾಗಿದೆ. ಇದರಲ್ಲಿ ಕೆಲವನ್ನು ಸಮಂತಾ ಒಪ್ಪಿಕೊಂಡಿದ್ದಾರೆ. ಇವು ಹಿಟ್​ ಆದರೆ ಬಾಲಿವುಡ್​ನಲ್ಲೇ ಅವರು ಮುಂದುವರಿಯಲಿದ್ದಾರೆ. ಇದಕ್ಕಾಗಿ ಅವರು ಮುಂಬೈಗೆ ಶಿಫ್ಟ್​ ಆಗಲಿದ್ದಾರೆ ಎನ್ನುವ ಸುದ್ದಿ ಬಿತ್ತರವಾಗಿದೆ. ಈ ವಿಚಾರದ ಬಗ್ಗೆ ಸಮಂತಾಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಸಮಂತಾ ನೇರವಾಗಿ ಉತ್ತರಿಸಿದ್ದಾರೆ.

ಸಮಂತಾ ಅಕ್ಕಿನೇನಿ ಹುಟ್ಟಿದ್ದು ಚೆನ್ನೈನಲ್ಲಿ. ಆದರೆ, ಅವರು ಹೆಚ್ಚು ಗುರುತಿಸಿಕೊಂಡಿದ್ದು ಟಾಲಿವುಡ್​ನಲ್ಲಿ. ಹೀಗಾಗಿ, ಹೈದರಾಬಾದ್​ ಅವರ ಮನೆ ಎಂದು ಪರಿಗಣಿಸಿದ್ದಾರೆ. ಈಗ ಮುಂಬೈಗೆ ಅವರು ತೆರಳಲಿದ್ದಾರೆ ಎನ್ನುವ ವಿಚಾರ ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ.  ಈ ಬಗ್ಗೆ ಸಮಂತಾ ಅವರನನ್ನು ಪ್ರಶ್ನಿಸಬೇಕು ಎಂದುಕೊಂಡಿದ್ದರು. ಇದಕ್ಕೆ ಸಮಂತಾ ಅವಕಾಶ ನೀಡಿದ್ದರು. ಈ ವೇಳೆ ಅವರು ಮುಂಬೈಗೆ ಶಿಫ್ಟ್​ ಆಗುವ ಬಗ್ಗೆ ಉತ್ತರ ನೀಡಿದ್ದಾರೆ.

‘ಈ ವದಂತಿ ಎಲ್ಲಿ ಹುಟ್ಟಿಕೊಂಡಿತು ಎನ್ನುವ ಬಗ್ಗೆ ನನಗೆ ಗೊತ್ತಿಲ್ಲ. ಉಳಿದ ನೂರು ವದಂತಿಗಳಂತೆ ಇದೂ ಕೂಡ ಸುಳ್ಳು. ಹೈದರಾಬಾದ್​ ನನ್ನ ಮನೆ. ನಾನು ಇದನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಹೈದರಾಬಾದ್​ ನನಗೆ ಎಲ್ಲವನ್ನೂ ನೀಡಿದೆ. ನಾನು ಇಲ್ಲೇ ಉಳಿದುಕೊಳ್ಳಲು ಇಷ್ಟಪಡುತ್ತೇನೆ’ ಎಂದಿದ್ದಾರೆ ಅವರು. ಈ ಮೂಲಕ ಅವರು ಒಂದು ವದಂತಿಗೆ ಬ್ರೇಕ್​ ಹಾಕಿದ್ದಾರೆ. ಸಮಂತಾ-ನಾಗ ಚೈತನ್ಯ ವಿಚ್ಛೇದನ ವದಂತಿಗೆ ಈ ವರೆಗೆ ಯಾರಿಂದಲೂ ಸ್ಪಷ್ಟನೆ ಸಿಕ್ಕಿಲ್ಲ. ಈ ವಿಚಾರದಲ್ಲಿ ಅಭಿಮಾನಿಗಳಿಗೆ ಸ್ಪಷ್ಟನೆ ಸಿಗಬೇಕಿತ್ತು.

ಇದನ್ನೂ ಓದಿ: ಆಮಿರ್​ ಖಾನ್​​ಗೆ ವಿಶೇಷ ಪಾರ್ಟಿ ಕೊಟ್ಟ ನಾಗ ಚೈತನ್ಯ; ಸಮಂತಾ ಅಕ್ಕಿನೇನಿ ಮಿಸ್ಸಿಂಗ್​

ನಾಗ ಚೈತನ್ಯ-ಸಾಯಿ ಪಲ್ಲವಿ ಪಾಲಿಗೆ ಇದು ಬಿಗ್​ ಡೇ; ಈಗಲಾದರೂ ಬರುತ್ತಾರಾ ಸಮಂತಾ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada